ETV Bharat / sports

ಬಿಸಿಸಿಐ ವಾರ್ಷಿಕ ಗುತ್ತಿಗೆ: A+ ವರ್ಗಕ್ಕೆ ರಾಹುಲ್​-ಪಂತ್ ಬಡ್ತಿ ಸಾಧ್ಯತೆ, ಪೂಜಾರ-ರಹಾನೆ ಭವಿಷ್ಯ ಅತಂತ್ರ!

author img

By

Published : Jan 20, 2022, 8:48 PM IST

ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ 4 ಗುಂಪುಗಳಾಗಿ ವಿಂಗಡಿಸಿಲಾಗಿದ್ದು, A+ ವರ್ಗಕ್ಕೆ 7 ಕೋಟಿ ರೂ, A ವರ್ಗಕ್ಕೆ 5 ಕೋಟಿ ರೂ, Bಗೆ 3 ಕೋಟಿ ರೂ, C ವರ್ಗದಲ್ಲಿರುವವರಿಗೆ 1 ಕೋಟಿ ರೂಗಳನ್ನು ನೀಡುತ್ತಿದೆ. ಸಾಮಾನ್ಯವಾಗಿ ಬಿಸಿಸಿಐ ಮೂರು ಪದಾಧಿಕಾರಿಗಳು, ಆಯ್ಕೆ ಸಮಿತಿ ಸಧಸ್ಯರು ಮತ್ತು ರಾಷ್ಟ್ರೀಯ ತಂಡದ ಮುಖ್ಯಕೋಚ್​ ಆಟಗಾರರ ವಾರ್ಷಿಕ ಗುತ್ತಿಗೆಯನ್ನು ನಿರ್ಧರಿಸಿಲಿದ್ದಾರೆ.

ಬಿಸಿಸಿಐ ವಾರ್ಷಿಕ ಗುತ್ತಿಗೆ
ಬಿಸಿಸಿಐ ವಾರ್ಷಿಕ ಗುತ್ತಿಗೆ

ನವದೆಹಲಿ: ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟಿಸಲು ಕೆಲವೇ ದಿನಗಳು ಬಾಕಿಯುಳಿದಿದ್ದು, ಅನುಭವಿಗಳಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ A ವರ್ಗದಲ್ಲಿ ಮುಂದುವರಿಯುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗುತ್ತಿದೆ.

ಆದರೆ ಭಾರತ ತಂಡದ ಭವಿಷ್ಯದ ನಾಯಕ ಸ್ಥಾನದ ಸ್ಪರ್ಧಿಗಳಾದ ಕನ್ನಡಿಗ ಕೆಎಲ್ ರಾಹುಲ್ ಮತ್ತು ವಿಕೆಟ್ ಕೀಪರ್​ ರಿಷಭ್ ಪಂತ್​ರನ್ನು ಬಿಸಿಸಿಐ​ A+ ವರ್ಗಕ್ಕೆ ಬಡ್ತಿ ನೀಡುವ ಸಾಧ್ಯತೆ ಇದೆ. ಈಗಾಗಲೆ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ಮತ್ತು ಜಸ್ಪ್ರೀತ್​ ಬುಮ್ರಾ ಈ ಗುಂಪಿನಲ್ಲಿ ಸ್ಥಾನಪಡೆದುಕೊಂಡಿದ್ದಾರೆ

ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ 4 ಗುಂಪುಗಳಾಗಿ ವಿಂಗಡಿಸಿಲಾಗಿದ್ದು, A+ ವರ್ಗಕ್ಕೆ 7 ಕೋಟಿ ರೂ, A ವರ್ಗಕ್ಕೆ 5 ಕೋಟಿ ರೂ, Bಗೆ 3 ಕೋಟಿ ರೂ, C ವರ್ಗದಲ್ಲಿರುವವರಿಗೆ 1 ಕೋಟಿ ರೂಗಳನ್ನು ನೀಡುತ್ತಿದೆ. ಸಾಮಾನ್ಯವಾಗಿ ಬಿಸಿಸಿಐ ಮೂರು ಪದಾಧಿಕಾರಿಗಳು, ಆಯ್ಕೆ ಸಮಿತಿ ಸಧಸ್ಯರು ಮತ್ತು ರಾಷ್ಟ್ರೀಯ ತಂಡದ ಮುಖ್ಯಕೋಚ್​ ಆಟಗಾರರ ವಾರ್ಷಿಕ ಗುತ್ತಿಗೆಯನ್ನು ನಿರ್ಧರಿಸಿಲಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಸದ್ಯಕ್ಕೆ, ಕಳೆದ ವರ್ಷದ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ 28 ಹೆಸರುಗಳಲ್ಲಿ ಹೆಚ್ಚೇನು ಬದಲಾವಣೆಗಳಾಗುವುದಿಲ್ಲ ಎನ್ನಲಾಗುತ್ತಿದೆ. ಆದರೆ ಕಳೆದ ವರ್ಷ ಜಾರಿಯಲ್ಲಿದ್ದ ಪ್ರಸ್ತುತ ವರ್ಗಗಳ ಸಂಯೋಜನೆ ಬಗ್ಗೆ ಕೆಲವು ಗಂಭೀರ ಚರ್ಚೆಗಳು ನಡೆಯಬಹುದು ಎನ್ನಲಾಗುತ್ತಿದೆ.

