ETV Bharat / sports

Asian Games: ಬಾಂಗ್ಲಾ ಬಗ್ಗುಬಡಿದು ಫೈನಲ್​ಗೆ ಟೀಂ ಇಂಡಿಯಾ ಲಗ್ಗೆ.. ಭಾರತಕ್ಕೆ ಮತ್ತೊಂದು ಪದಕ ಖಚಿತ

author img

By ETV Bharat Karnataka Team

Published : Oct 6, 2023, 9:27 AM IST

Updated : Oct 6, 2023, 9:58 AM IST

ಏಷ್ಯನ್ ಗೇಮ್ಸ್ ಕ್ರಿಕೆಟ್​ ಸೆಮಿಫೈನಲ್​ನಲ್ಲಿ ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಗೆದ್ದು ಫೈನಲ್​ಗೆ ಲಗ್ಗೆ ಹಾಕಿದೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ.

Asian Games cricket final
Asian Games cricket final

ಹ್ಯಾಂಗ್‌ಝೌ (ಚೀನಾ): ಏಷ್ಯನ್ ಗೇಮ್ಸ್ ಕ್ರಿಕೆಟ್ ಟಿ 20 ಸೆಮಿಫೈನಲ್​ನಲ್ಲಿ ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಅನಾಯಾಸವಾಗಿ ಜಯಿಸಿ ಫೈನಲ್​ಗೆ ಲಗ್ಗೆ ಇಟ್ಟಿತು. ಭಾರತದ ಮಾರಕ ಬೌಲಿಂಗ್ ದಾಳಿಗೆ ಬಾಂಗ್ಲಾ ತತ್ತರಿಸಿ ಶರಣಾಯಿತು. ಟೀಂ ಇಂಡಿಯಾ ಫೈನಲ್​ ಪ್ರವೇಶಿಸುವ ಜೊತೆಗೆ ಏಷ್ಯನ್ ಗೇಮ್ಸ್​ನಲ್ಲಿ ಪದಕ ಖಚಿತ ಪಡಿಸಿಕೊಂಡಿತು.

ಇಂದು ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಮೊದಲು ಬೌಲಿಂಗ್ ಆಯ್ದುಕೊಂಡಿತು. ಇದರಿಂದಾಗಿ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಾಂಗ್ಲಾ ಆಟಗಾರರು ಟೀಂ ಇಂಡಿಯಾದ ಕರಾರುವಕ್ಕ ಬೌಲಿಂಗ್​ ಎದುರಿಸಲಾಗದೆ ಕ್ರೀಸ್​ಗೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 96 ರನ್ ಗಳಿಸಲಷ್ಟೇ ಬಾಂಗ್ಲಾ ಶಕ್ತವಾಯಿತು.

ಬಾಂಗ್ಲಾ ಪರ ಓಪನರ್ ಪರ್ವೇಜ್ ಹುಸೇನ್ (23) ರನ್ ಮತ್ತು ವಿಕೇಟ್ ಕೀಪರ್ ಜಾಕೀರ್ ಅಲಿ 29 ರನ್ ಹಾಗೂ ರಕಿಬುಲ್ ಹಸನ್ 14 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಎರಡಂಕಿ ದಾಟಲಿಲ್ಲ. ವಾಷಿಂಗ್ಟನ್ ಸುಂದರ್ 2, ಸಾಯಿ ಕಿಶೋರ್ 3, ಅರ್ಶದೀಪ್ ಸಿಂಗ್, ತಿಲಕ್ ವರ್ಮಾ, ರವಿ ಬಿಸ್ನೋಯ್ ಮತ್ತು ಶಹಬಾಜ್ ಅಹಮದ್ ತಲಾ 1 ವಿಕೆಟ್ ಕಬಳಿಸಿ ಬಾಂಗ್ಲಾ ಆಟಗಾರರನ್ನು ಕಟ್ಟಿ ಹಾಕಿದರು. ಇದರಿಂದಾಗಿ ಬಾಂಗ್ಲಾ ಸ್ಕೋರ್ ಶತಕದ ಗಡಿಯನ್ನು ದಾಟಲಿಲ್ಲ

