ETV Bharat / sports

ನಟರಾಜನ್ ಆಯ್ಕೆ ಮಾಡಿದ್ದಕ್ಕೆ ಅಂದು ನನ್ನನ್ನು ಪ್ರಶ್ನಿಸಿದವರಿಗೆ ಇಂದು ಆತನೇ ಉತ್ತರಿಸಿದ್ದಾನೆ: ಸೆಹ್ವಾಗ್​

author img

By

Published : Dec 3, 2020, 5:26 PM IST

ನಟರಾಜನ್​ ಖರೀದಿಸಲು ತಮಗೆ ಕೆಲವು ತಮಿಳುನಾಡಿನ ರಣಜಿ ಆಟಗಾರರು ನನಗೆ ಶಿಪಾರಸು ಮಾಡಿದ್ದರು. ಏಕೆಂದರೆ ಅವರು ಡೆತ್​ ಓವರ್​ಗಳಲ್ಲಿ ಉತ್ತಮ ಯಾರ್ಕರ್​ಗಳನ್ನು ಪ್ರಯೋಗಿಸುವುದರಲ್ಲಿ ಸಮರ್ಥರಾಗಿದ್ದರು ಎಂದು ಸೆಹ್ವಾಗ್​ ನೆನಪಿಸಿಕೊಂಡಿದ್ದಾರೆ.

ವಿರೇಂದ್ರ ಸೆಹ್ವಾಗ್​ - ನಟರಾಜನ್​
ವಿರೇಂದ್ರ ಸೆಹ್ವಾಗ್​ - ನಟರಾಜನ್​

ನವದೆಹಲಿ: 2017ರ ಐಪಿಎಲ್ ಹರಾಜಿನಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡಕ್ಕೆ ಟಿ. ನಟರಾಜನ್​ರನ್ನು ಆಯ್ಕೆ ಮಾಡಿದಾಗ ಎಲ್ಲರೂ ನನ್ನನ್ನು ಪ್ರಶ್ನಿಸಿದ್ದರು ಎಂದು ಭಾರತ ತಂಡದ ಮಾಜಿ ನಾಯಕ ವಿರೇಂದ್ರ ಸೆಹ್ವಾಗ್​ ಬಹಿರಂಗಪಡಿಸಿದ್ದಾರೆ.

2017ರ ಟಿಎನ್​ಪಿಎಲ್​ ಅದ್ಭುತ ಬೌಲಿಂಗ್​ ಪ್ರದರ್ಶನ ತೋರಿದ್ದ ನಟರಾಜನ್ ಅವ​ರನ್ನು ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡಕ್ಕೆ ಸೇರ್ಪಡೆಗೊಳ್ಳಲು ಕೋಚ್ ಆಗಿದ್ದ ಸೆಹ್ವಾಗ್​ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಈತನ ಖರೀದಿಗೆ ಕೆಲವರು ಅವರನ್ನು ಪ್ರಶ್ನಿಸಿದ್ದರು ಎಂದು ಸೋನಿ ನೆಟ್​ವರ್ಕ್​ ಕಾರ್ಯಕ್ರಮದಲ್ಲಿ ವೀಕ್ಷಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತಿರಿಸುವ ವೇಳೆ ತಿಳಿಸಿದ್ದಾರೆ.

ಭಾರತ ತಂಡದ ಪರ ನಟರಾಜನ್​ ಪದಾರ್ಪಣೆಯಾಗಿದ್ದರ ಬಗ್ಗೆ ನಿಮ್ಮ ಅಭಿಪ್ರಾಯ ಹೇಗಿದೆ ಎಂದು ಕೇಳಿದ್ದಕ್ಕೆ ಸೆಹ್ವಾಗ್​ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

