ETV Bharat / sports

ಆಫ್ರಿದಿ ಆದಷ್ಟು ಬೇಗ ಕೋವಿಡ್​ನಿಂದ ಚೇತರಿಸಿಕೊಳ್ಳಲಿ: ಗೌತಮ್​​ ಗಂಭೀರ್​

author img

By

Published : Jun 13, 2020, 9:00 PM IST

ಮಹಾಮಾರಿ ಕೊರೊನಾ ವೈರಸ್​ನಿಂದ ಬಳಲುತ್ತಿರುವ ಶಾಹಿದ್​ ಆಫ್ರಿದಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಗೌತಮ್​ ಗಂಭೀರ್​ ಹಾರೈಸಿದ್ದಾರೆ.

Gautam Gambhir
Gautam Gambhir

ನವದೆಹಲಿ: ಮಹಾಮಾರಿ ಕೋವಿಡ್​ ವೈರಸ್​ನಿಂದ ಬಳಲುತ್ತಿರುವ ಆಫ್ರಿಕಾದ ಮಾಜಿ ಆಲ್​ರೌಂಡರ್​ ಶಾಹಿದ್​ ಆಫ್ರಿದಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಗಂಭೀರ್​ ಹಾರೈಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಶಾಹಿದ್ ಆಫ್ರಿದಿ ಮಾತ್ರ ಅಲ್ಲ, ಪ್ರಪಂಚದಲ್ಲಿ ಯಾರೂ ಕೂಡ ಈ ಮಹಾಮಾರಿಗೆ ಒಳಗಾಗಬಾರದು. ಅವರೊಂದಿಗೆ ನಾನು ಕೇವಲ ರಾಜಕೀಯ ಭಿನ್ನಾಭಿಪ್ರಾಯ ಹೊಂದಿರುವೆ ಎಂದಿದ್ದಾರೆ.

Shahid Afirid
ಶಾಹಿದ್​ ಆಫ್ರಿದಿ

ಪಾಕ್ ಕ್ರಿಕೆಟಿಗ ಶಾಹೀದ್ ಅಫ್ರಿದಿಗೆ ಕೊರೊನಾ ಪಾಸಿಟಿವ್

ಇದೇ ವೇಳೆ ನನ್ನ ದೇಶದಲ್ಲಿ ಈ ಸೋಂಕಿನಿಂದ ಬಳಲುತ್ತಿರುವವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ವಿಶ್ವಕಪ್​ ವಿಜೇತ ತಂಡದ ಆಟಗಾರ ಹಾಗೂ ಬಿಜೆಪಿ ಸಂಸದನಾಗಿರುವ ಗಂಭೀರ್​ ಹಾಗೂ ಆಫ್ರಿದಿ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುತ್ತಾರೆ. ಆದರೆ ಇದೀಗ ಗೌತಿ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಪಾಕ್ ಭಾರತಕ್ಕೆ ಸಹಾಯ ಮಾಡಲು ಮುಂದಾಗಿತ್ತು. ಅದಕ್ಕೆ ನಾನು ಕೃತಜ್ಞನನು. ಆದರೆ ಅದು ಮೊದಲು ತನ್ನ ದೇಶದ ಜನರಿಗೆ ಸಹಾಯ ಮಾಡಲಿ ಎಂದು ಹೇಳಿದ್ದಾರೆ.

ಪಾಕ್​ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಮಿಸ್ಬಾ-ವುಲ್​-ಹಕ್​ ಕೂಡ ಆಫ್ರಿದಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.