ETV Bharat / sports

ಕ್ರಿಕೆಟ್ ಕ್ರೀಡಾಂಗಣ ಜಾಗ ಪರಿಶೀಲಿಸಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

author img

By

Published : Mar 15, 2023, 2:48 PM IST

ಉತ್ತರ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣದ ಜಾಗ ವೀಕ್ಷಿಸಿದ ರಾಜೀವ್ ಶುಕ್ಲಾ - ಮಾರ್ಚ್​ 24ಕ್ಕೆ ಉತ್ತರ ಪ್ರದೇಶಕ್ಕೆ ಮೋದಿ ಭೇಟಿ - ಅಂದೇ ಕ್ರೀಡಾಂಗಣ ಶಿಲಾನ್ಯಾಸ ಸಾಧ್ಯತೆ

rajeev shukla
ರಾಜೀವ್ ಶುಕ್ಲಾ

ವಾರಣಾಸಿ (ಉತ್ತರ ಪ್ರದೇಶ): ಇಲ್ಲಿನ ಗಂಜಾರಿ ಗ್ರಾಮಕ್ಕೆ ಭೇಟಿ ನೀಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್​​ ಸ್ಟೇಡಿಯಂ ಮಾಡಲು ಉದ್ದೇಶಿಸಿರುವ ಜಾಗವನ್ನು ಪರಿಶೀಲಿಸಿದರು. ತಂಡದೊಂದಿಗೆ ಶುಕ್ಲಾ ಅವರು ಸ್ವಾಧೀನ ಪಡಿಸಿಕೊಳ್ಳಲಾಗಿರುವ 32 ಎಕರೆ ಭೂಮಿಯನ್ನು ಪರಿಶೀಲಿಸಿದರು.

ತಂಡದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಉಪಸ್ಥಿತರಿದ್ದರು. ಭೇಟಿಯ ವರದಿಯನ್ವಯ ಬಿಸಿಸಿಐ ಡಿಪಿಆರ್ ಮತ್ತು ಸ್ಟೇಡಿಯಂ ವಿನ್ಯಾಸವನ್ನು ಸಿದ್ಧಪಡಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ಶಿಲಾನ್ಯಾಸ ಮಾಡುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಕಾರ್ಯದರ್ಶಿ ಜಯ್ ಶಾ ಎರಡು ದಿನಗಳ ಪ್ರವಾಸದಲ್ಲಿ ವಾರಣಾಸಿಗೆ ಭೇಟಿ ನೀಡಿದ್ದಾರೆ.

ಮಾರ್ಚ್​ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ವೈದ್ಯಕೀಯ ಸೆಮಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲು ವಾರಣಾಸಿಗೆ ಭೇಟಿ ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ವೈದ್ಯಕೀಯ ಸೆಮಿನಾರ್ ಕಾರ್ಯಕ್ರಮವನ್ನು ರುದ್ರಾಕ್ಷಿ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಭೇಟಿ ನೀಡಲಿರುವ ವೇಳೆ ವಿವಿಧ 20 ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸುವಂತೆ ಕೋರಿ ಪ್ರಧಾನ ಮಂತ್ರಿ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಇದರಲ್ಲಿ ಕ್ರೀಡಾಂಗಣದ ಶಿಲಾನ್ಯಾಸವನ್ನು ಸೇರಿಸಲಾಗಿದೆ ಎಂದು ವರದಿಯಾಗಿದೆ.

  • काशी विश्वनाथ बाबा के भव्यदर्शन । ओम नमः शिवाय । नव निर्मित प्रांगण अपने आप में दर्शनीय और अदभुत है। pic.twitter.com/iVEAclksfV

    — Rajeev Shukla (@ShuklaRajiv) March 14, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಮುಂದುವರೆದ ಮುಂಬೈ ಇಂಡಿಯನ್ಸ್​ ಗೆಲುವಿನ ಓಟ: ಗುಜರಾತ್​ ​ವಿರುದ್ಧ 55 ರನ್​ ಜಯ

ದಿಹ್ ಗಂಜಾರಿ ಗ್ರಾಮದಲ್ಲಿ ನಿರ್ಮಿಸಲಿರುವ ಕ್ರೀಡಾಂಗಣದ ಬಗ್ಗೆ ಯೋಗಿ ಆದಿತ್ಯನಾಥ್‌ ಸರ್ಕಾರದ ಬಜೆಟ್‌ನಲ್ಲಿಯೂ ಮಂಡಿಸಲಾಗಿದೆ. ಯುಪಿ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ಬಿಸಿಸಿಐ ಯೋಜನೆಯ ರೂಪುರೇಷೆಯನ್ನು ಸಿದ್ಧಪಡಿಸಿದೆ. ಹಾಗೇ ಬಿಸಿಸಿಐ ಕ್ರೀಡಾಂಗಣ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಹೀಗಾಗಿ 24ರಂದು ಪ್ರಧಾನಿಯವರು ಯೋಜನೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜೀವ್ ಶುಕ್ಲಾ ಮತ್ತು ಕಾರ್ಯದರ್ಶಿ ಜಯ್ ಶಾ ಮಂಗಳವಾರ ತಡರಾತ್ರಿ ವಾರಣಾಸಿ ತಲುಪಿದ್ದರು. ಕ್ರಿಕೆಟ್ ಸ್ಟೇಡಿಯಂ ಸ್ಥಳ ಪರಿಶೀಲನೆಗೂ ಮುನ್ನ ರಾಜೀವ್​ ಶುಕ್ಲಾ ಅವರು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ರಾಜೀವ್​ ಶುಕ್ಲಾ,"ಕಾಶಿ ವಿಶ್ವನಾಥ ದೇವರ ಭವ್ಯ ದರ್ಶನ. ಶಿವನಿಗೆ ಆರಾಧನೆಗೆ ಹೊಸದಾಗಿ ನಿರ್ಮಿಸಲಾದ ಪ್ರಾಂಗಣವು ಅದ್ಭುತವಾಗಿ ಗೋಚರಿಸುತ್ತದೆ" ಎಂದು ಬರೆದುಕೊಂಡಿದ್ದಾರೆ.

ಇನ್ನೆರಡು ವರ್ಷಗಳಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತಲಿದೆ. ಉತ್ತರ ಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ಗೆ ಮತ್ತೊಂದು ಅಂತರಾಷ್ಟ್ರೀಯ ಕ್ರೀಡಾಂಗಣ ಸೇರಿಕೊಳ್ಳಲಿದೆ. ಇದರಿಂದ ಕ್ರಿಕೆಟ್​ಗೆ ಇನ್ನಷ್ಟು ಉತ್ತೇಜನ ಹೆಚ್ಚಲಿದೆ. ಪೂರ್ವಾಂಚಲ ಮತ್ತು ಯುಪಿ ಸೇರಿದಂತೆ ಸುತ್ತಮುತ್ತಲಿನ ಇತರ ರಾಜ್ಯಗಳ ಆಟಗಾರರು ಸಹ ಸಹಾಯ ಆಗಲಿದ್ದು, ಉತ್ತಮ ಸೌಲಭ್ಯಗಳು ದೊರೆಯಲಿವೆ.

ಇದನ್ನೂ ಓದಿ: ವಿರಾಟ್​ ಫಾರ್ಮ್​ ಕಳೆದುಕೊಂಡಿರಲಿಲ್ಲ, ಅದು ಶತಕದ ಲಯ ನಿರ್ಧರಿಸುವ ಮಾನದಂಡವೂ ಅಲ್ಲ: ಸುನಿಲ್​ ಗವಾಸ್ಕರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.