ETV Bharat / sports

ಟೆಸ್ಟ್​ ಚಾಂಪಿಯನ್​ ಫೈನಲ್​ನಲ್ಲಿ ಮ್ಯಾಚ್ ವಿನ್ನಿಂಗ್​ ಪ್ರದರ್ಶನ ನೀಡಲು ಬಯಸುವೆ ; ಉಮೇಶ್ ಯಾದವ್

author img

By

Published : Apr 3, 2021, 3:56 PM IST

ಗಾಯದ ಕಾರಣ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಎರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಉಮೇಶ್ ಯಾದವ್​ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್​ ಪಂದ್ಯಗಳಲ್ಲಿ ತಂಡ ಸೇರಿಕೊಂಡು ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ..

ಉಮೇಶ್ ಯಾದವ್​
ಉಮೇಶ್ ಯಾದವ್​

ನವದೆಹಲಿ : ಮುಂದಿನ ಮೂರು ವರ್ಷಗಳ ಕಾಲ ತಾವೂ ತಮ್ಮ ದೇಹವನ್ನು ಕ್ರಿಕೆಟ್​ಗಾಗಿ ದಂಡಿಸುತ್ತೇನೆ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಪಂದ್ಯ ಗೆಲ್ಲಿಸುವ ಪ್ರದರ್ಶನ ತೋರಲು ಬಯಸುತ್ತೇನೆ ಎಂದು ಭಾರತ ತಂಡದ ವೇಗಿ ಉಮೇಶ್ ಯಾದವ್​ ತಿಳಿಸಿದ್ದಾರೆ.

ಭಾರತ ತಂಡದ ಪರ ಉಮೇಶ್ ಯಾದವ್​ 48 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಅವರು ಭಾರತದ ಬೆಸ್ಟ್​ ಬೌಲಿಂಗ್ ವಿಭಾಗ ಎಂದೇ ಖ್ಯಾತವಾಗಿರುವ ಇಶಾಂತ್, ಬುಮ್ರಾ ಮತ್ತು ಮೊಹಮ್ಮದ್​ ಶಮಿ ಇರುವ ಗುಂಪಿನಲ್ಲಿ ಕಾಣಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಉತ್ತಮ ಪ್ರದರ್ಶನ ತೋರುತ್ತಿದ್ದರೂ, ಅವರು ತಂಡದ 11ರ ಬಳಗದ ಮೊದಲ ಆಯ್ಕೆಯಾಗಿಲ್ಲ. ಅವರು ಯುವ ಬೌಲರ್​ ಸಿರಾಜ್​ರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.

ಆದರೂ ತಾವೂ ತಂಡಕ್ಕಾಗಿ ಇನ್ನು ಮೂರು ವರ್ಷಗಳ ಕಾಲ ಆಡಬಲ್ಲೆ ಎಂದು ತಿಳಿಸಿದ್ದಾರೆ. "ನನಗೆ 33 ವರ್ಷ ಮತ್ತು ಇನ್ನು ಎರಡು ಅಥವಾ ಮೂರು ವರ್ಷಗಳ ಕಾಲ ನನ್ನ ದೇಹವನ್ನು ದಂಡಿಸಬಲ್ಲೆ. ಈ ವೇಳೆ ಕೆಲವು ಯುವ ಆಟಗಾರರು ತಂಡದಲ್ಲಿ ಕಾಣಿಸಿಕೊಳ್ಳಬಹುದು, ಇದು ಆರೋಗ್ಯಕರ ಸ್ಪರ್ಧೆಯಾಗಿರುತ್ತದೆ ಮತ್ತು ಕೊನೆಗೆ ಇದರಿಂದ ತಂಡಕ್ಕೆ ಅನುಕೂಲವಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಯಾದವ್​ ತಿಳಿಸಿದ್ದಾರೆ.

