ETV Bharat / sports

ಕೌಂಟಿಯಲ್ಲಿ ಪೂಜಾರ ದರ್ಬಾರ್​... ಶತಕ ಸಿಡಿಸಿ ಫಾರ್ಮ್​ಗೆ ಮರಳಿದ ಟೆಸ್ಟ್ ಸ್ಪೆಷಲಿಸ್ಟ್

author img

By

Published : Apr 17, 2022, 8:48 PM IST

ಪೂಜಾರ 238 ಎಸೆತಗಳಲ್ಲಿ 14 ಬೌಂಡರಿಗಳ ಸಹಿತ ತಮ್ಮ 51ನೇ ಪ್ರಥಮ ದರ್ಜೆ ಶತಕ ಪೂರೈಸಿದರು. ಇದು ಅವರ 4ನೇ ಕೌಂಟಿ ಚಾಂಪಿಯನ್​ಶಿಪ್ ಶತಕವಾದರೆ, ಸಸೆಕ್ಸ್ ಪರ ಮೊದಲ ಶತಕವಾಗಿದೆ.

Cheteshwar Pujara Scores Century
ಚೇತೇಶ್ವರ್ ಪೂಜಾರ ಶತಕ

ಡರ್ಬಿ: ಭಾರತ ತಂಡದ ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ ಕೌಂಟಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.

ಕಳಪೆ ಫಾರ್ಮ್​ನಿಂದ ಭಾರತ ತಂಡದಿಂದ ಹೊರಬಿದ್ದಿರುವ ಪೂಜಾರ ರಾಷ್ಟ್ರೀಯ ತಂಡಕ್ಕೆ ಕಮ್​ಬ್ಯಾಕ್​ ಮಾಡುವುದಕ್ಕೆ ಸಾಕಷ್ಟು ಹರಸಹಾಸ ಮಾಡುತ್ತಿದ್ದಾರೆ. ರಣಜಿ ಟ್ರೋಫಿಯಲ್ಲಿ ಆಡಿದ 2 ಪಂದ್ಯಗಳಲ್ಲಿ 2 ಅರ್ಧಶತಕ ಸಿಡಿಸಿದ್ದ ಪೂಜಾರ ಇದೀಗ ಕೌಂಟಿ ಕ್ರಿಕೆಟ್​​ನಲ್ಲಿ ಸಸೆಕ್ಸ್ ಪರ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡರ್ಬಿಶೈರ್ 505 ರನ್​ಗಳಿಸಿದ ಡಿಕ್ಲೇರ್ ಘೋಷಿಸಿಕೊಂಡಿತ್ತು. ಈ ಮೊತ್ತವನ್ನು ಬೆನ್ನಟಿದ ಸಸೆಕ್ಸ್​ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 174 ರನ್​ಗಳಿಗೆ ಆಲೌಟ್ ಆಗಿತ್ತು. ಪೂಜಾರ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 6 ರನ್​ಗಳಿಗೆ ವಿಕೆಟ್ ಒಪ್ಪಿಸಿದ್ದರು.

ಆದರೆ ಫಾಲೋ ಆನ್​ಗೆ ತುತ್ತಾಗಿ 2ನೇ ಇನ್ನಿಂಗ್ಸ್​ ಆರಂಭಿಸಿದ ಸಸೆಕ್ಸ್​ ತಕ್ಕ ಪ್ರತ್ಯುತ್ತರ ನೀಡಿದೆ. ತಂಡದ ಮೊತ್ತ 145ಕ್ಕೆ 2 ವಿಕೆಟ್ ಕಳೆದುಕೊಂಡಿದ್ದಾಗ ಬ್ಯಾಟಿಂಗ್​ಗೆ ಆಗಮಿಸಿದ ಪೂಜಾರ 238 ಎಸೆತಗಳಲ್ಲಿ 14 ಬೌಂಡರಿಗಳ ಸಹಿತ ತಮ್ಮ 51ನೇ ಪ್ರಥಮ ದರ್ಜೆ ಶತಕ ಪೂರೈಸಿದರು. ಇದು ಅವರ 4ನೇ ಕೌಂಟಿ ಚಾಂಪಿಯನ್​ಶಿಪ್ ಶತಕವಾದರೆ, ಸಸೆಕ್ಸ್ ಪರ ಮೊದಲ ಶತಕವಾಗಿದೆ.

ಶತಕದ ನಂತರವೂ ಬ್ಯಾಟಿಂಗ್ ಮುಂದುವರಿಸಿರುವ ಪೂಜಾರ ನಾಯಕ ಟಾಮ್​ ಹೇನ್ಸ್​ ಜೊತೆಗೂಡಿ 309 ರನ್​ಗಳ ಬೃಹತ್​ ಜೊತೆಯಾಟ ನಡೆಸಿ ಕ್ರೀಸ್​ನಲ್ಲಿದ್ದಾರೆ. ಟೀ ವಿರಾಮಕ್ಕೂ ಮುನ್ನ ಪೂಜಾರ 336 ಎಸೆತಗಳಲ್ಲಿ 18 ಬೌಂಡರಿ ಸಹಿತ 159 ರನ್​ ಮತ್ತು ಹೇನ್ಸ್ 472 ಎಸೆತಳಲ್ಲಿ 21 ಬೌಂಡರಿಗಳ ನೆರವಿನಿದ 233 ರನ್​ಗಳಿಸಿದ್ದಾರೆ. ಇನ್ನು 31 ಓವರ್​ಗಳ ಆಟ ಬಾಕಿಯಿದ್ದು, ಈ ಪಂದ್ಯದ ಡ್ರಾನಲ್ಲಿ ಅಂತ್ಯವಾಗಲಿದೆ.

ಇದನ್ನೂ ಓದಿ:0 W 0 W W W! 20ನೇ ಓವರ್​ನಲ್ಲಿ ಒಂದೂ ರನ್​ ನೀಡದೆ 4 ವಿಕೆಟ್​ ಕಿತ್ತ ಉಮ್ರಾನ್ ಮಲಿಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.