ETV Bharat / sports

ವಿಸ್ಡನ್​ 'ವರ್ಷದ 5 ಕ್ರಿಕೆಟಿಗ'ರ ಪಟ್ಟಿಯಲ್ಲಿ ರೋಹಿತ್-ಬುಮ್ರಾಗೆ ಸ್ಥಾನ

author img

By

Published : Apr 21, 2022, 4:18 PM IST

ಇಂಗ್ಲೆಂಡ್​ನಲ್ಲಿ 2-1ರಲ್ಲಿ ಟೆಸ್ಟ್​ ಸರಣಿ ಗೆಲ್ಲುವುದರಲ್ಲಿ ರೋಹಿತ್ ಶರ್ಮಾ ತಂಡದ ಹೃದಯಭಾಗವಾಗಿದ್ದರು. ಲಾರ್ಡ್ಸ್​ನಲ್ಲಿ ಸಂಕಷ್ಟದ ಪರಿಸ್ಥಿತಿಗಳಲ್ಲಿ ಸೊಗಸಾದ 83 ರನ್​ ಮತ್ತು ಓವಲ್​ನಲ್ಲಿ 127 ರನ್​ಗಳಿಸಿ 99 ರನ್​ಗಳ ಇನ್ನಿಂಗ್ಸ್ ಹಿನ್ನಡೆಯ ಹೊರತಾಗಿಯೂ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದ್ದರು ಎಂದು ವಿಸ್ಡನ್​ ಸಂಪಾದಕ ಲಾರೆನ್ಸ್ ಬೂತ್ ಅವರು​ ಭಾರತದ ಹೊಸ ನಾಯಕನ ಬಗ್ಗೆ ಬರೆದಿದ್ದಾರೆ.

Bumrah, Rohit among Wisden's five 'Cricketers of the Year'
ವಿಸ್ಡನ್ ಕ್ರಿಕೆಟಿಗರ ಪಟ್ಟಿ

ಲಂಡನ್: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ವೇಗಿ ಜಸ್ಪ್ರೀತ್​ ಬುಮ್ರಾ 2022ರ ಸಾಲಿನ ವಿಸ್ಡನ್ ವರ್ಷದ 5 ಕ್ರಿಕೆಟಿಗರ ಪಟ್ಟಿಯಲ್ಲಿ ಅವಕಾಶ ಪಡೆದಿದ್ದಾರೆ. ಇವರ ಜೊತೆಗೆ ನ್ಯೂಜಿಲೆಂಡ್ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ, ಇಂಗ್ಲೆಂಡ್ ವೇಗಿ ಒಲಿ ರಾಬಿನ್ಸನ್ ಮತ್ತು ದಕ್ಷಿಣ ಆಫ್ರಿಕಾದ ನಾಯಕಿ ಡೇನ್ ವ್ಯಾನ್ ನೀಕರ್ಕ್ ಕೂಡ ಈ ಗೌರವಕ್ಕೆ ಪಾತ್ರರಾಗಿರುವ ಇತರೆ ಮೂವರು ಕ್ರಿಕೆಟಿಗರಾಗಿದ್ದಾರೆ.

ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಜೋ ರೂಟ್ 2022ರ ಆವೃತ್ತಿಯ ವಿಶ್ವದ ಲೀಡಿಂಗ್ ಕ್ರಿಕೆಟರ್ ಎಂದು ಗುರುತಿಸಿಕೊಂಡಿದ್ದಾರೆ. ರೂಟ್ 2021ರಲ್ಲಿ ಇಡೀ ತಂಡ ಕಳಪೆ ಪ್ರದರ್ಶನ ತೋರಿದರೂ 6 ಶತಕಗಳ ಸಹಿತ 15,000ಕ್ಕೂ ಹೆಚ್ಚು ರನ್​ಗಳಿಸಿದ್ದರು. ದಕ್ಷಿಣ ಆಫ್ರಿಕಾದ ಮಹಿಳಾ ತಂಡದ ಆರಂಭಿಕ ಬ್ಯಾಟರ್ ಲಿಜೆಲ್ಲೆ ಲೀ ಅವರು ವಿಶ್ವದ ಮಹಿಳಾ ಲೀಡಿಂಗ್ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಸ್ಪ್ರೀತ್ ಬುಮ್ರಾ ಕಳೆದ ಇಂಗ್ಲೆಂಡ್​ ಪ್ರವಾಸದಲ್ಲಿ ಭಾರತದ ಎರಡು ಗೆಲುವುಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಲಾರ್ಡ್ಸ್​ನಲ್ಲಿ 33ಕ್ಕೆ 3 ವಿಕೆಟ್​ ಪಡೆದರೆ, ಓವಲ್​ ಟೆಸ್ಟ್​​ನಲ್ಲಿ ಸತತ ಎರಡು ಓವರ್​ಗಳಲ್ಲಿ ಜಾನಿ ಬೈರ್​ಸ್ಟೋವ್ ಮತ್ತು ಒಲಿ ಪೋಪ್ ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಅಲ್ಲದೆ ಮಳೆಯಿಂದ ಟ್ರೆಂಟ್​ ಬ್ರಿಡ್ಜ್​ ಟೆಸ್ಟ್​​ ಕೊನೆಯ ದಿನ ರದ್ದಾಗದಿದ್ದರೆ ಅವರ 9 ವಿಕೆಟ್​ ಪ್ರದರ್ಶನ ಭಾರತಕ್ಕೆ ಮತ್ತೊಂದು ಗೆಲುವು ತಂದುಕೊಡುತ್ತಿತ್ತು ಅನ್ನಿಸುತ್ತದೆ. ಇನ್ನು 4 ಪಂದ್ಯಗಳಲ್ಲಿ ಅವರು 18 ವಿಕೆಟ್ ಮತ್ತು ತಂಡಕ್ಕೆ ಕೆಲವು ಅತ್ಯಮೂಲ್ಯವಾದ ರನ್​ಗಳನ್ನು ಅವರು ಬಾರಿಸಿದ್ದಾರೆ ಎಂದು ಬುಮ್ರಾ ಆಯ್ಕೆಯ ಬಗ್ಗೆ ವಿಸ್ಡನ್​ ಸಂಪಾದಕ ಲಾರೆನ್ಸ್ ಬೂತ್​ ತಿಳಿಸಿದ್ದಾರೆ.

ಇಂಗ್ಲೆಂಡ್​ನಲ್ಲಿ 2-1ರಲ್ಲಿ ಟೆಸ್ಟ್​ ಸರಣಿ ಗೆಲ್ಲುವುದರಲ್ಲಿ ರೋಹಿತ್ ಶರ್ಮಾ ತಂಡದ ಹೃದಯ ಭಾಗವಾಗಿದ್ದರು. ಲಾರ್ಡ್ಸ್​ನಲ್ಲಿ ಸಂಕಷ್ಟದ ಪರಿಸ್ಥಿತಿಗಳಲ್ಲಿ ಸೊಗಸಾದ 83 ರನ್​ ಮತ್ತು ಓವಲ್​ನಲ್ಲಿ 127 ರನ್​ಗಳಿಸಿ 99 ರನ್​ಗಳ ಇನ್ನಿಂಗ್ಸ್ ಹಿನ್ನಡೆಯ ಹೊರತಾಗಿಯೂ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದ್ದರು ಎಂದು ಬೂತ್​ ಭಾರತದ ಹೊಸ ನಾಯಕನ ಬಗ್ಗೆ ಬರೆದಿದ್ದಾರೆ. ರೋಹಿತ್ ಆ ಸರಣಿಯಲ್ಲಿ 368 ರನ್​ಗಳಿಸಿ ಭಾರತದ ಗರಿಷ್ಠ ಸ್ಕೋರರ್​ ಆಗಿದ್ದರು ಎನ್ನುವುದನ್ನು ವಿಸ್ಡನ್ ಸಂಪಾದಕ ತಿಳಿಸಿದ್ದಾರೆ.

ಇಂಗ್ಲೆಂಡ್​ನ ರೂಟ್​ ಬಗ್ಗೆಯೂ ಬರೆದಿರುವ ಬೂತ್, ಇಡೀ ಇಂಗ್ಲೆಂಡ್​ ತಂಡ ಸಾಕಷ್ಟು ಪ್ರಯಾಸಪಡುತ್ತಿದ್ದರು 2021ರಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಕ್ಯಾಲೆಂಡರ್​ ವರ್ಷದಲ್ಲಿ 6 ಶತಕಸಹಿತ 1708ರನ್​ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ಕೇವಲ ಮೊಹಮ್ಮದ್ ಯೂಸುಫ್ ಮತ್ತು ವಿವಿಯನ್​ ರಿಚರ್ಡ್ಸ್ ಮಾತ್ರ ಇಂಗ್ಲೆಂಡ್ ನಾಯಕನಿಗಿಂತ ಒಂದು ವರ್ಷದಲ್ಲಿ ಹೆಚ್ಚಿನ ರನ್​ಗಳಿಸಿದ ದಾಖಲೆ ಹೊಂದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಆ್ಯಡಂ ಮಿಲ್ನೆ ಬದಲಿಗೆ ಸಿಎಸ್​ಕೆ ಸೇರಿದ 'ಜೂನಿಯರ್ ಮಾಲಿಂಗ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.