ETV Bharat / sports

ಭಾರತದೆದುರು ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ 4ನೇ ಕನಿಷ್ಠ ಮೊತ್ತಕ್ಕೆ ಆಲೌಟ್​ ಆದ ಇಂಗ್ಲೆಂಡ್​

author img

By

Published : Feb 24, 2021, 7:09 PM IST

ಕೇವಲ 48.4 ಓವರ್​ಗಳಲ್ಲಿ ಇಂಗ್ಲೆಂಡ್ 112 ರನ್​ಗಳಿಗೆ ಸರ್ವಪತನಗೊಂಡಿತು. ಇದು ಆಂಗ್ಲರ ತಂಡ ಭಾರತದೆದುರು ದಾಖಲಿಸಿದ 4ನೇ ಕನಿಷ್ಠ ಮೊತ್ತವಾಯಿತು. 1971ರಲ್ಲಿ ಓವೆಲ್​ನಲ್ಲಿ 101 ರನ್​ಗಳಿಗೆ ಆಲೌಟ್​ ಆಗಿದ್ದು, ಇಲ್ಲಿಯವರೆಗಿನ ಕನಿಷ್ಠ ಮೊತ್ತವಾಗಿತ್ತು. ಇಂದಿನ ಮೊತ್ತ ಇಂಗ್ಲೆಂಡ್​ ತಂಡ ಭಾರತದೆದುರು ಗಳಿಸಿದ 4ನೇ ಕನಿಷ್ಠ ಮೊತ್ತವಾಗಿದೆ.

ಟೆಸ್ಟ್​ ಕ್ರಿಕೆಟ್​ನ 4ನೇ ಕನಿಷ್ಠ ಮೊತ್ತ  ದಾಖಲಿಸಿದ ಇಂಗ್ಲೆಂಡ್​ ತಂಡ
ಟೆಸ್ಟ್​ ಕ್ರಿಕೆಟ್​ನ 4ನೇ ಕನಿಷ್ಠ ಮೊತ್ತ ದಾಖಲಿಸಿದ ಇಂಗ್ಲೆಂಡ್​ ತಂಡ

ಅಹ್ಮದಾಬಾದ್​: ಭಾರತದೆದುರು ಅಹ್ಮದಾಬಾದ್​ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್​ ಪಂದ್ಯದಲ್ಲಿ ಭಾರತದ ಸ್ಪಿನ್​ ಬೌಲಿಂಗ್ ದಾಳಿಗೆ ಸಿಲುಕಿದ ಇಂಗ್ಲೆಂಡ್​ ತಂಡ ಕೇವಲ 112 ರನ್​ಗಳಿಗೆ ಆಲೌಟ್​ ಆಗಿದೆ.

ಭಾರತದ ನೆಲದಲ್ಲಿ ಆಡುತ್ತಿರುವ 2ನೇ ಅಹರ್ನಿಶಿ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್​ಗಳು ಆಂಗ್ಲ ಬ್ಯಾಟ್ಸ್​ಮನ್​ಗಳ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಅದರಲ್ಲೂ ಸ್ಥಳೀಯ ಹುಡುಗ ಅಕ್ಸರ್​ ಪಟೇಲ್ ಕೇವಲ 38 ರನ್​ ನೀಡಿ 6 ವಿಕೆಟ್ ಪಡೆದು ಮಿಂಚಿದರೆ, ಅನುಭವಿ ಅಶ್ವಿನ್ 3 ವಿಕೆಟ್​ ಪಡೆದು ಪಟೇಲ್​ಗೆ ಸಾಥ್​ ನೀಡಿದರು. ​ ​

ಕೇವಲ 48.4 ಓವರ್​ಗಳಲ್ಲಿ ಇಂಗ್ಲೆಂಡ್ 112 ರನ್​ಗಳಿಗೆ ಸರ್ವಪತನಗೊಂಡಿತು. ಇದು ಆಂಗ್ಲರ ತಂಡ ಭಾರತದೆದುರು ದಾಖಲಿಸಿದ 4ನೇ ಕನಿಷ್ಠ ಮೊತ್ತವಾಯಿತು. 1971ರಲ್ಲಿ ಓವೆಲ್​ನಲ್ಲಿ 101 ರನ್​ಗಳಿಗೆ ಆಲೌಟ್​ ಆಗಿದ್ದು, ಇಲ್ಲಿಯವರೆಗಿನ ಕನಿಷ್ಠ ಮೊತ್ತವಾಗಿತ್ತು. ಇಂದಿನ ಮೊತ್ತ ಇಂಗ್ಲೆಂಡ್​ ತಂಡ ಭಾರತದೆದುರು ಗಳಿಸಿದ 4ನೇ ಕನಿಷ್ಠ ಮೊತ್ತವಾಗಿದೆ.

ಭಾರತದೆದುರು ಇಂಗ್ಲೆಂಡ್​ ತಂಡದ ಕನಿಷ್ಠ ಮೊತ್ತಗಳು

  • 101 ದಿ ಓವೆಲ್​ 1971
  • 102 ಮುಂಬೈ 1979-80
  • 102 ಲೀಡ್ಸ್​ 1986
  • 112 ಅಹ್ಮದಾಬಾದ್​ 2020-21
  • 128 ಲೀಡ್ಸ್​ 1986
ETV Bharat Logo

Copyright © 2024 Ushodaya Enterprises Pvt. Ltd., All Rights Reserved.