"4 ಅಥವಾ 5 ಟೆಸ್ಟ್​ಗಳ ಪ್ರವಾಸದಲ್ಲಿ ತಂಡದಲ್ಲಿ ನೀವು 4 ರಿಂದ 5 ಬೌಲರ್​ಗಳನ್ನು ಹೊಂದಿದ್ದರೆ, ಪ್ರತಿಯೊಬ್ಬರು ಎರಡು ಪಂದ್ಯಗಳನ್ನಾಡಿಸುವ ಮೂಲಕ, ಅವರ ಕೆಲದ ಹೊರೆ ಕಡಿಮೆ ಮಾಡಬಹುದು. ಇದರಿಂದ ವೇಗದ ಬೌಲರ್​ಗಳು ದೀರ್ಘಕಾಲದವರೆಗೆ ಆಡಲು ನೆರವಾಗಲಿದೆ " ಉಮೇಶ್ ಹೇಳಿದ್ದಾರೆ.

ಉಮೇಶ್ ಯಾದವ್​ ವಿದೇಶಿ ಸರಣಿಗಿಂತ ತವರಿನಲ್ಲೇ ಹೆಚ್ಚು ಬೌಲಿಂಗ್ ಮಾಡಿದ್ದಾರೆ. ಆದರೆ, ಅವರು ತಮ್ಮ ಅನುಭವ ಎಲ್ಲಾ ಪರಿಸ್ಥಿತಿಗಳಲ್ಲೂ ಪ್ರದರ್ಶನ ತೋರಲು ನೆರವಾಗಲಿ ಎಂದು ಭಾವಿಸಿದ್ದಾರೆ.

"ನಾನು ಹೆಚ್ಚು ವಿದೇಶದಲ್ಲಿ ಆಡಿಲ್ಲ, ಅಂತಹ ವಿಕೆಟ್​ಗಳಲ್ಲಿ ನನಗೆ ಹೆಚ್ಚು ಅನುಭವವಿಲ್ಲ. ಆದರೆ, ನಾನು ಉತ್ತಮ ಟೆಸ್ಟ್​ ಪಂದ್ಯಗಳನ್ನು ಆಡಿದ್ದೇನೆ. ಆದ್ದರಿಂದ ಅನುಭವದಿಂದ ಕೆಲ ನಿರ್ಧಿಷ್ಟ ಪಿಚ್​ಗಳು ಹೇಗೆ ವರ್ತಿಸಲಿವೆ ಎಂದು ಕಲಿತಿರುವುದಾಗಿ" ತಿಳಿಸಿದ್ದಾರೆ.

ಗಾಯದ ಕಾರಣ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಎರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಉಮೇಶ್ ಯಾದವ್​ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್​ ಪಂದ್ಯಗಳಲ್ಲಿ ತಂಡ ಸೇರಿಕೊಂಡು ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ.

ಇದೀಗ ಐಪಿಎಲ್ ಮೂಲಕ ಮತ್ತೆ ಕ್ರಿಕೆಟ್​ಗೆ ಮೂರು ತಿಂಗಳ ನಂತರ ಮರಳಿದ್ದಾರೆ. ಉಮೇಶ್ ಯಾದವ್​ 48 ಟೆಸ್ಟ್​ ಪಂದ್ಯಗಳಲ್ಲಿ 148 ವಿಕೆಟ್​, 75 ಏಕದಿನ ಪಂದ್ಯಗಳಲ್ಲಿ 106 ವಿಕೆಟ್ ಪಡೆದಿದ್ದಾರೆ. ಐಪಿಎಲ್​ನಲ್ಲಿ 121 ಪಂದ್ಯಗಳಲ್ಲಿ 119 ವಿಕೆಟ್ ಪಡೆದಿದ್ದಾರೆ.

ಐಪಿಎಲ್ 2021.. ಅಕ್ಷರ್ ಪಟೇಲ್​ಗೆ ಕೊರೊನಾ ಪಾಸಿಟಿವ್​, ಆತಂಕದಲ್ಲಿ ಕ್ಯಾಪಿಟಲ್ಸ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.