ETV Bharat / sports

ಮದುವೆಗೂ ಮುನ್ನ ತಂದೆಯಾಗುತ್ತಿರುವ ಪಾಂಡ್ಯ... ಟ್ವಿಟ್ಟರ್ ಟ್ರೋಲ್​​ ಹೇಗಿದೆ ನೋಡಿ!

author img

By

Published : Jun 1, 2020, 9:04 AM IST

ಭಾರತದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಹಾಗೂ ಬಾಲಿವುಡ್​ ನಟಿ ನತಾಶಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Hardik Pandya and Natasa Stankovic announce their Pregnancy.
ಹಾರ್ದಿಕ್ ಪಾಂಡ್ಯ ದಂಪತಿ

ಮುಂಬೈ: ಈ ವರ್ಷದ ಜನವರಿಯಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದ ಭಾರತ ತಂಡದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಹಾಗೂ ಬಾಲಿವುಡ್​ ನಟಿ ನತಾಶಾ ಸ್ಟ್ಯಾಂಕೋವಿಕ್​ ಮದುವೆಗೆ ಮುನ್ನವೇ ಪೋಷಕರಾಗುತ್ತಿದ್ದಾರೆ. ಈ ಸುದ್ದಿಯನ್ನು ಹಾರ್ದಿಕ್​ ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದರು.

ನತಾಶಾ ಮತ್ತು ನಾನು ಒಟ್ಟಿಗೆ ಅದ್ಭುತ ಪಯಣ ಹೊಂದಿದ್ದೇವೆ. ಇದೀಗ ಅದು ಉತ್ತಮಗೊಳ್ಳುತ್ತಿದ್ದು, ನಾವಿಬ್ಬರು ಒಟ್ಟಾಗಿ ಹೊಸ ಜೀವವನ್ನು ಸ್ವಾಗತಿಸಲು ಉತ್ಸುಕರಾಗಿದ್ದೇವೆ. ನಮ್ಮ ಜೀವನದ ಹೊಸ ಹಂತಕ್ಕಾಗಿ ನಾವು ಬಹಳ ಆನಂದಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಬಯಸುತ್ತೇವೆ" ಎಂದು ಹಾರ್ದಿಕ್​ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ನತಾಶಾ ಅವರ ಬೇಬಿಬಂಪ್​ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹಾರ್ದಿಕ್​ ಪಾಂಡ್ಯ ಈ ಸುದ್ದಿಯನ್ನು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡುತ್ತಿದ್ಧಂತೆ ಸಹ ಆಟಗಾರರು ಹಾಗೂ ಕೋಚ್​ ರವಿ ಶಾಸ್ತ್ರಿ ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ. ಆದರೆ ಪಾಂಡ್ಯ ಅಭಿಮಾನಿಗಳು ಮಾತ್ರ ತಮ್ಮ ಟ್ವಿಟ್ಟರ್​ಗಳಲ್ಲಿ ಮದುವೆಗೂ ಮುನ್ನವೇ ತಂದೆಯಾಗುತ್ತಿರುವ ಈ ಜೋಡಿ ಕುರಿತು ತಮಾಷೆಯಾಗಿ ಟ್ವೀಟ್​ ಮಾಡುವ ಮೂಲಕ ಕಾಲೆಳೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.