ETV Bharat / sports

ಕಿವೀಸ್​ ಸರಣಿ: ಟೆಸ್ಟ್‌ ಟೀಂನಿಂದ ಹೋಪ್ ಹೊರಕ್ಕೆ; ಬ್ರಾವೋ, ಹೆಟ್ಮೈರ್​ ಸೇರ್ಪಡೆ

author img

By

Published : Oct 17, 2020, 5:47 PM IST

ಬ್ರಾವೋ ಕಳೆದ 2013ರ ನ್ಯೂಜಿಲ್ಯಾಂಡ್​ ಪ್ರವಾಸದ ವೇಳೆ 218 ರನ್​ಗಳ ಗರಿಷ್ಠ ರನ್ ಬಾರಿಸಿದ್ದರು. ಕಿವೀಸ್​ನಲ್ಲಿ ಉತ್ತಮ ದಾಖಲೆ ಹೊಂದಿರುವುದರಿಂದ ಅವರು 2 ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ.

ವೆಸ್ಟ್​ ಇಂಡೀಸ್​ vs ನ್ಯೂಜಿಲ್ಯಾಂಡ್
ವೆಸ್ಟ್​ ಇಂಡೀಸ್​ vs ನ್ಯೂಜಿಲ್ಯಾಂಡ್

ಸೇಂಟ್ ಜಾನ್ಸ್​: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್​ ಸರಣಿಗೆ ಡೇರೆನ್ ಬ್ರಾವೋ, ಶಿಮ್ರಾನ್ ಹೆಟ್ಮೈರ್​ ಹಾಗೂ ಆಲ್​ರೌಂಡರ್ ಕೀಮೋ ಪಾಲ್ ವೆಸ್ಟ್​ ಇಂಡೀಸ್ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಆದರೆ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಶಾಯ್ ಹೋಪ್​ ತಂಡದಿಂದ ಹೊರ ಬಿದ್ದಿದ್ದಾರೆ.

ಬ್ರಾವೋ ಕಳೆದ 2013ರ ನ್ಯೂಜಿಲ್ಯಾಂಡ್​ ಪ್ರವಾಸ ವೇಳೆ 218 ರನ್​ಗಳ ಗರಿಷ್ಠ ರನ್ ಬಾರಿಸಿದ್ದರು. ಕಿವೀಸ್​ನಲ್ಲಿ ಉತ್ತಮ ದಾಖಲೆ ಹೊಂದಿರುವುದರಿಂದ 2 ಟೆಸ್ಟ್​ಗಳ ಸರಣಿಗೆ ಆಯ್ಕೆಯಾಗಿದ್ದಾರೆ.

ಶಾಯ್ ಹೋಪ್
ಶಾಯ್ ಹೋಪ್

ಆದರೆ ವಿಂಡೀಸ್ ಪರ 34 ಟೆಸ್ಟ್​ ಪಂದ್ಯಗಳನ್ನಾಡಿರುವ ಅನುಭವಿ ಶಾಯ್ ಹೋಪ್​ ಕಳೆದ ಕೆಲವು ಟೆಸ್ಟ್​ ಸರಣಿಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿರುವುದೇ ತಂಡದಿಂದ ಹೊರಬೀಳುವುದಕ್ಕೆ ಕಾರಣವಾಗಿದೆ. ಅವರು 2017 ಡಿಸೆಂಬರ್​ನಿಂದ 2019 ಫೆಬ್ರವರಿವರೆಗೆ 14.45ರ ಸರಾಸರಿಯಲ್ಲಿ ರನ್​ಗಳಿಸಿದ್ದಾರೆ.

ಈ ಸರಣಿಗೆ ಆಯ್ಕೆಯಾಗಿರುವ ತಂಡದ ಜೊತೆಗೆ 6 ಮಂದಿ ರಿಸರ್ವ್​ ಆಟಗಾರರು ಕೂಡ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದ್ದಾರೆ.

