ETV Bharat / sports

ಕಾಂಗರೂ ಆಟಗಾರರು ತವರಿಗೆ ಪ್ರಯಾಣ ಹೇಗೆ?.. ಮ್ಯಾಕ್ಸ್​ವೆಲ್​ ಹೇಳಿದ್ದು ಹೀಗೆ..

author img

By

Published : Apr 30, 2021, 4:04 PM IST

ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಈಗಾಗಲೇ ಭಾರತದಿಂದ ಆಸ್ಟ್ರೇಲಿಯಾಗೆ ತೆರಳುವ ವಿಮಾನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.

Maxwell
Maxwell

ಅಹಮದಾಬಾದ್​: ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಈಗಾಗಲೇ ಭಾರತದಿಂದ ಆಸ್ಟ್ರೇಲಿಯಾಕ್ಕೆ ತೆರಳುವ ವಿಮಾನ ರದ್ಧುಗೊಳಿಸಲಾಗಿದ್ದು, ಐಪಿಎಲ್​ನಲ್ಲಿ ಭಾಗಿಯಾಗಿರುವ ಪ್ಲೇಯರ್ಸ್​ಗೋಸ್ಕರ ವಿಶೇಷ ವಿಮಾನ ಕಳುಹಿಸುವುದಿಲ್ಲ ಎಂದು ಅಲ್ಲಿನ ಪ್ರಧಾನಿ ಘೋಷಣೆ ಸಹ ಮಾಡಿದ್ದಾರೆ.

ಇದೇ ಭಯದಲ್ಲಿ ಈಗಾಗಲೇ ಆಸ್ಟ್ರೇಲಿಯಾದ ಪ್ಲೇಯರ್ಸ್​​ ಆ್ಯಡಂ ಜಂಪಾ ಹಾಗೂ ಕೇನ್ ರಿಚರ್ಡ್ಸನ್ ಐಪಿಎಲ್ ತೊರೆದು ಸ್ವದೇಶಕ್ಕೆ ತೆರಳಿದ್ದಾರೆ. ಇದರ ಮಧ್ಯೆ ಕೂಡ ಮ್ಯಾಕ್ಸ್​ವೆಲ್​, ಸ್ಟೀವ್​ ಸ್ಮಿತ್​, ಡೇವಿಡ್​ ವಾರ್ನರ್​ ಸೇರಿದಂತೆ ಅನೇಕ ಪ್ಲೇಯರ್ಸ್ ಇಲ್ಲೇ ಉಳಿದುಕೊಂಡಿದ್ದಾರೆ.

ಇದೀಗ ಈ ಪ್ಲೇಯರ್ಸ್​​ ಐಪಿಎಲ್​ ಮುಕ್ತಾಯದ ಬಳಿಕ ಭಾರತ, ನ್ಯೂಜಿಲ್ಯಾಂಡ್​ ಹಾಗೂ ಇಂಗ್ಲೆಂಡ್ ಪ್ಲೇಯರ್ಸ್ ಜತೆ ಚಾರ್ಟರ್ಡ್​​ ವಿಮಾನದಲ್ಲಿ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದಂತೆ ಮ್ಯಾಕ್ಸ್​ವೆಲ್ ಸುಳಿವು ನೀಡಿದ್ದಾರೆ.

ನಾವು ಮನೆಗೆ ಹೋಗಲು ಒಂದು ಮಾರ್ಗ ಕಂಡುಕೊಳ್ಳಲು ಬಯಸುತ್ತೇವೆ. ಅದಕ್ಕಾಗಿ ಬಿಸಿಸಿಐ ನಮಗೆ ಸಹಾಯ ಮಾಡಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಜೂನ್​ 18ರಿಂದ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಭಾರತ-ನ್ಯೂಜಿಲ್ಯಾಂಡ್ ಭಾಗಿಯಾಗಲಿದ್ದು, ಇದಕ್ಕಾಗಿ ಐಪಿಎಲ್​ ಮುಗಿದ ತಕ್ಷಣ ಭಾರತ ಇಂಗ್ಲೆಂಡ್​ಗೆ ಪ್ರಯಾಣ ಬೆಳೆಸಲಿದೆ. ಇದರಲ್ಲಿ ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ಪ್ಲೇಯರ್ಸ್​​​ ಹೋಗುವ ಸಾಧ್ಯತೆ ಇದೆ.

ಇದನ್ನೂ ಓದಿ: 'ವ್ಯಕ್ತಿತ್ವ ಬದಲಾಯಿಸಲಾಗದಿದ್ರೇ, ವ್ಯಕ್ತಿಯನ್ನೇ ಬದಲಿಸು..' ತಂಡಕ್ಕೆ ಮೆಕಲಮ್​ ಎಚ್ಚರಿಕೆ

ಇಂಗ್ಲೆಂಡ್​ಗೆ ತೆರಳಿದ ನಂತರ ಅಲ್ಲಿಂದ ಆಸ್ಟ್ರೇಲಿಯಾಗೆ ತೆರಳಲು ಕೆಲ ಪ್ಲೇಯರ್ಸ್​ಗೆ ಸುಲಭವಾಗುವ ಸಾಧ್ಯತೆ ಇದೆ. ಭಾರತದಲ್ಲಿ ಕೋವಿಡ್​ ವೇಗವಾಗಿ ಹಬ್ಬುತ್ತಿರಬಹುದು. ಆದರೆ ಬಿಸಿಸಿಐ ನಮಗಾಗಿ ಬಯೋ ಬಬಲ್​ ನಿರ್ಮಿಸಿದ್ದು, ಅಲ್ಲಿ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.