ETV Bharat / sports

ತವರಿನ ಅಭಿಮಾನಿಗಳ ಮುಂದೆ ವರ್ಷದ ಮೊದಲ ಶತಕ ಸಿಡಿಸಿ ಅಬ್ಬರಿಸಿದ ಡೆವೊನ್ ಕಾನ್ವೆ

author img

By

Published : Jan 1, 2022, 4:29 PM IST

ಕಿವೀಸ್​ ಮೊದಲ ದಿನ 87.3 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 258 ರನ್​ಗಳಿಸಿದೆ. ಕೇನ್​ ವಿಲಿಯಮ್ಸನ್​ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದ ಟಾಮ್ ಲೇಥಮ್​ ಕೇವಲ 1 ರನ್​ಗೆ ವಿಕೆಟ್​ ಒಪ್ಪಿಸಿದರೆ, ವಿಲ್ ಯಂಗ್ 52, ರಾಸ್ ಟೇಲರ್​ 31 ರನ್​ಗಳಿಸಿ ಔಟಾದರು. ಹೆನ್ರಿ ನಿಕೋಲ್ಸ್ ಅಜೇಯ 32 ರನ್​ಗಳಿಸಿದ್ದಾರೆ.

Devon Conway century
ಡೆವೊನ್ ಕಾನ್ವೆ ಶತಕ

ಮೌಂಟ್​ ಮಾಂಗುನುಯಿ: ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಅತಿಥೇಯ ನ್ಯೂಜಿಲ್ಯಾಂಡ್​ ತಂಡದ ಡೆವೊನ್ ಕಾನ್ವೆ ಮೊದಲ ದಿನವೇ ಶತಕ ಸಿಡಿಸಿದ್ದಾರೆ. ಈ ಮೂಲಕ ತವರಿನ ಮೊದಲ ಪಂದ್ಯ ಮತ್ತು ವಿದೇಶದ ಪಂದ್ಯದ ಮೊದಲ ದಿನವೇ ಶತಕ ಸಿಡಿಸಿದ ವಿಶ್ವದ ಏಕೈಕ ಟೆಸ್ಟ್​ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

ಕಾನ್ವೆ ಈ ಮೊದಲು ಇಂಗ್ಲೆಂಡ್ ವಿರುದ್ಧ 2021ರ ಜೂನ್​ನಲ್ಲಿ ಲಾರ್ಡ್ಸ್​ನಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿ ಮೊದಲ ದಿನವೇ ಶತಕ ಸಿಡಿಸಿದ್ದರು. ನಂತರ ಅದನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ್ದರು. ಇದೀಗ ತವರಿನ ಅಭಿಮಾನಿಗಳ ಮುಂದೆ ನಡೆಯುತ್ತಿರುವ ಮೊದಲ ಪಂದ್ಯದಲ್ಲೂ ಶತಕ ಸಿಡಿಸಿದ್ದಾರೆ. ವಿಶೇಷವೆಂದರೆ ಇಲ್ಲೂ ಕೂಡ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಕಾನ್ವೆ 227 ಎಸೆತಗಳಲ್ಲಿ 5 ವಿಕೆಟ್ ಕಳೆದುಕೊಂಡು 122 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಒಟ್ಟಾರೆ ಕಿವೀಸ್​ ಮೊದಲ ದಿನ 87.3 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 258 ರನ್​ಗಳಿಸಿದೆ. ಕೇನ್​ ವಿಲಿಯಮ್ಸನ್​ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದ ಟಾಮ್ ಲೇಥಮ್​ ಕೇವಲ 1 ರನ್​ಗೆ ವಿಕೆಟ್​ ಒಪ್ಪಿಸಿದರೆ, ವಿಲ್ ಯಂಗ್ 52, ರಾಸ್ ಟೇಲರ್​ 31 ರನ್​ಗಳಿಸಿ ಔಟಾದರು. ಹೆನ್ರಿ ನಿಕೋಲ್ಸ್ ಅಜೇಯ 32 ರನ್​ಗಳಿಸಿದ್ದಾರೆ.

ಇದನ್ನೂ ಓದಿ:ಕೊಹ್ಲಿ ಮತ್ತು ರೋಹಿತ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಆಯ್ಕೆಸಮಿತಿ ಅಧ್ಯಕ್ಷ ಚೇತನ್ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.