ETV Bharat / sports

ಧವನ್​ ಬೆನ್ನಲ್ಲೇ ಮತ್ತೊಬ್ಬ ಗಾಯಾಳು.... ಟೀಮ್​ ಇಂಡಿಯಾಗೆ ಭಾರಿ ಆಘಾತ!

author img

By

Published : Jun 17, 2019, 2:13 PM IST

ಧವನ್​ ಗಾಯಗೊಂಡು ತಂಡದಿಂದ ಹೊರಬಿದ್ದ ಬೆನ್ನಲ್ಲೇ ಭಾರತ ತಂಡದ ವೇಗದ ಬೌಲಿಂಗ್​ ನೇತೃತ್ವವಹಿಸಿದ್ದ ಭುವನೇಶ್ವರ್​ ಕುಮಾರ್​ ಸಹ ಗಾಯಗೊಂಡಿದ್ದು, ಮುಂದಿನ 2-3 ಪಂದ್ಯಗಳಿಗೆ ಲಭ್ಯರಿರುವುದಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.

bhuvi

ಮ್ಯಾಂಚೆಸ್ಟರ್​: ಧವನ್​ ಗಾಯಗೊಂಡು ತಂಡದಿಂದ ಹೊರಬಿದ್ದ ಬೆನ್ನಲ್ಲೇ ಭಾರತ ತಂಡದ ವೇಗದ ಬೌಲಿಂಗ್​ ನೇತೃತ್ವವಹಿಸಿದ್ದ ಭುವನೇಶ್ವರ್​ ಕುಮಾರ್​ ಸಹ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆರಂಬಿಕ ಆಟಗಾರ ಧವನ್​ ಹೆಬ್ಬೆರಳು ಮುರಿತಕ್ಕೊಳಗಾಗಿ ತಂಡದಿಂದ ಹೊರಬಿದ್ದ ಬೆನ್ನಲ್ಲೇ ನಿನ್ನೆ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಸ್ವಿಂಗ್​ ಕಿಂಗ್​ ಭುವನೇಶ್ವರ್​ ಕುಮಾರ್​ ಎಡಗಾಲಿನ ಹ್ಯಾಮ್​ಸ್ಟ್ರಿಂಗ್​ಗೆ ತುತ್ತಾಗಿದ್ದು, ಮುಂದಿನ ಎರಡು ಅಥವಾ ಮೂರು ಪಂದ್ಯಗಳಿಂದ ದೂರ ಉಳಿಯಬೇಕಾಗಿರುವುದು ಕೊಹ್ಲಿ ಪಡೆಯನ್ನು ಚಿಂತೆಗೀಡು ಮಾಡಿದೆ.

ನಿನ್ನೆಯ ಪಂದ್ಯಲ್ಲಿ ಕೇವಲ 2.4 ಓವರ್​ಗಳನ್ನು ಮಾತ್ರ ಎಸೆದಿದ್ದ ಭುವಿ, ಹ್ಯಾಮ್​ಸ್ಟ್ರಿಂಗ್​ (ಮಂಡಿರಜ್ಜು) ನೋವಿಗೆ ತುತ್ತಾಗಿದ್ದರು. ನಂತರ ಇವರ ಓವರ್​ರನ್ನು ವಿಜಯ್​ ಶಂಕರ್​ ಪೂರ್ಣಗೊಳಿಸಿದ್ದರು.

ಈ ಬಗ್ಗೆ ಮಾತನಾಡಿರುವ ಕೊಹ್ಲಿ ಭುವನೇಶ್ವರ್​ ರಂತಹ ಬೌಲರ್​ ಸೇವೆ ಕಳೆದುಕೊಳ್ಳುತ್ತಿರುವುದು ತಂಡಕ್ಕೆ ಹಿನ್ನಡೆಯಾಗಬಹುದು. ಆದರೆ, ಮುಂದಿನ ಪಂದ್ಯಗಳು ಅಫ್ಘಾನಿಸ್ತಾನ ಮತ್ತು ವೆಸ್ಟ್​​ ಇಂಡೀಸ್​ ವಿರುದ್ಧ ನಡೆಯುವುದರಿಂದ ತಂಡಕ್ಕೆ ಆಘಾತವೇನಾಗುವುದಿಲ್ಲ. ಈ ಪಂದ್ಯಗಳಿಗೆ ಮತ್ತೊಬ್ಬ ಹಿರಿಯ ವೇಗಿ ಮೊಹಮ್ಮದ್​ ಶಮಿ ತಂಡ ಸೇರಿಕೊಳ್ಳಲಿದ್ದಾರೆ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.