ETV Bharat / sports

ಕೋವಿಡ್​ ನಂತ್ರ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್​... ಜುಲೈನಲ್ಲಿ ಇಂಗ್ಲೆಂಡ್​-ವೆಸ್ಟ್​ ಇಂಡೀಸ್​ ಫೈಟ್​!

author img

By

Published : Jun 3, 2020, 2:37 AM IST

ಕೊರೊನಾ ವೈರಸ್​ನಿಂದ ಇಷ್ಟು ದಿನ ಕ್ರಿಕೆಟ್​ ಪಂದ್ಯಗಳು ಸ್ಥಗಿತಗೊಂಡಿದ್ದವು. ಆದರೆ ಇದೇ ಮೊದಲ ಬಾರಿಗೆ ಉಭಯ ದೇಶಗಳ ಮಧ್ಯೆ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದೆ.

England to face West Indies in 3 Test series
England to face West Indies in 3 Test series

ಹೈದರಾಬಾದ್​: ಪ್ರಪಂಚದಾದ್ಯಂತ ಕೋವಿಡ್​​-19 ಅಬ್ಬರ ಜೋರಾಗಿರುವ ಕಾರಣ ಎಲ್ಲ ರೀತಿಯ ಕ್ರೀಡೆ ಮುಂದೂಡಿಕೆ ಮಾಡಲಾಗಿದ್ದು, ಅದೇ ರೀತಿಯಾಗಿ ಕ್ರಿಕೆಟ್​ ಪಂದ್ಯಗಳು ಕೂಡ ಮುಂದೂಡಿಕೆಯಾಗಿವೆ. ಇದೀಗ ಜುಲೈ ತಿಂಗಳಲ್ಲಿ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್​ ಸರಣಿ ನಡೆಯುವುದು ಬಹುತೇಕ ಖಚಿತಗೊಂಡಿದೆ.

ಜುಲೈ 8ರಿಂದ ಇಂಗ್ಲೆಂಡ್​-ವೆಸ್ಟ್​ ಇಂಡೀಸ್​ ನಡುವೆ ಮೂರು ಟೆಸ್ಟ್​ ಪಂದ್ಯಗಳ ಕ್ರಿಕೆಟ್​​ ಸರಣಿ ನಡೆಯಲಿದ್ದು, ಮುಚ್ಚಿದ ಕ್ರೀಡಾಂಗಣದಲ್ಲಿ ಸರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಮೂರು ಟೆಸ್ಟ್​ ಪಂದ್ಯಗಳು ಇಂಗ್ಲೆಂಡ್​ನ ಹ್ಯಾಂಪ್‌ಶೈರ್‌ನ ಏಗಾಸ್ ಬೌಲ್ ಮತ್ತು ಲಂಕಾಷೈರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫೋರ್ಡ್‌ನಲ್ಲಿ ನಡೆಯಲಿವೆ. ಬಯೋ ಸೆಕ್ಯೂರ್​ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೇ ಈ ಕ್ರಿಕೆಟ್​ ಪಂದ್ಯಗಳು ನಡೆಯಲಿವೆ.

ವೆಸ್ಟ್​ ಇಂಡೀಸ್​ ಕ್ರಿಕೆಟ್​ ತಂಡ ಇಂಗ್ಲೆಂಡ್​ಗೆ ಜೂನ್​ 9ರಂದು ಪ್ರಯಾಣ ಬೆಳೆಸಲಿದ್ದು, ಈ ವೇಳೆ ಅಭ್ಯಾಸದ ಜತೆಗೆ ಅವರಿಗೆ ಕ್ವಾರಂಟೈನ್​ ಸಹ ಮಾಡಲಾಗುವುದು ಎಂದು ತಿಳಿದು ಬಂದಿದೆ. ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ತಿಳಿಸಿರುವ ಪ್ರಕಾರ ಮಹಿಳಾ ಕ್ರಿಕೆಟ್​ ಪಂದ್ಯಗಳು ಕೂಡ ಆದಷ್ಟು ಬೇಗ ಆರಂಭಗೊಳ್ಳಲಿವೆ ಎಂದು ಹೇಳಿದೆ.

ಟೆಸ್ಟ್​ ಸರಣಿ ವೇಳಾಪಟ್ಟಿ

  • ಮೊದಲ ಟೆಸ್ಟ್​​: ಜುಲೈ 8-12 ಏಗಾಸ್​ ಬೌಲ್​
  • ಎರಡನೇ ಟೆಸ್ಟ್​: ಜುಲೈ 16-20 ಎಮಿರೇಟ್ಸ್​​
  • ಮೂರನೇ ಟೆಸ್ಟ್​​ ಜುಲೈ 24-28 ಎಮಿರೇಟ್ಸ್​​​

ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿ ಕೂಡ ಪ್ಲೇಯರ್ಸ್​ಗಳನ್ನ ಇಂಗ್ಲೆಂಡ್​ಗೆ ಕಳುಹಿಸಲು ಒಪ್ಪಿಕೊಂಡಿರುವ ಕಾರಣ ಕ್ರಿಕೆಟ್​​ ವೆಸ್ಟ್​ ಇಂಡೀಸ್​ ಮಂಡಳಿಗೆ ಇಂಗ್ಲೆಂಡ್​ ಧನ್ಯವಾದ ತಿಳಿಸಿದೆ.

ಕೊರೊನಾ ಅಬ್ಬರ ಜೋರಾಗಿರುವ ಕಾರಣ ಮಾರ್ಚ್​ ತಿಂಗಳಿಂದಲೂ ಕ್ರಿಕೆಟ್​ ಪಂದ್ಯಗಳು ರದ್ಧುಗೊಂಡಿದ್ದು, ಕಳೆದ ತಿಂಗಳಿಂದ ಆರಂಭಗೊಳ್ಳಬೇಕಾಗಿದ್ದ ಐಪಿಎಲ್​ ಕೂಡ ಮುಂದೂಡಿಕೆಯಾಗಿದೆ. ಆದರೆ ಇದೀಗ ಮೊದಲ ಸಲ ಇಂಗ್ಲೆಂಡ್​-ವೆಸ್ಟ್​ ಇಂಡೀಸ್​ ನಡುವೆ ಕ್ರಿಕೆಟ್ ಸರಣಿ ಆರಂಭಗೊಳ್ಳುತ್ತಿದೆ.

ಕ್ರಿಕೆಟ್​ ಪುನಾರಂಭಗೊಳ್ಳುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಐಸಿಸಿ ಕೆಲವೊಂದು ನಿಯಮಾವಳಿ ಜಾರಿಗೊಳಿಸಿದ್ದು, ತಂಡದೊಂದಿಗೆ ವೈದ್ಯಾಧಿಕಾರಿಗಳನ್ನಿಟ್ಟುಕೊಳ್ಳುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.