ETV Bharat / sports

ಪಾಕಿಸ್ತಾನ ಬ್ಯಾಟರ್​ಗಳ ದಿಟ್ಟ ಉತ್ತರ : ಫಾಲೋ ಆನ್ ಹೇರದೇ ಸೋಲಿನ ಸುಳಿಗೆ ಸಿಲುಕಿದ ಆಸೀಸ್

author img

By

Published : Mar 15, 2022, 7:28 PM IST

Updated : Mar 15, 2022, 7:50 PM IST

408ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 97/2ಕ್ಕೆ ಡಿಕ್ಲೇರ್​ ಘೋಷಿಸಿ ಪಾಕಿಸ್ತಾನಕ್ಕೆ 506 ರನ್​ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿರುವ ಪಾಕಿಸ್ತಾನ 4ನೇ ದಿನದಂತ್ಯಕ್ಕೆ 2 ವಿಕೆಟ್​ ಕಳೆದುಕೊಂಡು 192 ರನ್​ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ..

Pakistan vs Australia
ಭಾರತ vs ಪಾಕಿಸ್ತಾನ ಟೆಸ್ಟ್​

ಕರಾಚಿ : ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್​ ಪಂದ್ಯ ರೋಚಕ ಹಂತಕ್ಕೆ ತಲುಪಿದೆ. ಕೊನೆಯ ದಿನ ಪಾಕಿಸ್ತಾನ ಗೆಲ್ಲಲು 314 ರನ್‌ಗಳ ಅಗತ್ಯವಿದ್ದರೆ,ಇತ್ತ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ 8 ವಿಕೆಟ್​ಗಳ ಅಗತ್ಯವಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 556/9 ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡರೆ, ಪಾಕಿಸ್ತಾನವನ್ನು 148 ರನ್​ಗಳಿಗೆ ಆಲೌಟ್​ ಮಾಡಿ ಬರೋಬ್ಬರಿ 408 ರನ್​ಗಳ ಇನ್ನಿಂಗ್ಸ್ ಮುನ್ನಡೆ ಪಡೆದಿತ್ತು.

ಆದರೆ, ಬೃಹತ್ ಮುನ್ನಡೆಯ ಹೊರತಾಗಿಯೂ ಫಾಲೋ ಆನ್​ ಹೇರದೆ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿತ್ತು. ಆದರೆ, ಇದೇ ಅವರಿಗೆ ಮುಳ್ಳಾಗಿ ಪರಿಣಮಿಸಿದೆ.

408ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 97/2ಕ್ಕೆ ಡಿಕ್ಲೇರ್​ ಘೋಷಿಸಿ ಪಾಕಿಸ್ತಾನಕ್ಕೆ 506 ರನ್​ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿರುವ ಪಾಕಿಸ್ತಾನ 4ನೇ ದಿನದಂತ್ಯಕ್ಕೆ 2 ವಿಕೆಟ್​ ಕಳೆದುಕೊಂಡು 192 ರನ್​ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ.

ನಾಯಕ ಬಾಬರ್ ಅಜಮ್ 102 ಮತ್ತು ಅಬ್ದುಲ್ಲಾ ಶಫೀಕ್ 71 ರನ್​ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. 21ಕ್ಕೆ2 ವಿಕೆಟ್​ ಕಳೆದುಕೊಂಡಿದ್ದ ವೇಳೆ ಜೊತೆಯಾದ ಈ ಜೋಡಿ ಬರೋಬ್ಬರಿ 171 ರನ್​ ಸೇರಿಸಿದೆ.

ನಾಳೆ ಟೆಸ್ಟ್​ನ ಅಂತಿಮ ದಿನವಾಗಿದ್ದು, ಎರಡೂ ತಂಡಕ್ಕೂ ಗೆಲುವಿನ ಅವಕಾಶವಿದೆ. ಪಾಕಿಸ್ತಾನ ಗೆಲ್ಲಲು 90 ಓವರ್​ಗಳಲ್ಲಿ 314 ರನ್​ಗಳಿಸಬೇಕಾಗಿದೆ. ಆಸ್ಟ್ರೇಲಿಯಾ ಅಷ್ಟೇ ಓವರ್​ಗಳಲ್ಲಿ 8 ವಿಕೆಟ್​ ಪಡೆಯಬೇಕಿದೆ.

ಇದನ್ನೂ ಓದಿ:ಐಪಿಎಲ್​ಗೆ ಸ್ಪರ್ಧೆಯೊಡ್ಡಲು ಪಿಎಸ್ಎಲ್​​​ನಲ್ಲಿ ಹೊಸ ಬದಲಾವಣೆ ತರಲು ಬಯಸಿದ್ದೇನೆ : ರಮೀಜ್ ರಾಜಾ

Last Updated : Mar 15, 2022, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.