ETV Bharat / sports

ದೇಶೀಯ ಕ್ರಿಕೆಟ್‌ ಟೂರ್ನಿಗಳ ಬಹುಮಾನ ಮೊತ್ತ ಹೆಚ್ಚಳ: ರಣಜಿ ವಿಜೇತರಿಗೆ ಸಿಗಲಿದೆ ₹5 ಕೋಟಿ

author img

By

Published : Apr 16, 2023, 9:38 PM IST

ದೇಶೀಯ ಟೂರ್ನಿಗಳ ಬಹುಮಾನದ ನಗದನ್ನು ಬಿಸಿಸಿಐ ಹೆಚ್ಚಿಸಿದ್ದು, ರಣಜಿ ವಿಜೇತರಿಗೆ ಬಂಪರ್​ ಘೋಷಣೆ ಮಾಡಿದೆ.

BCCI announces increase in prize money for all the BCCI Domestic Tournaments
ದೇಶೀಯ ಟೂರ್ನಿಗಳ ಬಹುಮಾನ ಮೊತ್ತ ಹೆಚ್ಚಿಸಿದ ಬಿಸಿಸಿಐ.. ಇಲ್ಲಿದೆ ಮಾಹಿತಿ

ಮುಂಬೈ (ಮಹಾರಾಷ್ಟ್ರ): ಬಿಸಿಸಿಐ ದೇಶೀಯ ಪಂದ್ಯಾವಳಿಗಳಿಗೆ ಬಹುಮಾನದ ಮೊತ್ತವನ್ನು ಹೆಚ್ಚಿಸಿದೆ. ಈ ವರ್ಷದ ರಣಜಿ ಟ್ರೋಫಿ ವಿಜೇತರಿಗೆ 5 ಕೋಟಿ ರೂ.ಗಳ ಬೃಹತ್ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದೆ. ಹೊಸ ಬಹುಮಾನ ಮೊತ್ತದ ಪ್ರಕಾರ, ಪ್ರಸ್ತುತ 2 ಕೋಟಿ ರೂಪಾಯಿ ಚೆಕ್ ಪಡೆದಿರುವ ರಣಜಿ ಟ್ರೋಫಿ ವಿಜೇತ ಸೌರಾಷ್ಟ್ರ ತಂಡಕ್ಕೆ 5 ಕೋಟಿ ರೂ ಸಿಗಲಿದೆ. ರನ್ನರ್ ಅಪ್ ಮತ್ತು ಸೋತ ಸೆಮಿಫೈನಲಿಸ್ಟ್‌ಗಳಿಗೆ ಕ್ರಮವಾಗಿ 3 ಕೋಟಿ ಮತ್ತು 1 ಕೋಟಿ ರೂ ನೀಡಲಾಗುತ್ತದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವಿಟ್​ ಮಾಡಿದ್ದು, "ಎಲ್ಲಾ ಬಿಸಿಸಿಐ ದೇಶೀಯ ಟೂರ್ನಮೆಂಟ್‌ಗಳಿಗೆ ಬಹುಮಾನದ ಮೊತ್ತವನ್ನು ಹೆಚ್ಚಿಸಿರುವುದನ್ನು ಘೋಷಿಸಲು ನನಗೆ ಸಂತೋಷವಾಗಿದೆ. ಭಾರತೀಯ ಕ್ರಿಕೆಟ್‌ನ ಬೆನ್ನೆಲುಬಾಗಿರುವ ದೇಶೀಯ ಕ್ರಿಕೆಟ್‌ನಲ್ಲಿ ಹೂಡಿಕೆ ಮಾಡಲು ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ. ರಣಜಿ ವಿಜೇತರು ₹5 ಕೋಟಿ (2 ಕೋಟಿಯಿಂದ), ಹಿರಿಯ ಮಹಿಳಾ ವಿಜೇತರು ರೂ 50 ಲಕ್ಷ (6 ಲಕ್ಷಗಳಿಂದ)" ಎಂದು ಬರೆದುಕೊಂಡಿದ್ದಾರೆ.

  • I’m pleased to announce an increase in prize money for all @BCCI Domestic Tournaments. We will continue our efforts to invest in Domestic Cricket – which is the backbone of Indian Cricket. Ranji winners to get ₹5 crores (from 2 cr), Sr Women winners ₹50 lacs (from 6 lacs)🇮🇳 pic.twitter.com/Cgpw47z98q

    — Jay Shah (@JayShah) April 16, 2023 " class="align-text-top noRightClick twitterSection" data=" ">