" ಆತ ಭಾರತ ತಂಡಕ್ಕೆ ಆಡುವುದನ್ನು ನೋಡಲು ಸಂತೋಷವಾಗುತ್ತಿದೆ. ಏಕೆಂದರೆ ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡಕ್ಕೆ ಐಪಿಎಲ್​ ಹರಾಜಿನಲ್ಲಿ ಖರೀದಿಸಿದ ವೇಳೆ ಪ್ರತಿಯೊಬ್ಬರು ನನ್ನನ್ನು ಪ್ರಶ್ನಿಸಿದ್ದರು. ಒಂದು ದೇಶೀಯ ಪಂದ್ಯವನ್ನು ಆಡದ ಆಟಗಾರನನ್ನು ಕೇವಲ ಟಿಎನ್​ಪಿಎಲ್​ನಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಅಷ್ಟು ದೊಡ್ಡ ಮೊತ್ತಕ್ಕೆ ಖರೀದಿಸಿದ್ದರಿಂದ ನನಗೆ ಕೆಲವು ಪ್ರಶ್ನೆಗಳು ಎದುರಾಗಿದ್ದವು " ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ ತಂಡಕ್ಕೆ ಟಿ-20 ಸರಣಿಯಲ್ಲಿ ಕಠಿಣ ಸವಾಲು ನೀಡಲು ಸಜ್ಜಾದ ಸಂಘಟಿತ ವಿರಾಟ್​ ಪಡೆ

ನಟರಾಜನ್​ ಅವರನ್ನು ಖರೀದಿಸಲು ತಮಗೆ ಕೆಲವು ತಮಿಳುನಾಡಿನ ರಣಜಿ ಆಟಗಾರರು ನನಗೆ ಶಿಪಾರಸು ಮಾಡಿದ್ದರು. ಏಕೆಂದರೆ ಅವರು ಡೆತ್​ ಓವರ್​ಗಳಲ್ಲಿ ಉತ್ತಮ ಯಾರ್ಕರ್​ಗಳನ್ನು ಪ್ರಯೋಗಿಸುವುದರಲ್ಲಿ ಸಮರ್ಥರಾಗಿದ್ದರು ಎಂದು ಸೆಹ್ವಾಗ್​ ನೆನಪಿಸಿಕೊಂಡಿದ್ದಾರೆ.

" ನಾನು ದುಡ್ಡಿನ ಬಗ್ಗೆ ಆಲೋಚನೆ ಮಾಡಲಿಲ್ಲ. ಏಕೆಂದರೆ ಅಲ್ಲಿ ಪ್ರತಿಭೆಯಿತ್ತು. ಆ ಸಂದರ್ಭದಲ್ಲಿ ನಮ್ಮ ತಂಡದಲ್ಲಿ ಕೆಲವು ತಮಿಳುನಾಡು ಕ್ರಿಕೆಟಿಗರಿದ್ದರು. ನಟರಾಜನ್​ ಸ್ಲಾಗ್ ಓವರ್​ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುವ ಮತ್ತು ಪರಿಪೂರ್ಣ ಯಾರ್ಕರ್‌ ಪ್ರಯೋಗಿಸುವ ಬೌಲರ್​ " ಎಂದು ಅವರು ಮಾಹಿತಿ ನೀಡಿದ್ದರೆಂದು ಯಾರ್ಕರ್​ ಕಿಂಗ್​ ಆಯ್ಕೆಗೆ ಕಾರಣವಾದ ಅಂಶವನ್ನು ವಿವರಿಸಿದ್ದಾರೆ.

ಆತನ ವಿಡಿಯೋಗಳನ್ನು ನೋಡಿದ ಮೇಲೆ ಆತನನ್ನು ಖರೀದಿಸಬೇಕೆಂದು ಬಯಸಿದೆ. ಎಕೆಂದರೆ ನಮ್ಮಲ್ಲಿ ಡೆತ್​ ಓವರ್​ ಎಸೆಯುವ ಬೌಲರ್​ಗಳ ಕೊರತೆಯಿತ್ತು . ದುರದೃಷ್ಟವಶಾತ್ ಆ ವರ್ಷ ಅವರು ಗಾಯಕ್ಕೆ ತುತ್ತಾಗಿದ್ದರಿಂದ ಅವರು ಸಾಕಷ್ಟು ಪಂದ್ಯಗಳಲ್ಲಿ ಆಡಲಾಗಲಿಲ್ಲ. ಆದರೆ, ಅವರು ಆಡಿದ ಒಂದು ಪಂದ್ಯವನ್ನು ಮಾತ್ರ ನಾವು ಗೆದ್ದಿದ್ದೆವು, ಉಳಿದ ಎಲ್ಲ ಪಂದ್ಯಗಳಲ್ಲಿ ಸೋಲುಕಂಡಿವೆ ಎಂದು ಸೆಹ್ವಾಗ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.