ETV Bharat / sports

ಟಿ20 ವಿಶ್ವಕಪ್​ನಿಂದ ಹೊರ ಬಿದ್ದ ಬಾಂಗ್ಲಾದೇಶದ ಆಲ್​ರೌಂಡರ್ ಶಕಿಬ್ ಅಲ್ ಹಸನ್​

author img

By

Published : Nov 1, 2021, 5:22 PM IST

ಶಕಿಬ್ ಬಾಂಗ್ಲಾದೇಶ ಪ್ರಮುಖ ಆಟಗಾರರಾಗಿದ್ದರು. ಅವರು ಟೂರ್ನಿಯಲ್ಲಿ 6 ಪಂದ್ಯಗಳಿಂದ 11 ವಿಕೆಟ್ ಮತ್ತು 131 ರನ್​ಗಳಿಸಿದ್ದರು. ​ ಮಹಮದುಲ್ಲಾ ನೇತೃತ್ವದ ತಂಡ ಸೂಪರ್​ 12ನಲ್ಲಿ ಆಡಿರುವ 3 ಮೂರು ಪಂದ್ಯಗಳಲ್ಲೂ ಸೋಲು ಕಂಡಿದೆ. ಕಳೆದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ವಿರುದ್ಧ ಕೇವಲ 3 ರನ್​ಗಳಿಂದ ಸೋಲು ಕಾಣುವ ಮೂಲಕ ನಿರಾಶೆಯನುಭವಿಸಿತು..

Bangladesh All-Rounder Shakib Al Hasan Ruled Out Of Rest Of The T20 World Cup
ಶಕಿಬ್ ಅಲ್ ಹಸನ್

ದುಬೈ : ಬಾಂಗ್ಲಾದೇಶದ ಆಲ್​ರೌಂಡರ್ ಶಕಿಬ್​ ಅಲ್ ಹಸನ್​ ಹ್ಯಾಮ್​ಸ್ಟಿಂಗ್ ಗಾಯಕ್ಕೊಳಗಾಗಿದ್ದು, ಪ್ರಸ್ತುತ ಟಿ20 ವಿಶ್ವಕಪ್​ನಿಂದ ಹೊರ ಬಿದ್ದಿದ್ದಾರೆ ಎಂದು ಭಾನುವಾರ ಐಸಿಸಿ ದೃಢಪಡಿಸಿದೆ.

ಶಕಿಬ್ ಶುಕ್ರವಾರ ಹಾಲಿ ಚಾಂಪಿಯನ್​ ವೆಸ್ಟ್​ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಎಡ ತೊಡೆಯ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ವೈದ್ಯಕೀಯ ಪರೀಕ್ಷೆ ವೇಳೆ ಅವರಿಗೆ ಗ್ರೇಡ್​ 1 ಗಾಯವಾಗಿರುವುದು ದೃಢಪಟ್ಟಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯ ಫಿಜಿಸಿಯನ್ ದೆಬಾಶಿಶ್ ಚೌದರಿ ಐಸಿಸಿ ಬಿಡುಗಡೆ ಮಾಡಿರುವ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ಈ ಕಾರಣದಿಂದ ಶಕಿಬ್ ಟೂರ್ನಮೆಂಟ್​ನಲ್ಲಿ ಬಾಂಗ್ಲಾದೇಶ ಆಡಲಿರುವ ಮುಂದಿನ 2 ಪಂದ್ಯಗಳಿಂದ ಹೊರ ಬಿದ್ದಿದ್ದಾರೆ ಎಂದು ಚೌದರಿ ತಿಳಿಸಿದ್ದಾರೆ. ಐಸಿಸಿ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, "ಬಾಂಗ್ಲಾದೇಶ ತಂಡಕ್ಕೆ ಬಹುದೊಡ್ಡ ಹೊಡೆತ, ಸ್ಟಾರ್ ಆಲ್​ರೌಂಡರ್​ ಶಕಿಬ್ ಅಲ್ ಹಸನ್​ ಐಸಿಸಿ ಟಿ20 ವಿಶ್ವಕಪ್​ 2021ರಿಂದ ಹೊರ ಬಿದ್ದಿದ್ದಾರೆ" ತಿಳಿಸಿದೆ.

ಶಕಿಬ್ ಬಾಂಗ್ಲಾದೇಶ ಪ್ರಮುಖ ಆಟಗಾರರಾಗಿದ್ದರು. ಅವರು ಟೂರ್ನಿಯಲ್ಲಿ 6 ಪಂದ್ಯಗಳಿಂದ 11 ವಿಕೆಟ್ ಮತ್ತು 131 ರನ್​ಗಳಿಸಿದ್ದರು. ​ ಮಹಮದುಲ್ಲಾ ನೇತೃತ್ವದ ತಂಡ ಸೂಪರ್​ 12ನಲ್ಲಿ ಆಡಿರುವ 3 ಮೂರು ಪಂದ್ಯಗಳಲ್ಲೂ ಸೋಲು ಕಂಡಿದೆ. ಕಳೆದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ವಿರುದ್ಧ ಕೇವಲ 3 ರನ್​ಗಳಿಂದ ಸೋಲು ಕಾಣುವ ಮೂಲಕ ನಿರಾಶೆಯನುಭವಿಸಿತು.

ಶ್ರೀಲಂಕಾ ವಿರುದ್ದ ಕಳಪೆ ಫೀಲ್ಡಿಂಗ್ ಮಾಡಿ ಪಂದ್ಯವನ್ನು ಕೈಚೆಲ್ಲಿತ್ತು. ಮುಂದಿನ 2 ಪಂದ್ಯಗಳನ್ನು ನವೆಂಬರ್ 2ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ನವೆಂಬರ್ 4ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

ಇದನ್ನು ಓದಿ:T20 World Cup 2021: ನಮೀಬಿಯಾ ವಿರುದ್ಧ 62 ರನ್​ಗಳ ಬೃಹತ್ ಜಯ ಸಾಧಿಸಿದ ಅಫ್ಘಾನಿಸ್ತಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.