ETV Bharat / sports

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಗೇಲ್​... ಯುನಿವರ್ಸಲ್​ ಬಾಸ್​ ನಿವೃತ್ತಿ ಘೋಷಿಸಿಲ್ವಂತೆ!

author img

By

Published : Aug 15, 2019, 11:27 AM IST

ಗೇಲ್​

ಭಾರತದ ವಿರುದ್ಧ ಕೊನೆಯ ಏಕದಿನ ಪಂದ್ಯದನ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಾಗಿತ್ತು. ಆದರೆ, ಕ್ರಿಸ್​ ಗೇಲ್​ ನಿವೃತ್ತಿ ಇನ್ನು ಘೋಷಿಸಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಈ ವದಂತಿಗೆ ತೆರೆ ಎಳೆದಿದ್ದಾರೆ.

ಪೋರ್ಟ್​ ಆಫ್​ ಸ್ಪೇನ್​: ವಿಶ್ವ ಕ್ರಿಕೆಟ್​ನ ಯುನಿವರ್ಸಲ್​ ಬಾಸ್​ ಕ್ರಿಸ್​ ಗೇಲ್​ ಭಾರತ ತಂಡದ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಪಾಲ್ಗೊಂಡು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಿದ್ದೇನೆ ಎಂದಿದ್ದರು.

ಆದರೆ, ಟೆಸ್ಟ್​ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಏಕದಿನ ಸರಣಿಗೆ ಆಯ್ಕೆಯಾಗಿದ್ದರಿಂದ ಕೊನೆಯ ಏಕದಿನ ಪಂದ್ಯ ಅವರ ವೃತ್ತಿ ಬದುಕಿನ ಕೊನೆಯ ಪಂದ್ಯವಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಪಂದ್ಯದ ನಂತರ ಮಾತನಾಡಿರುವ ಗೇಲ್​ ನಾನು ನನ್ನ ನಿವೃತ್ತಿ ಘೋಷಿಸಿಲ್ಲ, ನಾನು ಈಗಲೂ ವೆಸ್ಟ್ ಇಂಡೀಸ್​ ಕ್ರಿಕೆಟ್​ನಲ್ಲಿದ್ದೇನೆ. ವಿಂಡೀಸ್​ ಮಂಡಳಿಯಿಂದ ಬರುವ ನೋಟಿಸ್​ಗಾಗಿ ಕಾಯುತ್ತಿರುವೆ ಎಂದು ಹೇಳಿದ್ದಾರೆ.

ಈ ವಿಡಿಯೋವನ್ನು ವಿಂಡೀಸ್​ ಕ್ರಿಕೆಟ್​ ಮಂಡಳಿಯ ಅಧಿಕೃತ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದೆ. ಇದನ್ನು ನೋಡಿದರೆ ಕ್ರಿಸ್​ ಗೇಲ್​ ನಿವೃತ್ತಿ ಸದ್ಯಕ್ಕಿಲ್ಲ ಎಂಬುದು ಬಹಿರಂಗವಾಗಿ ತಿಳಿದುಬಂದಿದೆ.

ಕ್ರಿಸ್​ ಗೇಲ್​ ವಿಶ್ವಕಪ್​ ನಂತರ ನಿವೃತ್ತಿ ಘೋಷಿಸಲಿದ್ದೇನೆ ಎಂದಿದ್ದರು. ನಂತರ ಭಾರತ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಪಾಲ್ಗೊಂಡು ನಂತರ ನಿವೃತ್ತಿ ಘೋಷಿಸಿಲಿದ್ದೇನೆ ಎಂದಿದ್ದ ಗೇಲ್​ ಇದೀಗ ನಾನು ಯಾವುದೇ ನಿವೃತ್ತಿ ಘೋಷಿಸಿಲ್ಲ ಎನ್ನುವ ಮೂಲಕ ಇನ್ನಷ್ಟು ದಿನ ಕ್ರಿಕೆಟ್​ನಲ್ಲಿ ಮುಂದುವರಿಯುವುದಾಗಿ ಖಷಿತಪಡಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಗೇಲ್​ 41 ಎಸೆತಗಳಲ್ಲಿ 5 ಸಿಕ್ಸರ್​ 8 ಬೌಂಡರಿ ಸಹಿತ 72 ರನ್​ಗಳಿಸಿದ್ದರು. ಜೊತೆಗೆ ಲೆವಿಸ್​ ಜೊತೆಗೆ ಮೊದಲ ವಿಕೆಟ್​ಗೆ115 ರನ್​ಗಳ ಜೊತೆಯಾಟ ನೀಡಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.