ETV Bharat / sports

ಐಪಿಎಲ್​ನಲ್ಲಿ ದಾಖಲೆಯ 200ನೇ ಪಂದ್ಯವನ್ನಾಡಲಿದ್ದಾರೆ ಎಂ ಎಸ್​ ಧೋನಿ

author img

By

Published : Oct 19, 2020, 5:38 PM IST

ಇಂದು ನಡೆಯುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಧೋನಿ ಪಾಲಿನ 200ನೇ ಪಂದ್ಯವಾಗಲಿದ್ದು, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ. ರೋಹಿತ್ ಶರ್ಮಾ(197), ಸುರೇಶ್ ರೈನಾ(193) ನಂತರದ ಸ್ಥಾನದಲ್ಲಿದ್ದಾರೆ.

ಎಂಎಸ್​ ಧೋನಿ
ಎಂಎಸ್​ ಧೋನಿ

ಅಬುಧಾಬಿ: ರಾಜಸ್ಥಾನ ರಾಯಲ್ಸ್​ ವಿರುದ್ಧ ಇಂದು ನಡೆಯುವ ಪಂದ್ಯ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿಗೆ 200ನೇ ಪಂದ್ಯವಾಗಲಿದೆ.

2008ರಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದ ಧೋನಿ ಇಲ್ಲಿಯವರೆಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ 11 ಆವೃತ್ತಿಗಳಿಂದ 169 ಪಂದ್ಯ, ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ತಂಡದ ಪರ 2 ಆವೃತ್ತಿಗಳಿಂದ 30 ಪಂದ್ಯಗಳನ್ನಾಡಿದ್ದಾರೆ.

ಇಂದು ನಡೆಯುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯ ಧೋನಿ ಪಾಲಿನ 200ನೇ ಪಂದ್ಯವಾಗಲಿದ್ದು, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ. ರೋಹಿತ್ ಶರ್ಮಾ(197), ಸುರೇಶ್ ರೈನಾ(193) ನಂತರದ ಸ್ಥಾನದಲ್ಲಿದ್ದಾರೆ.

ಧೋನಿ ಐಪಿಎಲ್​ನಲ್ಲಿ 199 ಪಂದ್ಯಗಳನ್ನಾಡಿದ್ದು, 23 ಅರ್ಧಶತಕ ಸೇರಿದಂತೆ 4,568 ರನ್ ​ಗಳಿಸಿದ್ದಾರೆ. 84 ಅವರ ಗರಿಷ್ಠ ಸ್ಕೋರ್ ಆಗಿದೆ.

ಧೋನಿ ಟೂರ್ನಿಯಲ್ಲಿ 215 ಸಿಕ್ಸರ್​ ಸಿಡಿಸುವ ಮೂಲಕ ಗರಿಷ್ಠ ಸಿಕ್ಸರ್​ ಸಿಡಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಕ್ರಿಸ್​ ಗೇಲ್​(333) ಹಾಗೂ ಎಬಿ ಡಿ ವಿಲಿಯರ್ಸ್​(231) ಸಿಕ್ಸರ್​ ಸಿಡಿಸಿ ಮೊದಲೆರಡು ಸ್ಥಾನದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.