ETV Bharat / sports

ಮದುವೆಗೂ ಮೊದಲೇ ಆಲ್‌ರೌಂಡರ್‌ ಆಟ.. ಹಾರ್ದಿಕ್‌ ಪಾಂಡ್ಯಾಗೆ ಅಪ್ಪನಾಗ್ತಿರುವ ಖುಷಿ!!

author img

By

Published : May 31, 2020, 10:23 PM IST

ಗಾಯದ ಕಾರಣದಿಂದ ಭಾರತ ತಂಡದಿಂದ ಕೆಲವು ತಿಂಗಳಿಂದ ದೂರವಿರುವ ಹಾರ್ದಿಕ್​ ಪಾಂಡ್ಯ ಈ ವರ್ಷದ ಜನವರಿಯಲ್ಲಿ ಬಾಲಿವುಡ್​ ನಟಿ ನತಾಶಾರ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರು.

Hardik Pandya, Natasa Stankovic announce pregnancy, share pic
Hardik Pandya, Natasa Stankovic announce pregnancy, share pic

ಮುಂಬೈ: ಭಾರತ ತಂಡದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾ ಹಾಗೂ ಸರ್ಬಿಯನ್​ ಮೂಲದ ಬಾಲಿವುಡ್​ ನಟಿ ನತಾಶಾ ಸ್ಟ್ಯಾಂಕೋವಿಕ್​ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದು, ಮದುವೆಗೂ ಮುನ್ನವೇ ತಂದೆ-ತಾಯಿಯಾಗಲಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಗಾಯದ ಕಾರಣದಿಂದ ಭಾರತ ತಂಡದಿಂದ ಕೆಲವು ತಿಂಗಳಿಂದ ದೂರವಿರುವ ಹಾರ್ದಿಕ್​ ಪಾಂಡ್ಯ ಈ ವರ್ಷದ ಜನವರಿಯಲ್ಲಿ ಬಾಲಿವುಡ್​ ನಟಿ ನತಾಶರ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರು. ಇದೀಗ ನಾಲ್ಕು ತಿಂಗಳಲ್ಲೇ ವಿವಾಹಕ್ಕೂ ಮೊದಲೇ ತಂದೆಯಾಗುತ್ತಿರುವ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

Hardik Pandya, Natasa Stankovic announce pregnancy, share pic
ಹಾರ್ದಿಕ್​ ಪಾಂಡ್ಯಾ ಇನ್ಸ್ಟಾಗ್ರಾಮ್​ ಪೋಸ್ಟ್​

"ನತಾಶಾ ಮತ್ತು ನಾನು ಒಟ್ಟಿಗೆ ಅದ್ಭುತ ಪಯಣ ಹೊಂದಿದ್ದೇವೆ. ಇದೀಗ ಅದು ಉತ್ತಮಗೊಳ್ಳುತ್ತಿದ್ದು, ನಾವಿಬ್ಬರು ಒಟ್ಟಾಗಿ ಹೊಸ ಜೀವವನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ. ನಮ್ಮ ಜೀವನದ ಹೊಸ ಹಂತಕ್ಕಾಗಿ ನಾವು ಬಹಳ ಆನಂದಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಬಯಸುತ್ತೇವೆ" ಎಂದು ಹಾರ್ದಿಕ್​ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ನತಾಶಾ ಅವರ ಬೇಬಿಬಂಪ್​ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Hardik Pandya, Natasa Stankovic announce pregnancy, share pic
ನತಾಶಾ ಇನ್ಸ್ಟಾಗ್ರಾಮ್​ ಪೋಸ್ಟ್​
ETV Bharat Logo

Copyright © 2024 Ushodaya Enterprises Pvt. Ltd., All Rights Reserved.