ETV Bharat / sports

ಉಮೇಶ್ ಯಾದವ್ 1 ಕೋಟಿ ರೂ.ಗೆ ಸೇಲ್​ ಆಗಿದ್ದು ತುಂಬಾ ಆಘಾತವಾಯ್ತು: ಗೌತಮ್​ ಗಂಭೀರ್​!

author img

By

Published : Feb 19, 2021, 4:28 PM IST

ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಕೇವಲ 1 ಕೋಟಿ ರೂ.ಗೆ ಸೇಲ್​ ಆಗಿದ್ದು, ಇದಕ್ಕೆ ಗೌತಮ್​ ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ.

Umesh Yadav
Umesh Yadav

ಚೆನ್ನೈ: 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ಗಾಗಿ ನಿನ್ನೆ ಚೆನ್ನೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಕೇವಲ 1 ಕೋಟಿ ರೂ.ಗೆ ಸೇಲ್ ಆಗಿದ್ದು, ಡೆಲ್ಲಿ ಕ್ಯಾಪಿಟಲ್​ ಇವರನ್ನ ಖರೀದಿ ಮಾಡಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಪ್ಲೇಯರ್​, ಬಿಜೆಪಿ ಸಂಸದ ಗೌತಮ್​ ಗಂಭೀರ್​, ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಕೇವಲ 1 ಕೋಟಿ ರೂ.ಗೆ ಸೇಲ್​ ಆಗಿದ್ದು ತುಂಬಾ ಆಘಾತವಾಯಿತು ಎಂದಿದ್ದಾರೆ.

Gautam Gambhir
ಗೌತಮ್ ಗಂಭೀರ್​ ಬೇಸರ

ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿದ್ದ ಉಮೇಶ್ ಯಾದವ್​ಗೆ ತಂಡ ರಿಲೀಸ್ ಮಾಡಿತ್ತು. ಈ ಸಲ ಹೆಚ್ಚಿನ ಮೊತ್ತಕ್ಕೆ ಈ ಪ್ಲೇಯರ್​ ಖರೀದಿಯಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಮೂಲ ಬೆಲೆಗೆ ಅವರನ್ನ ಖರೀದಿ ಮಾಡಲಾಗಿದೆ.

ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಲಂಕಾ ಬೌಲರ್ ಧಮ್ಮಿಕಾ ಪ್ರಸಾದ್ ವಿದಾಯ

ಐಪಿಎಲ್​ನಲ್ಲಿ 121 ಪಂದ್ಯಗಳಿಂದ 119 ವಿಕೆಟ್​ ಕಬಳಿಕೆ ಮಾಡಿರುವ ಈ ಪ್ಲೇಯರ್​​ 135-140ರ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಈ ಪ್ಲೇಯರ್ ಹೆಚ್ಚಿನ ಮೊತ್ತಕ್ಕೆ ಸೇಲ್ ಆಗಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿರುವ ಗೌತಮ್​ ಗಂಭೀರ್​, ಡೆಲ್ಲಿ ತಂಡಕ್ಕೆ ಇಂತಹ ಬೌಲರ್​ ಅಗತ್ಯವಿತ್ತು. ಇಶಾಂತ್ ಶರ್ಮಾಗೆ ಮೇಲಿಂದ ಮೇಲೆ ಗಾಯಗಳಾಗುತ್ತಿರುವುದು ತಂಡಕ್ಕೆ ದೊಡ್ಡ ಸಮಸ್ಯೆಯಾಗಿತ್ತು ಎಂದಿದ್ದಾರೆ. 2020ರ ಐಪಿಎಲ್​ನಲ್ಲಿ ಕೇವಲ ಎರಡು ಟಿ-20 ಪಂದ್ಯಗಳನ್ನಾಡಿದ್ದ ಉಮೇಶ್ ಯಾದವ್​ 7 ಓವರ್​ಗಳಿಂದ ಯಾವುದೇ ವಿಕೆಟ್ ಪಡೆದುಕೊಳ್ಳದೇ 83ರನ್​ ನೀಡಿ ದುಬಾರಿ ಬೌಲರ್​ ಆಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.