ETV Bharat / sports

ಸೋಲೇ ಗೆಲುವಿನ ಮೆಟ್ಟಿಲು.. ರೂಟ್​ ಜೊತೆಗೂಡಿ ಟೆಸ್ಟ್ ಕ್ರಿಕೆಟ್​ ಉಳಿಸಲು IPLನಿಂದ ಹಿಂದೆ ಸರಿದ ಬೆನ್​ಸ್ಟೋಕ್ಸ್​!

author img

By

Published : Jan 17, 2022, 9:06 PM IST

ಆಸ್ಟ್ರೇಲಿಯಾ ವಿರುದ್ಧ 4-0 ಅಂತರದಲ್ಲಿ ಆ್ಯಶಸ್​ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋಲು ಕಂಡ ಬಳಿಕ ಸ್ಟೋಕ್ಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆ್ಯಶಸ್​ ಸೋಲಿನ ನಂತರ ಮಾಜಿ ಕ್ರಿಕೆಟಿಗರು ಮತ್ತು ಕೆಲವು ತಜ್ಞರು ಐಪಿಎಲ್​ಗೆ ಪ್ರಾಮುಖ್ಯತೆ ನೀಡಿದ್ದಕ್ಕಾಗಿ ಇಂಗ್ಲಿಷ್​ ಕ್ರಿಕೆಟಿಗರನ್ನು ದೂಷಿಸಿದ್ದರು.

Ben Stokes opts out of IPL auctions
ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ಸ್ಟೋಕ್ಸ್​

ಮುಂಬೈ: ಇಂಗ್ಲೆಂಡ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್​ ಜೊತೆ ಟೆಸ್ಟ್​ ಕ್ರಿಕೆಟ್​ ಉಳಿವಿಗಾಗಿ ಶ್ರಮಿಸಲು ನಿರ್ಧರಿಸಿದ್ದಾರೆ ಎಂದು ಬ್ರಿಟಿಷ್​ ಮಾಧ್ಯಮಗಳು ವರದಿ ಮಾಡಿವೆ.

ಆಸ್ಟ್ರೇಲಿಯಾ ವಿರುದ್ಧ 4-0 ಅಂತರದಲ್ಲಿ ಆ್ಯಶಸ್​ ಟೆಸ್ಟ್ ಸರಣಿಯನ್ನು ಹೀನಾಯವಾಗಿ ಸೋಲು ಕಂಡ ಬಳಿಕ ಸ್ಟೋಕ್ಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆ್ಯಶಸ್​ ಸೋಲಿನ ನಂತರ ಮಾಜಿ ಕ್ರಿಕೆಟಿಗರು ಮತ್ತು ಕೆಲವು ತಜ್ಞರು ಐಪಿಎಲ್​ಗೆ ಪ್ರಾಮುಖ್ಯತೆ ನೀಡಿದ್ದಕ್ಕಾಗಿ ಇಂಗ್ಲಿಷ್​ ಕ್ರಿಕೆಟಿಗರನ್ನು ದೂಷಿಸಿದ್ದರು.

2021ರ ಮಧ್ಯಂತರದಲ್ಲಿ ಮಾನಸಿಕ ಆರೋಗ್ಯದ ದೃಷ್ಠಿಯಿಂದ ಕ್ರಿಕೆಟ್​ನಿಂದ ಅನಿರ್ದಿಷ್ಟಾವಧಿ ವಿಶ್ರಾಂತಿ ತೆಗೆದುಕೊಂಡಿದ್ದರು. ಆ್ಯಶಸ್​ ಟೆಸ್ಟ್ ಸರಣಿಯಲ್ಲಿ ಕಮ್​ಬ್ಯಾಕ್ ಮಾಡಿದರಾದರೂ ಅವರು ಹೇಳಿಕೊಳ್ಳುವಂತ ಪ್ರದರ್ಶನ ತೋರಿರಲಿಲ್ಲ. ಇದೀಗ ಹೀನಾಯ ಸೋಲಿನ ಬಳಿಕ ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ತಮ್ಮ ಹೆಸರನ್ನು ಸೇರಿಸದಿರಲು ನಿರ್ಧರಿಸಿದ್ದಾರೆ.

ಇಂಗ್ಲೆಂಡ್ ತಂಡ ಮಾರ್ಚ್​ ಕೊನೆಯಲ್ಲಿ ವೆಸ್ಟ್ ಇಂಡೀಸ್​ ಪ್ರವಾಸ ಅಂತಿಮಗೊಳ್ಳಲಿದೆ. ಮುಂದಿನ ನ್ಯೂಜಿಲ್ಯಾಂಡ್​ ವಿರುದ್ಧ ತವರಿನ ಸರಣಿ ಜೂನ್​ನಲ್ಲಿ ನಿಗದಿಯಾಗಿರುವುದರಿಂದ ಮಧ್ಯ ಎರಡು ತಿಂಗಳು ವಿಶ್ರಾಂತಿಯಲ್ಲಿರಲ್ಲಿರಲಿದ್ದಾರೆ. ಆದರೆ ಆ ಸರಣಿಗೂ ಮುನ್ನ ಅವರು ಐಪಿಎಲ್​ನಿಂದ ಹೊರಗುಳಿದು ಡುರ್ಹಾಮ್ ತಂಡದ ಪರ ಕೆಲವು ಕೌಂಟಿ ಪಂದ್ಯಗಳನ್ನಾಡಲು ಬಯಸಿದ್ದಾರೆ.

2017ರಲ್ಲಿ ಐಪಿಎಲ್​ನ ಅತ್ಯಮೂಲ್ಯ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದ ಸ್ಟೋಕ್ಸ್​ ಐಪಿಎಲ್​ ಹರಾಜಿನಿಂದ ಹೊರಗುಳಿದ 2ನೇ ಇಂಗ್ಲಿಷ್ ಆಟಗಾರನಾಗಿದ್ದಾರೆ. ಈಗಾಗಲೇ ಜೋ ರೂಟ್​ ಕೂಟ್​ ಕೂಡ ಹರಾಜಿನಿಂದ ಹೊರಬಂದಿದ್ದರು. ರೂಟ್​ ಹರಾಜಿನಲ್ಲಿ ಹೆಚ್ಚು ಆಕರ್ಷಣೆ ಮೂಡಿಸುವ ಅಟಗಾರನಲ್ಲದಿದ್ದರೂ, ಸ್ಟೋಕ್ಸ್​ ತಮ್ಮ ನಿರ್ಧಾರದಿಂದ ದೊಡ್ಡ ಮೊತ್ತವನ್ನೇ ಕಳೆದುಕೊಳ್ಳಲಿದ್ದಾರೆ. 2018ರಲ್ಲಿ ರಾಜಸ್ಥಾನ್ ರಾಯಲ್ಸ್​ ಅವರನ್ನು 14 ಕೋಟಿ ರೂ. ನೀಡಿ ಖರೀದಿಸಿತ್ತು.

ಇದನ್ನೂ ಓದಿ:ಐಪಿಎಲ್ ತ್ಯಾಗ ಮಾಡಿ ಇಂಗ್ಲೆಂಡ್ ತಂಡದ ಪುನರ್​ ನಿರ್ಮಾಣದ ಕಡೆಗೆ 'ರೂಟ್‌'!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.