ETV Bharat / sports

ಮೈದಾನದಿಂದ ಹೊರ ಹಾಕಿದರೆ ಸಾಲದು, ಜನಾಂಗೀಯ ನಿಂದನೆ ವಿರುದ್ಧ ಶಾಶ್ವತ ಪರಿಹಾರ ಅಗತ್ಯ: ಗಂಭೀರ್​

author img

By

Published : Jan 10, 2021, 8:20 PM IST

ಬುಮ್ರಾ ಮತ್ತು ಸಿರಾಜ್​ರನ್ನು ಜನಾಂಗೀಯವಾಗಿಯ ನಿಂದಿಸಿದ ಘಟನೆಯನ್ನು ಮಾಜಿ ಕ್ರಿಕೆಟಿಗ ಗಂಭೀರ್ ಟೀಕಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಹಾಗೂ ಇಂತಹ ಘಟನೆ ಮುಂದೆಂದು ನಡೆಯಬಾರದೆಂದರೆ ಕಠಿಣ ಕಾನೂನನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

Gambhir calls for  permanent solution  against racial abuse
ಜನಾಂಗೀಯ ನಿಂದನೆ ವಿರುದ್ಧ ಶಾಶ್ವತ ಪರಿಹಾರ ಅಗತ್ಯ ಗಂಭೀರ್​

ಹೈದರಾಬಾದ್​: ಜನಾಂಗೀಯವಾಗಿ ನಿಂದಿಸಿದ ತಪ್ಪಿತಸ್ಥರನ್ನು ಕೇವಲ ಮೈದಾನದಿಂದ ಹೊರ ಹಾಕಿದರೆ ಸಾಲದು, ಇಂತಹ ಕೃತ್ಯಕ್ಕೆ ಕಠಿಣ ಕಾನೂನುಗಳನ್ನು ಜಾರಿ ಮಾಡಿ ಶಾಶ್ವತ ಪರಿಹಾರ ಒದಗಿಸಿಕೊಡಬೇಕು ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

ಭಾರತೀಯ ಕ್ರಿಕೆಟಿಗರಾದ ಸಿರಾಜ್ ಮತ್ತು ಬುಮ್ರಾರನ್ನು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಜನಾಂಗೀಯವಾಗಿ ನಿಂದಿಸಿದ ಪ್ರೇಕ್ಷಕರನ್ನು ಮೈದಾನದಿಂದ ಹೊರ ಕಳುಹಿಸಿದ ನಂತರ ಈ ಹೇಳಿಕೆ ನೀಡಿದ್ದಾರೆ.

"ಇದು ಸ್ವೀಕಾರಾರ್ಹವಲ್ಲ. ಜನಾಂಗೀಯ ನಿಂದನೆ ಮೈದಾನದಲ್ಲಿರಬಾರದು ಮತ್ತು ಯಾರೊಬ್ಬರನ್ನು ಜನಾಂಗೀಯವಾಗಿ ನಿಂದಿಸುವುದು ಸ್ವೀಕಾರಕ್ಕೆ ಅರ್ಹವಲ್ಲ. ಈ ಘಟನೆಗಳು ಮುಂದೆ ಎಂದು ಮರುಕಳಿಸಬಾರದೆಂದರೆ ಕಠಿಣ ಕಾನೂನುಗಳು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಗಂಭೀರ್​ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಿಂದಿಸಿದವರನ್ನು ಕೇವಲ ಸ್ಟೇಡಿಯಂನಿಂದ ಹೊರ ಹಾಕುವುದು ಪರಿಹಾರವಲ್ಲ. ಈಗಾಗಲೇ ಹಿಂದೆಯೂ ಇಂತಹ ಘಟನೆ ನಡೆದಿದೆ. ನಿಮ್ಮ ಬಳಿ ಶಾಶ್ವತ ಪರಿಹಾರವಿಲ್ಲದಿದ್ದರೆ ಭವಿಷ್ಯದಲ್ಲಿ ಮತ್ತೆ ಮರುಕಳಿಸಬಹುದು. ಹಾಗಾಗಿ ಕಠಿಣ ಕಾನೂನು ಅಗತ್ಯವಿದೆ. ಅದೇ ರೀತಿ ಶಿಕ್ಷೆ ಕೂಡ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಇದನ್ನು ಓದಿ:ಇದು ಗೂಂಡಾ ವರ್ತನೆಯ ಪರಮಾವಧಿ: ಜನಾಂಗೀಯ ನಿಂದನೆ ವಿರುದ್ಧ ಕೊಹ್ಲಿ ಕೆಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.