ETV Bharat / sports

ICC ODI rankings: ಏರಿಕೆ ಕಂಡ ರಿಷಭ್​, ಹಾರ್ದಿಕ್​; ಬುಮ್ರಾ, ವಿರಾಟ್ ಕುಸಿತ​​​

author img

By

Published : Jul 20, 2022, 5:47 PM IST

ಐಸಿಸಿ ಏಕದಿನ ರ‍್ಯಾಂಕಿಂಗ್ ನೂತನ ಪಟ್ಟಿ ರಿಲೀಸ್​ ಆಗಿದ್ದು, ಎಲ್ಲ ವಿಭಾಗಳಲ್ಲೂ ಟೀಂ ಇಂಡಿಯಾ ಪ್ಲೇಯರ್ಸ್​​ ಕಾಣಿಸಿಕೊಂಡಿದ್ದಾರೆ.

ICC ODI rankings
ICC ODI rankings

ದುಬೈ: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​​ ರ‍್ಯಾಂಕಿಂಗ್ ಪಟ್ಟಿ ರಿಲೀಸ್​ ಆಗಿದ್ದು, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಎರಡನೇ ಸ್ಥಾನಕ್ಕೆ ಕುಸಿತ ಕಂಡಿದ್ದು, ನ್ಯೂಜಿಲ್ಯಾಂಡ್​ ವೇಗದ ಬೌಲರ್​ ಟ್ರೆಂಟ್​ ಬೌಲ್ಟ್​​​ ನಂಬರ್​ ಓನ್​​ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.

ಬ್ಯಾಟಿಂಗ್​​​ನಲ್ಲಿ ಪಾಕಿಸ್ತಾನ ಕ್ಯಾಪ್ಟನ್​ ಬಾಬರ್​ ಆಜಂ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಇಮಾಮ್​ ಉಲ್ ಹಕ್​ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕಾದ ರೆಸ್ಸಿ ವಂಡರ್ ಡುಸ್ಸೆನ್ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದರಿಂದ ವಿರಾಟ್​​ ಕೊಹ್ಲಿ 4ನೇ ಸ್ಥಾನಕ್ಕೆ ಇಳಿಕೆಯಾಗಿದ್ದಾರೆ. ಉಳಿದಂತೆ 5ನೇ ಸ್ಥಾನದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್​ ರೋಹಿತ್ ಶರ್ಮಾ ಇದ್ದಾರೆ.

  • A new No.1!

    A busy week in ODI cricket has led to a number of changes in the @MRFWorldwide ICC Men's Player Rankings.

    Details 👇

    — ICC (@ICC) July 20, 2022 " class="align-text-top noRightClick twitterSection" data=" ">

ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯಾ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಪಂತ್​​ ಸದ್ಯ 52ನೇ ಸ್ಥಾನದಲ್ಲಿದ್ದು,ಹಾರ್ದಿಕ್ ಪಾಂಡ್ಯ ಆಲ್​ರೌಂಡರ್​​ಗ ವಿಭಾಗದಲ್ಲಿ 8ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಬೌಲಿಂಗ್​ ವಿಭಾಗದಲ್ಲಿ ಟೀಂ ಇಂಡಿಯಾದ ಏಕೈಕ ಬೌಲರ್ ಬುಮ್ರಾ 2ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಯಾವುದೇ ಪ್ಲೇಯರ್ಸ್​ ಸ್ಥಾನ ಪಡೆದುಕೊಂಡಿಲ್ಲ. ಇಂಗ್ಲೆಂಡ್ ಸರಣಿಯಲ್ಲಿ 7 ವಿಕೆಟ್ ಪಡೆದುಕೊಂಡಿರುವ ಯಜುವೇಂದ್ರ ಚಹಲ್​​ ಸದ್ಯ 16ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.