ಇರಾನಿ ಕಪ್‌ ನಗದು ಬಹುಮಾನವನ್ನು ದ್ವಿಗುಣಗೊಳಿಸಲಾಗಿದೆ. ವಿಜೇತರಿಗೆ 25 ಲಕ್ಷದ ಬದಲಿಗೆ 50 ಲಕ್ಷ ರೂ ನೀಡಲಾಗುತ್ತದೆ. ರನ್ನರ್-ಅಪ್ ತಂಡಕ್ಕೆ ಪ್ರಸ್ತುತ ಯಾವುದೇ ನಗದು ಬಹುಮಾನ ಇರಲಿಲ್ಲ. ಮಂದಿನ ದಿನಗಳಲ್ಲಿ 25 ಲಕ್ಷ ರೂ ಕೊಡಲಾಗುತ್ತದೆ. ದುಲೀಪ್ ಟ್ರೋಫಿಯಲ್ಲಿ ಚಾಂಪಿಯನ್‌ಗಳು 1 ಕೋಟಿ ರೂ. ಮತ್ತು ರನ್ನರ್ ಅಪ್ ತಂಡ 50 ಲಕ್ಷ ರೂ., ವಿಜಯ್ ಹಜಾರೆ ಟ್ರೋಫಿ ವಿಜೇತರು ಈಗ 1 ಕೋಟಿ ರೂ. ಚೆಕ್ ಮತ್ತು ಎರಡನೇ ಸ್ಥಾನ ಪಡೆಯುವ ತಂಡ 50 ಲಕ್ಷ. ದೇವಧರ್ ಟ್ರೋಫಿ ವಿಜೇತರು 40 ಲಕ್ಷ ಮತ್ತು ರನ್ನರ್​ ಅಪ್​ಗೆ 20 ಲಕ್ಷ ರೂ ನಿಗದಿಯಪಡಿಸಲಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಚಾಂಪಿಯನ್ಸ್ ತಂಡಕ್ಕೆ 80 ಲಕ್ಷ ರೂಪಾಯಿ ಚೆಕ್ ಹಾಗೂ ಸೋತ ತಂಡಕ್ಕೆ 40 ಲಕ್ಷ ರೂಪಾಯಿ ಚೆಕ್ ಸಿಗಲಿದೆ.

ದೇಶದಲ್ಲಿ ಮಹಿಳಾ ಕ್ರಿಕೆಟ್‌ಗೆ ದೊಡ್ಡ ಉತ್ತೇಜನ ನೀಡುತ್ತಿದ್ದು ಹಿರಿಯ ಮಹಿಳಾ ಏಕದಿನ ಟ್ರೋಫಿ ವಿಜೇತರಿಗೆ 50 ಲಕ್ಷ ರೂಪಾಯಿ ಚೆಕ್ ಮತ್ತು ರನ್ನರ್ ಅಪ್ ತಂಡವು 25 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಹಿರಿಯ ಮಹಿಳಾ ಟಿ20 ಟ್ರೋಫಿಯ ಬಹುಮಾನದ ಮೊತ್ತವನ್ನೂ ಸಹ ಹೆಚ್ಚಿಸಲಾಗಿದ್ದು, ವಿಜೇತರು ಈಗ ಪಡೆಯುವುದಕ್ಕಿಂತ ಎಂಟು ಪಟ್ಟು ಹೆಚ್ಚು ಅಂದರೆ 40 ಲಕ್ಷ ರೂ ಹಾಗೂ ಸೋತ ತಂಡಕ್ಕೆ 20 ಲಕ್ಷ ರೂ ಸಿಗಲಿದೆ.

ದೇಶೀಯ ಪಂದ್ಯಗಳ ವೇಳಾಪಟ್ಟಿ: ಭಾರತೀಯ ಕ್ರಿಕೆಟ್‌ನ 2023-24 ರ ದೇಶೀಯ ಋತುವು ಜೂನ್ 28 ರಂದು ದುಲೀಪ್ ಟ್ರೋಫಿ ಪಂದ್ಯಾವಳಿಯೊಂದಿಗೆ ಪ್ರಾರಂಭವಾಗುತ್ತದೆ. ರಣಜಿ ಮುಂದಿನ ವರ್ಷ ಜನವರಿ 5 ರಿಂದ ಪ್ರಾರಂಭವಾಗುತ್ತದೆ. ಆರು ವಲಯ ತಂಡಗಳ ನಡುವೆ ಆಡಲಾಗುವ ದುಲೀಪ್ ಟ್ರೋಫಿ ನಂತರ ದೇವಧರ್ ಟ್ರೋಫಿ ಜುಲೈ 24 ರಿಂದ ಆಗಸ್ಟ್ 3, ಇರಾನಿ ಕಪ್ ಅಕ್ಟೋಬರ್ 1ರಿಂದ 5, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪುರುಷರ ಟಿ20 ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು (ಅಕ್ಟೋಬರ್. 16-ನವೆಂಬರ್ 6) ಮತ್ತು ವಿಜಯ್ ಹಜಾರೆ ಟ್ರೋಫಿ (ನವೆಂಬರ್ 23-ಡಿಸೆಂಬರ್ 15) ನಡೆಯಲಿದೆ.

ಇದನ್ನೂ ಓದಿ: MI vs KKR: ಕಿಶನ್-ಸೂರ್ಯ ಅಬ್ಬರಕ್ಕೆ ಮುಂಬೈಗೆ ಜಯ, ಅಯ್ಯರ್​ ಶತಕ ವ್ಯರ್ಥ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.