ETV Bharat / sports

ಬಡಾ ದಿಲ್‌ವಾಲಾ ಬ್ರೆಟ್‌ ಲೀ.. ಭಾರತ ನನ್ನ 2ನೇ ಮನೆ ಎಂದು ಕೊರೊನಾ ಹೋರಾಟಕ್ಕೆ ₹41 ಲಕ್ಷ ನೆರವು..

author img

By

Published : Apr 27, 2021, 7:35 PM IST

ಇದು ನಾವೆಲ್ಲರೂ ಒಂದಾಗಬೇಕಾದ ಸಮಯ ಮತ್ತು ಕಷ್ಟದಲ್ಲಿರುವವರಿಗೆ ಸಾಧ್ಯವಾದಷ್ಟು ನೆರವಾಗಬೇಕಾಗಿದೆ. ಈ ಸಂದರ್ಭದಲ್ಲಿ ಹಗಲು ರಾತ್ರಿಯನ್ನದೇ ದುಡಿಯುತ್ತಿರುವ ಕೊರೊನಾ ವಾರಿಯರ್ಸ್​ಗೆ ನಾನು ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ..

ಕೊರೊನಾ ವಿರುದ್ಧದ ಹೋರಾಟಕ್ಕೆ 41 ಲಕ್ಷ ದೇಣಿಗೆ ನೀಡಿದ ಬ್ರೆಟ್​ ಲೀ
ಕೊರೊನಾ ವಿರುದ್ಧದ ಹೋರಾಟಕ್ಕೆ 41 ಲಕ್ಷ ದೇಣಿಗೆ ನೀಡಿದ ಬ್ರೆಟ್​ ಲೀ

ನವದೆಹಲಿ : ಭಾರತದಲ್ಲಿ ನಿತ್ಯ 3 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿತರಾಗುತ್ತಿದ್ದಾರೆ. 2 ಸಾವಿರಕ್ಕೂ ಹೆಚ್ಚು ಮಂದಿ ಸಾವೀಗೀಡಾಗುತ್ತಿದ್ದಾರೆ.

ಕೆಲವರಿಗೆ ಆಸ್ಪತ್ರೆಯಲ್ಲಿ ಬೆಡ್​ ಸಿಗುತ್ತಿಲ್ಲ, ಇನ್ನೂ ಕೆಲವರಿಗೆ ಆಸ್ಪತ್ರೆ ಸೇರಲೂ ಸಾಧ್ಯವಾಗದೇ ಸಂಕಟಪಡುತ್ತಿದ್ದಾರೆ. ಭಾರತೀಯ ಸ್ಥಿತಿಯನ್ನು ಕಂಡು ಮರುಗಿರುವ ಆಸ್ಟ್ರೇಲಿಯಾದ ವೇಗಿ ಬ್ರೆಟ್​ ಲೀ ಒಂದು ಬಿಟಿಸಿ(ಸುಮಾರು 41 ಲಕ್ಷರೂ) ದೇಣಿಗೆಯಾಗಿ ನೀಡಿದ್ದಾರೆ.

ಸೋಮವಾರವಷ್ಟೇ ಆಸ್ಟ್ರೇಲಿಯಾ ಮತ್ತು ಕೆಕೆಆರ್ ವೇಗಿ ಪ್ಯಾಟ್​ ಕಮ್ಮಿನ್ಸ್ ಆಕ್ಸಿಜನ್​ ಕೊರತೆ ನೀಗಿಸಿ ಎಂದು ಪಿಎಂ ಕೇರ್ಸ್ ನಿಧಿಗೆ 50 ಸಾವಿರ ಡಾಲರ್(37 ಲಕ್ಷ ರೂ) ದೇಣಿಗೆ ನೀಡಿ ಭಾರತೀಯರ ಹೃದಯ ಗೆದ್ದಿದ್ದರು.