2018ರ ಬಳಿಕ ಇದೇ ಮೊದಲ ಬಾರಿಗೆ ವಿಕೆಟ್ ಕೀಪರ್​ ಬ್ಯಾಟ್ಸ್​ಮನ್ ಆ್ಯಂಡ್ರೆ ಫ್ಲೆಚರ್ ಟೆಸ್ಟ್​ ಸರಣಿಗೂ ಮುನ್ನ ನಡೆಯುವ 3 ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ.​ ಆಲ್​ರೌಂಡರ್ ಕೈಲ್ ಮೇಯರ್ಸ್​ ಕೂಡ ಇದೇ ಮೊದಲ ಬಾರಿಗೆ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಆಲ್​ರೌಂಡರ್​ ರಸೆಲ್, ಲೆಂಡ್ಲ್ ಸಿಮನ್ಸ್​ ಹಾಗೂ ಎವಿನ್ ಲೆವಿಸ್​ ಕೋವಿಡ್ 19 ಕಾರಣ ಪ್ರವಾಸದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಟಿ20 ಸರಣಿಯು ನವೆಂಬರ್ 27 ರಂದು ಆಕ್ಲೆಂಡ್‌ನಲ್ಲಿ ಪ್ರಾರಂಭವಾಗಲಿದೆ. ನಂತರ ನವೆಂಬರ್ 29 ಮತ್ತು 30 ರಂದು ಮೌಂಟ್ ಮೌಂಗನುಯಿ ಉಳಿದೆರಡು ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್​ ಡಿಸೆಂಬರ್ 3-7 ರಂದು ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಮತ್ತು 2ನೇ ಟೆಸ್ಟ್​ ಡಿಸೆಂಬರ್ 11-15 ರವರೆಗೆ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.

ಟೆಸ್ಟ್ ತಂಡ: ಜೇಸನ್ ಹೋಲ್ಡರ್ (ನಾಯಕ), ಜೆರ್ಮೈನ್ ಬ್ಲ್ಯಾಕ್‌ವುಡ್, ಕ್ರೇಗ್ ಬ್ರಾಥ್‌ವೈಟ್, ಡೆರಾನ್ ಬ್ರಾವೋ, ಶಮರ್ ಬ್ರೂಕ್ಸ್, ಜಾನ್ ಕ್ಯಾಂಪ್‌ಬೆಲ್, ರಾಸ್ಟನ್ ಚೇಸ್, ರಹಕೀಮ್ ಕಾರ್ನ್‌ವಾಲ್, ಶೇನ್ ಡೌರಿಚ್, ಶಾನನ್ ಗೇಬ್ರಿಯಲ್, ಶಿಮ್ರಾನ್ ಹೆಟ್ಮಯರ್, ಚೆಮರ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕೀಮೋ ಪಾಲ್, ಕೆಮರ್ ರೋಚ್ .

ರಿಸರ್ವ್ ಆಟಗಾರರು​: ಎನ್‌ಕ್ರುಮಾ ಬೊನ್ನರ್, ಜೋಶ್ವಾ ಡಾಸಿಲ್ವಾ, ಪ್ರೆಸ್ಟನ್ ಮೆಕ್‌ಸ್ವೀನ್, ಶೇನ್ ಮೊಸ್ಲೆ, ರೇಮನ್ ರೀಫರ್, ಜೇಡೆನ್ ಸೀಲ್ಸ್.

ಟಿ20 ತಂಡ: ಕೀರನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೋ, ಶೆಲ್ಡನ್ ಕಾಟ್ರೆಲ್, ಆಂಡ್ರೆ ಫ್ಲೆಚರ್, ಶಿಮ್ರಾನ್ ಹೆಟ್ಮೈರ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ರೋವ್ಮನ್ ಪೊವೆಲ್, ಕೀಮೋ ಪಾಲ್, ನಿಕೋಲಸ್ ಪೂರನ್, ಓಶೇನ್ ಥಾಮಸ್, ಹೇಡನ್ ವಾಲ್ಷ್ ಜೂನಿಯರ್, ಕೆಸ್ರಿಕ್ ವಿಲಿಯಮ್ಸ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.