ETV Bharat / sports

ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ವಿಶ್ವಕಪ್ ಹ್ಯಾಟ್ರಿಕ್ ಹೀರೋ ಚೇತನ್​ ಶರ್ಮಾ ನೇಮಕ

author img

By

Published : Dec 24, 2020, 9:29 PM IST

ಕ್ರಿಕೆಟ್​ ಸಲಹಾ ಸಮಿತಿ 1987ರ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ವಿಕೆಟ್​ ಸಾಧನೆ ಮಾಡಿರುವ ಚೇತನ್​ ಶರ್ಮಾ ಅವರನ್ನು ಸೀನಿಯಾರಿಟಿ ಆಧಾರದ ಮೇಲೆ ಆಯ್ಕೆ ಸಮಿತಿ ಮುಖ್ಯಸ್ಥರನ್ನಾಗಿ ಶಿಫಾರಸು ಮಾಡಿದೆ. ಈ ವರ್ಷದ ಆರಂಭದಲ್ಲಿ ಇದೇ ಸಮಿತಿ ಕನ್ನಡಿಗ ಸುನೀಲ್ ಜೋಶಿ ಮತ್ತು ಹರ್ವಿಂದರ್​ ಸಿಂಗ್​​ರನ್ನು ನೇಮಕ ಮಾಡಿತ್ತು.

ಬಿಸಿಸಿಐ ಆಯ್ಕೆ ಸಮಿತಿ
ಬಿಸಿಸಿಐ ಆಯ್ಕೆ ಸಮಿತಿ

ಮುಂಬೈ: ಮದನ್​ಲಾಲ್​ ಮುಂದಾಳತ್ವದ ಕ್ರಿಕೆಟ್​ ಸಲಹಾ ಸಮಿತಿ(ಸಿಎಸಿ) ಭಾರತ ತಂಡದ ಮಾಜಿ ವೇಗಿ ಚೇತನ್​ ಶರ್ಮಾ, ಅಬೆ ಕುರುವಿಲ್ಲಾ ಮತ್ತು ಡೆಬಾಸಿಸ್ ಮೊಹಂತಿಯವರನ್ನು ಆಯ್ಕೆ ಸಮಿತಿಯ ಸದಸ್ಯರಾಗಿ ಶಿಫಾರಸು ಮಾಡಿದೆ.

ನಂತರ ಸಮಿತಿ 1987ರ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ವಿಕೆಟ್​ ಸಾಧನೆ ಮಾಡಿರುವ ಚೇತನ್​ ಶರ್ಮಾ ಅವರನ್ನು ಸೀನಿಯಾರಿಟಿ ಆಧಾರದ ಮೇಲೆ ಆಯ್ಕೆ ಸಮಿತಿ ಮುಖ್ಯಸ್ಥರನ್ನಾಗಿ ಶಿಫಾರಸು ಮಾಡಿದೆ. ಈ ವರ್ಷದ ಆರಂಭದಲ್ಲಿ ಇದೇ ಸಮಿತಿ ಕನ್ನಡಿಗ ಸುನೀಲ್ ಜೋಶಿ ಮತ್ತು ಹರ್ವಿಂದರ್​ ಸಿಂಗ್​ರನ್ನು ನೇಮಕ ಮಾಡಿತ್ತು.

  • The Cricket Advisory Committee (CAC) comprising Mr Madan Lal, Mr Rudra Pratap Singh and Ms Sulakshana Naik met virtually to select three members of the All-India Senior Selection Committee (Men).

    — BCCI (@BCCI) December 24, 2020 " class="align-text-top noRightClick twitterSection" data=" ">

ಈ ಕುರಿತು ಮಧ್ಯಮದೊಂದಿಗೆ ಮಾತನಾಡಿರುವ ಸಿಎಸಿ ಮುಖ್ಯಸ್ಥ ಮದನ್​ ಲಾಲ್​, ಹೌದು, ಆ ಮೂವರು( ಚೇತನ್​ ಶರ್ಮಾ, ಅಬೆ ಕುರುವಿಲ್ಲಾ ಮತ್ತು ಡೆಬಾಸಿಸ್) ಆಯ್ಕೆಯಾಗಿದ್ದಾರೆ. ಅದರಲ್ಲಿ ಹೆಚ್ಚು ಪಂದ್ಯಗಳನ್ನು ಆಡಿರುವವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ" ಎಂದು ತಿಳಿಸಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿ
ಚೇತನ್​ ಶರ್ಮಾ

ಇದೀಗ ಈ ಮೂರು ಹೊಸ ಸದಸ್ಯರು ಸುನೀಲ್ ಜೋಶಿ ಮತ್ತು ಹರ್ವಿಂದರ್​ ಸಿಂಗ್​ ಅವರ ಜೊತೆಗೆ ಆಯ್ಕೆ ಸಮಿತಿ ಸೇರಿಕೊಳ್ಳಲಿದ್ದಾರೆ. ಈ ಹೊಸ ಆಯ್ಕೆ ಸಮಿತಿ ಮುಂದಿನ ವರ್ಷಾರಂಭದಲ್ಲಿ ನಡೆಯುವ ಇಂಗ್ಲೆಂಡ್​ ವಿರುದ್ಧದ ಸರಣಿಗೆ ತಂಡವನ್ನು ಆಯ್ಕೆ ಮಾಡಲಿದೆ.

ಅಬೆ ಕುರುವಿಲ್ಲಾ
ಅಬೆ ಕುರುವಿಲ್ಲಾ

ಭಾರತದ ಮಾಜಿ ವೇಗಿ ಅಜಿತ್ ಅಗರ್ಕರ್ ರಾಷ್ಟ್ರೀಯ ಆಯ್ಕೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಅಗರ್ಕರ್ ಭಾರತಕ್ಕಾಗಿ 200 ಪಂದ್ಯಗಳನ್ನು ಆಡಿದ್ದರಿಂದ ಈ ಹುದ್ದೆಗೆ ಅವರು ಸೂಕ್ತ ಎನ್ನಲಾಗಿತ್ತು. ಆದರೆ ಅವರನ್ನು ಸಿಎಸಿ ಆಯ್ಕೆ ಮಾಡಿಲ್ಲ. ಅಗರ್ಕರ್​ ನಾಯಕತ್ವ ವಿಭಜನೆಗೆ ಒತ್ತು ನೀಡಿದ್ದರಿಂದ ಅವರನ್ನು ತಿರಸ್ಕರಿಸಿರಬಹುದು ಎಂದು ಹೇಳಲಾಗುತ್ತಿದೆ.

Debasis Mohanty
ಡೆಬಾಸಿಸ್​ ಮೊಹಂತಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.