ETV Bharat / sports

ಪುತ್ರನ ಜೊತೆ ಚೆನ್ನೈನ ಬಯೋಬಬಲ್‌ಗೆ ಪ್ರಯಾಣಿಸಿದ ಹಾರ್ದಿಕ್ ಪಾಂಡ್ಯ

author img

By

Published : Jan 28, 2021, 8:56 PM IST

ಚೆನ್ನೈಗೆ ಪ್ರಯಾಣಿಸುತ್ತಿರುವ ಹಾರ್ದಿಕ್ ಪಾಂಡ್ಯ, 'ನನ್ನ ಹುಡುಗನ ಮೊದಲ ವಿಮಾನಯಾನ' (ಮೈ ಬಾಯ್ಸ್​ ಫರ್ಸ್ಟ್​ ಫ್ಲೈಟ್​) ಎಂದು ಬರೆದು ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

ಅಗಸ್ತ್ಯನ ಜೊತೆ ಹಾರ್ದಿಕ್ ಪಾಂಡ್ಯ ವಿಮಾನಯಾನ
ಅಗಸ್ತ್ಯನ ಜೊತೆ ಹಾರ್ದಿಕ್ ಪಾಂಡ್ಯ ವಿಮಾನಯಾನ

ಮುಂಬೈ: ಭಾರತ ತಂಡದ ಸ್ಟಾರ್ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗಾಗಿ ಚೆನ್ನೈಗೆ ಪ್ರಯಾಣಿಸಿದ್ದು, ಜೊತೆಯಲ್ಲಿ ತಮ್ಮ ಕುಟುಂಬವನ್ನು ಬಯೋಬಬಲ್ ತಾಣಕ್ಕೆ ಕರೆತಂದಿದ್ದಾರೆ.

ಐಪಿಎಲ್ ಮುಗಿಸಿ, ನೇರವಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಪಾಂಡ್ಯ, ತಮ್ಮ ಮಗ ಅಗಸ್ತ್ಯನನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದರಂತೆ. ಇದೀಗ ಭಾರತದಲ್ಲೇ ನಡೆಯುವ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ತಮ್ಮ ಜೊತೆಯಲ್ಲೆ ಪುಟ್ಟ ಮಗನನ್ನೂ ಕರೆದುಕೊಂಡು ಬಂದಿದ್ದಾರೆ.

ಈ ಫೋಟೋಗೆ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟ್ಯಾಂಕೋವಿಕ್ ಮೆಚ್ಚುಗೆ ಸೂಚಿಸಿದ್ದಾರೆ. ಕೃನಾಲ್ ಪಾಂಡ್ಯ, ಮುಂಬೈ ಇಂಡಿಯನ್ಸ್​ ತಂಡದ ಅಫ್ಘಾನಿಸ್ತಾನದ ಸ್ಪಿನ್ನರ್​ ರಶೀದ್ ಖಾನ್​, ಸೂರ್ಯ ಕುಮಾರ್ ಯಾದವ್​, ಅಕ್ಸರ್​ ಪಟೇಲ್, ನಾಗರಕೋಟಿ ಹಾಗೂ ನಟ ಸುನೀಲ್ ಗ್ರೋವರ್​ ಸೇರಿದಂತೆ ಹಲವಾರು ಸೆಲೆಬ್ರೆಟಿಗಳು ಫೋಟೋಗೆ ಲೈಕ್ ಒತ್ತಿದ್ದಾರೆ.

ಹಾರ್ದಿಕ್ ಪಾಂಡ್ಯ ಎರಡು ವರ್ಷಗಳ ನಂತರ ಟೆಸ್ಟ್​ ಕ್ರಿಕೆಟ್​ಗೆ ಮರಳುತ್ತಿದ್ದು, ಕೊನೆಯದಾಗಿ ಇಂಗ್ಲೆಂಡ್​ ವಿರುದ್ಧ ಸೌತಾಂಪ್ಟನ್​ ಟೆಸ್ಟ್​ನಲ್ಲಿ ಆಡಿದ್ದರು.

ಇದನ್ನೂ ಓದಿ:ಸೌರವ್​ ಗಂಗೂಲಿಗೆ 2ನೇ ಆ್ಯಂಜಿಯೋಪ್ಲಾಸ್ಟಿ , ಮತ್ತೆರಡು ಸ್ಟಂಟ್​ ಅಳವಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.