ಇದೀಗ ಭಾರತೀಯರು ಹೆಚ್ಚು ಪ್ರೀತಿಸುವ ಆಸೀಸ್ ಮಾಜಿ ವೇಗಿ ಬ್ರೆಟ್​ ಲೀ ಕೂಡ ಒಂದು ಬಿಟ್​ ಕಾಯಿನ್​( ಸುಮಾರು 41 ಲಕ್ಷ ರೂ.) ಕ್ರಿಪ್ಟೋ ಪರಿಹಾರ ನಿಧಿಯ ಮೂಲಕ ನೀಡುವುದಾಗಿ ತಮ್ಮ ಟ್ವಿಟರ್​ ಖಾತೆಯಲ್ಲಿ ಇಂದು ಘೋಷಿಸಿದ್ದಾರೆ.

ಭಾರತ ಸದಾ ನನ್ನ ಎರಡನೇ ಮನೆ ಇದ್ದಂತೆ. ನನ್ನ ವೃತ್ತಿಪರ ವೃತ್ತಿಜೀವನದ ಅವಧಿಯಲ್ಲಿ ಮತ್ತು ನಿವೃತ್ತಿಯ ನಂತರವೂ ಈ ದೇಶದ ಜನರಿಂದ ನಾನು ಪಡೆದ ಪ್ರೀತಿ ಮತ್ತು ವಾತ್ಸಲ್ಯ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಬ್ರೆಟ್​ ಲೀ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಪ್ರಸ್ತುತ ಈ ಸಾಂಕ್ರಾಮಿಕದಿಂದ ಇಲ್ಲಿನ ಜನರು ನರಳುತ್ತಿರುವುದನ್ನು ನೋಡಿದರೆ ತುಂಬಾ ದುಃಖವಾಗುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ನಾನು ಕ್ರಿಪ್ಟೋ ರಿಲೀಫ್ ಫಂಡ್​ ಮೂಲಕ 1ಬಿಟಿಸಿ(ಬಿಟ್​ ಕಾಯಿನ್) ಭಾರತದಾದ್ಯಂತ ಇರುವ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವುದಕ್ಕಾಗಿ ದೇಣಿಗೆ ನೀಡುತ್ತಿದ್ದೇನೆ" ಎಂದು ಲೀ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಇದು ನಾವೆಲ್ಲರೂ ಒಂದಾಗಬೇಕಾದ ಸಮಯ ಮತ್ತು ಕಷ್ಟದಲ್ಲಿರುವವರಿಗೆ ಸಾಧ್ಯವಾದಷ್ಟು ನೆರವಾಗಬೇಕಾಗಿದೆ. ಈ ಸಂದರ್ಭದಲ್ಲಿ ಹಗಲು ರಾತ್ರಿಯನ್ನದೇ ದುಡಿಯುತ್ತಿರುವ ಕೊರೊನಾ ವಾರಿಯರ್ಸ್​ಗೆ ನಾನು ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮೊದಲ ಕ್ರಿಕೆಟಿಗನಿಗನಾಗಿ ಭಾರತೀಯರಿಗೆ ದೇಣಿಗೆ ನೀಡಿದ ಪ್ಯಾಟ್ ಕಮ್ಮಿನ್ಸ್​ಗೆ 'ನಿನ್ನೆ ನೀವು ಒಳ್ಳೆಯ ಕೆಲಸ ಮಾಡಿದ್ದೀರಾ' ಎಂದು ಅಭಿನಂಧನೆ ಸಲ್ಲಿಸಿದ್ದಾರೆ.

ಇದನ್ನು ಓದಿ: ಭಾರತೀಯರಿಗಾಗಿ ಮಿಡಿದ ಮನ.. 'ಪಿಎಂ ಕೇರ್ಸ್​ ಫಂಡ್​'ಗೆ 37 ಲಕ್ಷ ರೂ.​ ದೇಣಿಗೆ ನೀಡಿದ ಕಮ್ಮಿನ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.