ETV Bharat / sports

ಟಿ -20 ವಿಶ್ವಕಪ್​​ಗೆ ಸಮತೋಲಿತ ತಂಡ ಆಯ್ಕೆ ಮಾಡಲಾಗಿದೆ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

author img

By

Published : Sep 9, 2021, 7:06 AM IST

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ತಂಡದ ಮಾರ್ಗದರ್ಶಕರನ್ನಾಗಿ ನೇಮಿಸುವುದು ಉತ್ತಮ ನಿರ್ಧಾರ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಭರವಸೆ ವ್ಯಕ್ತಪಡಿಸಿದ್ದಾರೆ.

Balanced team picked for T20 World Cup: BCCI VP
ಟಿ-20 ವಿಶ್ವಕಪ್​​ಗೆ ಸಮತೋಲಿತ ತಂಡ ಆಯ್ಕೆ ಮಾಡಲಾಗಿದೆ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

ನವದೆಹಲಿ: ಯುನೈಟೆಡ್​ ಅರಬ್​ ಎಮಿರೇಟ್ಸ್​​ನಲ್ಲಿ ಆಯೋಜನೆಗೊಂಡಿರುವ ಐಸಿಸಿ ಟಿ - 20 ವಿಶ್ವಕಪ್​ಗಾಗಿ 15 ಸದಸ್ಯರನ್ನೊಳಗೊಂಡ ಭಾರತೀಯ ತಂಡ ಪ್ರಕಟಗೊಂಡಿದ್ದು, ವಿರಾಟ್​​ ಕೊಹ್ಲಿ ತಂಡವನ್ನ ಮುನ್ನಡೆಸಲಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಟಿ-20 ವಿಶ್ವಕಪ್ 2021ಕ್ಕೆ 'ಸಮತೋಲಿತ ತಂಡ'ವನ್ನು ಆಯ್ಕೆ ಮಾಡಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ತಂಡದ ಮಾರ್ಗದರ್ಶಕರನ್ನಾಗಿ ನೇಮಿಸುವುದು ಉತ್ತಮ ನಿರ್ಧಾರ. ಧೋನಿಯ ಅನುಭವವು ಬಹಳಷ್ಟು ಟೀಂ ಇಂಡಿಯಾಗೆ ಸಾಕಷ್ಟು ಸಹಾಯ ಮಾಡುತ್ತದೆ ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಬಾಕ್ಸಿಂಗ್​ಗೆ ಕಮೆಂಟೆಟರ್ ಆಗಲಿರುವ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.