ETV Bharat / sports

ಭಾರತ ತಂಡದ ಶ್ರೇಷ್ಠ ಸ್ಪಿನ್ನರ್​ ಆರ್​ ಅಶ್ವಿನ್​ಗೆ ಜನ್ಮದಿನದ ಸಂಭ್ರಮ: ಸಚಿನ್​ ಸೇರಿದಂತೆ ಹಲವು ದಿಗ್ಗಜರಿಂದ ಶುಭಾಶಯ

author img

By

Published : Sep 17, 2020, 6:35 PM IST

ಭಾರತ ತಂಡದ 2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಆರ್​ ಅಶ್ವಿನ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ವರ್ಷ ಕಳೆದಿದ್ದಾರೆ. ತಮಿಳುನಾಡಿನ ಬೌಲರ್​ ಭಾರತ ಪರ 71 ಟೆಸ್ಟ್​ ಪಂದ್ಯಗಳಲ್ಲಿ 365 ವಿಕೆಟ್​​, 111 ಏಕದಿನ ಪಂದ್ಯಗಳಲ್ಲಿ 150 ವಿಕೆಟ್​ ಹಾಗೂ 46 ಟಿ20 ಪಂದ್ಯಗಳಲ್ಲಿ 52 ವಿಕೆಟ್​ ಪಡೆದಿದ್ದಾರೆ.

ರವಿಚಂದ್ರನ್​ ಅಶ್ವಿನ್​
ರವಿಚಂದ್ರನ್​ ಅಶ್ವಿನ್​

ದುಬೈ: ಭಾರತ ತಂಡದ ಸ್ಟಾರ್​ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​ ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವೇಗವಾಗಿ ಟೆಸ್ಟ್​ನಲ್ಲಿ 100 ಮತ್ತು 300 ವಿಕೆಟ್​ ಪಡೆದು ವಿಶ್ವದಾಖಲೆ ಬರೆದಿರುವ ಟೀಮ್​ ಇಂಡಿಯಾ ಕ್ರಿಕೆಟಿಗನಿಗೆ ಸಚಿನ್​ ತೆಂಡೂಲ್ಕರ್​ ಸೇರಿ ಹಲವಾರು ಕ್ರಿಕೆಟ್​ ದಿಗ್ಗಜರು ಶುಭ ಹಾರೈಸಿದ್ದಾರೆ.

ಭಾರತ ತಂಡದ 2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಆರ್​ ಅಶ್ವಿನ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ವರ್ಷ ಕಳೆದಿದ್ದಾರೆ. ತಮಿಳುನಾಡಿನ ಬೌಲರ್​ ಭಾರತ ಪರ 71 ಟೆಸ್ಟ್​ ಪಂದ್ಯಗಳಲ್ಲಿ 365 ವಿಕೆಟ್​​, 111 ಏಕದಿನ ಪಂದ್ಯಗಳಲ್ಲಿ 150 ವಿಕೆಟ್​ ಹಾಗೂ 46 ಟಿ20 ಪಂದ್ಯಗಳಲ್ಲಿ 52 ವಿಕೆಟ್​ ಪಡೆದಿದ್ದಾರೆ.

  • 🔶 Fastest Indian and joint fastest (overall) to 3⃣5⃣0⃣ Test wickets
    🔶 Fourth highest wicket-taker for #TeamIndia in Tests

    Happy birthday to our very own @ashwinravi99. 👏🎂

    Here's an Ashwin classic you can relive on his special day. 📽️👇

    — BCCI (@BCCI) September 17, 2020 " class="align-text-top noRightClick twitterSection" data=" ">

ಆರಂಭಿಕ ಬ್ಯಾಟ್ಸ್​ಮನ್​ ಆಗಿ ಕ್ರಿಕೆಟ್​ ಆರಂಭಿಸಿದರು ನಂತರ ಸ್ಪಿನ್ ಬೌಲರ್​ ಆಗಿ ಬದಲಾದ ಅಶ್ವಿನ್​ ಬೌಲಿಂಗ್​ನಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಳ್ಳುವುದರ ಜೊತೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಬ್ಯಾಟಿಂಗ್​ನಲ್ಲೂ ಉಪಯುಕ್ತ ಕೊಡುಗೆ ನೀಡಿದ್ದಾರೆ. ಅವರು 11 ಅರ್ಧಶತಕ ಹಾಗೂ 4 ಶತಕಗಳ ಸಹಿತ 2389 ರನ್ ಸಿಡಿಸಿದ್ದಾರೆ.

ಅಶ್ವಿನ್ ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ 100, 250, 300 ಹಾಗೂ 350(ಜಂಟಿಯಾಗಿ) ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದಾರೆ. 2015ರವರೆಗೂ ಸಿಎಸ್​ಕೆ ಪರ ಆಡಿದ್ದ ಅಶ್ವಿನ್​ ನಂತರ 2 ವರ್ಷ ಪುಣೆ ಸೂಪರ್​ ಜೇಂಟ್ಸ್​ನಲ್ಲಿ ಕಾಣಿಸಿಕೊಂಡಿದ್ದರು. ನಂತರ 2018 ಮತ್ತು 2019ರಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದಲ್ಲಿದ್ದ ಅವರು ಈ ಬಾರಿ ಡೆಲ್ಲಿ ಕ್ಯಾಪಿಟಲ್​ ಪರ ಆಡಲಿದ್ದಾರೆ.

  • 🔷 Fastest to 250 and 300 Test wickets
    🔷 Joint-fastest to 350 Test wickets
    🔷 First India bowler to take 50 T20I wickets
    🔷 ICC Cricketer of the Year in 2016

    Happy birthday to Ravichandran Ashwin 🎉 pic.twitter.com/aeJDSpBX9S

    — ICC (@ICC) September 17, 2020 " class="align-text-top noRightClick twitterSection" data=" ">

34 ನೇ ವಸಂತಕ್ಕೆ ಕಾಲಿಟ್ಟಿರುವ ಡೆಲ್ಲಿ ಕ್ಯಾಪಿಟಲ್​ ತಂಡದ ಆಡಗಾರನಿಗೆ ಭಾರತ ತಂಡ ಮಾಜಿ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​, ಮೊಹಮ್ಮದ್​ ಕೈಫ್, ದೊಡ್ಡ ಗಣೇಶ್​, ಅಜಿಂಕ್ಯಾ ರಹಾನೆ, ಇಶಾಂತ್​ ಶರ್ಮಾ, ಹನುಮ ವಿಹಾರಿ, ವಾಸಿಮ್ ಜಾಫರ್​,ಆಕಾಶ್ ಚೋಪ್ರಾ ಸೇರಿದಂತೆ ಹಲವಾರು ಹಾಲಿ ಮಾಜಿ ಕ್ರಿಕೆಟಿಗರು ಶುಭಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.