ETV Bharat / sports

ಭಾರತೀಯ ಸೇನೆ ಬಳಸುವ ನಿಸ್ಸಾನ್ ಜೊಂಗಾ ಕಾರು ಖರೀದಿಸಿದ ಧೋನಿ!

author img

By

Published : Oct 21, 2019, 11:10 PM IST

ಭಾರತೀಯ ಸೇನೆ ಬಳಸುವ ನಿಸ್ಸಾನ್ ಜೊಂಗಾ ಕಾರನ್ನು ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಇದೀಗ ಖರೀದಿ ಮಾಡಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ

ರಾಂಚಿ: ಸ್ಥಳೀಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯ ನೋಡಲು ಲೋಕಲ್ ಬಾಯ್ ಮಾಹಿ ಬರುತ್ತಾರೆಂದು ಕ್ರೀಡಾಭಿಮಾನಿಗಳು ಕಾಯುತಿದ್ದಾರೆ. ಆದರೆ ಧೋನಿ ಮಾತ್ರ ತನ್ನ ಹೊಸ ನಿಸ್ಸಾನ್ ಜೊಂಗಾ ಕಾರಿನಲ್ಲಿ ಜಾಲಿ ರೈಡ್​ ಮಾಡುತ್ತಿದ್ದಾರೆ.

ಕಾರು ಮತ್ತು ಬೈಕ್​​ ಬಗ್ಗೆ ಧೋನಿಗಿರುವ ಪ್ರೀತಿ ಹೊಸದೇನಲ್ಲ.ಆದರೆ ಇದೀಗ ಮಾಹಿ ಕಾರ್ ಕಲೆಕ್ಷನ್​ಗೆ ಹೊಸ ಸದಸ್ಯನ ಆಗಮನವಾಗಿದೆ. ಭಾರತೀಯ ಸೇನೆ ಬಳಸುವ ನಿಸ್ಸಾನ್ ಜೊಂಗಾ ಕಾರನ್ನ ಮಾಹಿ ಖರೀದಿಸಿದ್ದಾರೆ.

ತಮ್ಮ ನೂತನ ಕಾರಿನಲ್ಲಿ ಒಂದು ರೌಂಡ್ ತೆರಳಿರುವ ಮಾಹಿ ಸ್ಥಳೀಯ ಪೆಟ್ರೋಲ್​ ಬಂಕ್​ಗೆ ತೆರಳಿದ್ದಾರೆ. ಧೋನಿಯನ್ನ ಕಂಡಿರುವ ಅಭಿಮಾನಿಗಳು ಹಸ್ತಾಕ್ಷರಕ್ಕಾಗಿ ಮುಗಿಬಿದ್ದಿದ್ದಾರೆ. ಅಭಿಮಾನಿಗಳಿಗೆ ನಿರಾಶೆ ಮಾಡದ ಧೋನಿ, ಪ್ರತಿಯೊಬ್ಬರಿಗೂ ಆಟೋಗ್ರಾಫ್​ ನೀಡಿ ಸೆಲ್ಫಿ ತೆಗೆಸಿಕೊಂಡಿದ್ದಾರೆ.

ಕಾರು ಮತ್ತು ಬೈ ಕ್ರೇಜ್ ಹೊಂದಿರುವ ಧೋನಿ ಈಗಾಗಲೇ ತಮ್ಮ ಗ್ಯಾರೇಜ್​ನಲ್ಲಿ ಹಲವಾರು ರೀತಿಯ ವಾಹನ ಸಂಗ್ರಹ ಮಾಡಿದ್ದಾರೆ. ಅವುಗಳ ಸಾಲಿಗೆ ಭಾರತೀಯ ಸೇನೆ ಬಳಸುವ ನಿಸ್ಸಾನ್ ಜೊಂಗಾ ಕಾರು ಸೇರ್ಪಡೆಯಾಗಿದೆ. ಕಳೆದ ಕೆಲ ದಿನಗಳ ಹಿಂದೆ ಮಾಹಿ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದರು ಎಂಬುದು ಗಮನಾರ್ಹ ಸಂಗತಿ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.