ETV Bharat / sports

ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಸತತ 2 ಶತಕ ಸಿಡಿಸಿದ ಚೇತೇಶ್ವರ್​ ಪೂಜಾರ

author img

By

Published : Apr 23, 2022, 4:43 PM IST

ಡರ್ಬಿ ವಿರುದ್ಧ ಸಸೆಕ್ಸ್​ ಪರ ಪದಾರ್ಪಣೆ ಮಾಡಿದ್ದ ಪೂಜಾರ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 6 ರನ್​ಗಳಿಗೆ ಔಟ್​ ಆದರೂ 2ನೇ ಇನ್ನಿಂಗ್ಸ್​ನಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದರು. ಇದೀಗ ವೋರ್ಸೆಸ್ಟರ್‌ಶೈರ್ ವಿರುದ್ಧದ ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಪೂರೈಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

cheteshwar pujara hits 2nd consecutive century in county championship
ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಸತತ 2 ಶತಕ ಸಿಡಿಸಿದ ಚೇತೇಶ್ವರ್​ ಪೂಜಾರ

ವೋರ್ಸೆಸ್ಟರ್‌ಶೈರ್​: ಭಾರತ ಟೆಸ್ಟ್​​ ತಂಡದಿಂದ ಹೊರಬಿದ್ದಿರುವ ಚೇತೇಶ್ವರ್ ಪೂಜಾರ ಫಾರ್ಮ್​ಗೆ ಮರಳಿದ್ದಾರೆ. ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಸತತ 2ನೇ ಶತಕ ಬಾರಿಸಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ವೈಫಲ್ಯದ ಬಳಿಕ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಅವರು ಮತ್ತೆ ತಂಡಕ್ಕೆ ಕಮ್​ಬ್ಯಾಕ್ ಮಾಡಿಲ್ಲ. ಪ್ರಸ್ತುತ ಕೌಂಟಿ ಚಾಂಪಿಯನ್​ಶಿಪ್​​ನಲ್ಲಿ ಸಸೆಕ್ಸ್​ ಕ್ಲಬ್​ ಪರ ಆಡುತ್ತಿದ್ದು, ಆಡಿದ ಎರಡೂ ಪಂದ್ಯಗಳಲ್ಲೂ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

ಡರ್ಬಿ ವಿರುದ್ಧ ಸಸೆಕ್ಸ್​ ಪರ ಪದಾರ್ಪಣೆ ಮಾಡಿದ್ದ ಪೂಜಾರ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 6 ರನ್​ಗಳಿಗೆ ಔಟಾದರೂ 2ನೇ ಇನ್ನಿಂಗ್ಸ್​ನಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದರು. ಇದೀಗ ಅದರ ಬೆನ್ನಲ್ಲೇ ವೋರ್ಸೆಸ್ಟರ್‌ಶೈರ್ ವಿರುದ್ಧದ ಮೊದಲ ಇನ್ನಿಂಗ್ಸ್​ನಲ್ಲಿ ಶತಕ ಪೂರೈಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ತಾವೆದುರಿಸಿದ 184ನೇ ಎಸೆತವನ್ನು ಬೌಂಡರಿ ಬಾರಿಸುವ ಮೂಲಕ ಪೂಜಾರ ಶತಕ ಪೂರೈಸಿದರು. ಇವರ ಇನ್ನಿಂಗ್ಸ್​ನಲ್ಲಿ 14 ಆಕರ್ಷಕ ಬೌಂಡರಿಗಳು ಸೇರಿವೆ. ಪೂಜಾರ ಏಕಾಂಗಿ ಹೋರಾಟದ ನೆರವಿನಿಂದ ಸಸೆಕ್ಸ್​ ವೋರ್ಸೆಸ್ಟರ್‌ಶೈರ್ ತಂಡದ 492 ರನ್​ಗಳಿಗೆ ಉತ್ತರವಾಗಿ 5 ವಿಕೆಟ್ ಕಳೆದುಕೊಂಡು 190 ರನ್​ಗಳಿಸಿತು.

ಪೂಜಾರ ಡರ್ಬಿಶೈರ್ ವಿರುದ್ಧ 387 ಎಸೆತಗಳಲ್ಲಿ 23 ಬೌಂಡರಿಗಳಸಹಿತ ಅಜೇಯ 201ರನ್​ಗಳಿಸಿದ್ದರು. ಒಟ್ಟಾರೆ 3 ಇನ್ನಿಂಗ್ಸ್​ಗಳಿಂದ 300+ ರನ್​ಗಳಿಸಿದ್ದಾರೆ.

ಇದನ್ನೂ ಓದಿ:ಪೂಜಾರ 201 ನಾಟೌಟ್ : ಕೌಂಟಿ ಚಾಂಪಿಯನ್​ಶಿಪ್​ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದ 2ನೇ ಭಾರತೀಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.