ರಾಹುಲ್​-ಪಂತ್​ಗೆ ಬಡ್ತಿ:

"ನಿಸ್ಸಂಶಯವಾಗಿ ಮೂರು ಮಾದರಿಯಲ್ಲಿ ಖಾಯಂ ಆಟಗಾರರಾಗಿರುವ ವಿರಾಟ್​, ರೋಹಿತ್ ಮತ್ತು ಬುಮ್ರಾ ತಮ್ಮ ಎ ಪ್ಲಸ್​ನಲ್ಲಿ ಮುಂದುವರಿಯಲಿದ್ದಾರೆ. ಆದರೆ ರಾಹುಲ್​ ಮತ್ತು ಪಂತ್ ಪ್ರಸ್ತುತ ತಾವಾಗಿಯೇ ನಿಧಾನವಾಗಿ ಮೂರು ಸ್ವರೂಪಗಳಲ್ಲೂ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಇಬ್ಬರು ಈ ಬಾರಿ ಬಡ್ತಿ ಪಡೆಯುವ ಸಾಧ್ಯತೆ ಇದೆ " ಎಂದು ಬಿಸಿಸಿಐ ಮೂಲ ಪಿಟಿಐಗೆ ಮಾಹಿತಿ ನೀಡಿದೆ.

ಆದರೆ ಕಳೆದ ಆವೃತ್ತಿಯಲ್ಲಿ ಅಸ್ಥಿರ ಪ್ರದರ್ಶನ ತೋರಿರುವ ಹಿರಿಯ ಆಟಗಾರರಾದ ಪೂಜಾರ ಮತ್ತು ರಹಾನೆ ಅವರು ಎ ವರ್ಗದಲ್ಲಿ ಉಳಿಯುವುದಕ್ಕೆ ಹೆಚ್ಚು ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

ರಹಾನೆ-ಪೂಜಾರ A ವರ್ಗದಲ್ಲಿ ಉಳಿಯುವುದು ಕಷ್ಟ

ಕೇಂದ್ರೀಯ ಒಪ್ಪಂದವು ಕಳೆದ ಋತುವಿನಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಅನುಗುಣವಾಗಿ ನೀವು ಎಲ್ಲಿ ನಿಲ್ಲುತ್ತೀರಿ ಎಂಬುದರ ಮೇಲೆ ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಅವರಿಬ್ಬರು ಎ ಗುಂಪಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಬಿಸಿಸಿಐ ಮತ್ತು ಮುಖ್ಯ ಕೋಚ್ (ರಾಹುಲ್) ದ್ರಾವಿಡ್ ಇಬ್ಬರನ್ನು ಗೌರವಿಸಲು ಬಯಸಿದರೆ ಎ ಗುಂಪಿನಲ್ಲಿ ಇರಿಸಿಕೊಳ್ಳಬಹುದು, ಆದರೆ ಸಾಧ್ಯತೆ ಕಡಿಮೆ ಎಂದು ಮೂಲ ತಿಳಿಸಿದೆ.

ಸಿರಾಜ್​-ಶಾರ್ದೂಲ್​ಗೆ ಬಡ್ತಿ

ಇನ್ನು ಗಾಯದ ಕಾರಣ ತಂಡದಲ್ಲಿ ಫಿಟ್​ನೆಸ್​ ಸಮಸ್ಯೆ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯ ಮತ್ತು ಇಶಾಂತ್ ಶರ್ಮಾ A ನಲ್ಲಿ ಉಳಿಯುವ ಸಾಧ್ಯತೆ ಕಡಿಮೆ, ಟೆಸ್ಟ್​ ಕ್ರಿಕೆಟ್​​ನಲ್ಲಿ ಆಕರ್ಷಕ ಪ್ರದರ್ಶನ ತೋರಿರುವ ಶಾರ್ದೂಲ್​ ಈ ಬಾರಿ ಎ ವರ್ಗಕ್ಕೆ ಬಡ್ತಿ ಪಡೆಯಬಹುದು, ಇನ್ನು ಸಿ ವರ್ಗದಲ್ಲಿರುವ ಮೊಹಮ್ಮದ್ ಸಿರಾಜ್​, ಹನುಮ ವಿಹಾರಿ, ಶ್ರೇಯಸ್ ಅಯ್ಯರ್​, ಅಕ್ಷರ್ ಪಟೇಲ್ ಬಡ್ತಿ ಪಡೆಯುವ ಸಾಧ್ಯತೆ ಇದೆ.

ಐಪಿಎಲ್​ 14ನೇ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ಪಡೆದಿರುವ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವ ಹರ್ಷಲ್ ಪಟೇಲ್, ವೆಂಕಟೇಶ್​​ ಅಯ್ಯರ್​ ಮೊದಲ ಬಾರಿಗೆ ಕೇಂದ್ರೀಯ ಗುತ್ತಿಗೆಯಲ್ಲಿ ಕಾಣಿಸಿಕೊಳ್ಳಬಹುದಾದ ಹೊಸ ಮುಖಗಳಾಗಿವೆ.

ಇದನ್ನೂ ಓದಿ:ಜೇಸನ್​ ರಾಯ್​ ವಿಧ್ವಂಸಕ ಬ್ಯಾಟಿಂಗ್... 36 ಎಸೆತಗಳಲ್ಲಿ 10 ಸಿಕ್ಸರ್​ಗಳ​ ಸಹಿತ ಶತಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.