  • 🏏🇮🇳 Unstoppable India! 🇮🇳🏏

    Our Men's Cricket Team has emerged victorious against Bangladesh in the the Semifinals, enters the FINAL at the #AsianGames2022! 🙌💥#TeamIndia's chase for glory continues, and we are rooting for the GOLD🤩🌟

    All eyes are on the ultimate showdown!… pic.twitter.com/zcS5gJbK3x

    — SAI Media (@Media_SAI) October 6, 2023 " class="align-text-top noRightClick twitterSection" data=" ">

ಬಾಂಗ್ಲಾ ನೀಡಿದ 96 ರನ್​ಗಳ ಸುಲಭ ಗುರಿಯನ್ನು ರುತುರಾಜ್ ಗಾಯಕ್​ವಾಡ್ ಪಡೆ 9.2 ಓವರ್​ಗಳಲ್ಲೇ ತಲುಪಿತು. ಆರಂಭಿಕ ಆಟಗಾರ ಯಶಸ್ವಿ ಜೈಪಾಲ್ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿದರು. ಬಳಿಕ ನಾಯಕ ರುತುರಾಜ್ ಗಾಯಕ್​ವಾಡ್ 40 (26 ಎಸೆತ 3 ಸಿಕ್ಸ್​, 4 ಬೌಂಡರಿ) ಮತ್ತು ತಿಲಕ್ ವರ್ಮಾ (26 ಎಸೆತ, 6 ಸಿಕ್ಸ್, 2 ಬೌಂಡರಿ) 55 ರನ್​ ಜೊತೆಯಾಟದಿಂದ ಟೀಂ ಇಂಡಿಯಾ ಗೆಲುವು ಸಾಧಿಸಿತು.

ಟೀಂ ಇಂಡಿಯಾಗೆ ಮತ್ತೊಂದು ಪದಕ ಖಚಿತ: ಏಷ್ಯನ್ ಗೇಮ್ಸ್​ ಟಿ 20 ಕ್ರಿಕೆಟ್​ನಲ್ಲಿ ಭಾರತ ಪುರುಷರ ತಂಡ ಫೈನಲ್ ತಲುಪಿದ್ದರಿಂದ ದೇಶಕ್ಕೆ ಮತ್ತೊಂದು ಪದಕ ಖಚಿತವಾದಂತಾಗಿದೆ. ಫೈನಲ್​ಗೆ ಗೆದ್ದರೆ ಚಿನ್ನ, ಒಂದು ವೇಳೆ ಎಡವಿದರೆ ಬೆಳ್ಳಿ ಪದಕ ಸಿಗಲಿದೆ. ಈಗಾಗಲೇ ಮಹಿಳೆಯರ ತಂಡ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ರಚಿಸಿದೆ. ಇದೀಗ ರುತುರಾಜ್ ಗಾಯಕ್​ವಾಡ್ ಪಡೆ ದಾಖಲೆ ಬರೆಯುವ ಹಂತಕ್ಕೆ ತಲುಪಿದೆ.

ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಪುರುಷ ಮತ್ತು ಮಹಿಳೆಯರ ಕ್ರಿಕೆಟ್ ತಂಡಗಳು ಭಾಗಿಯಾಗಿವೆ. ಆರಂಭಿಕ ಟೂರ್ನಿಯಲ್ಲೇ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರಿದೆ.

ಫೈನಲ್​​ನಲ್ಲಿ ಯಾರ ವಿರುದ್ಧ ಕಣಕ್ಕೆ: ಇಂದು ನಡೆಯಲಿರುವ ಮತ್ತೊಂದು ಸೆಮಿಫೈನಲ್ ಪಂದ್ಯ ಪಾಕ್, ಅಪ್ಘಾನಿಸ್ತಾನ್ ತಂಡಗಳ ಮಧ್ಯೆ ನಡೆಯಲಿದ್ದು, ಇಲ್ಲಿ ಗೆಲ್ಲುವ ತಂಡ ಭಾರತ ಜೊತೆ ನಾಳೆ ಫೈನಲ್​ನಲ್ಲಿ ಸೆಣಸಲಿದೆ.

ಸ್ಕೋರ್:

ಬಾಂಗ್ಲಾದೇಶ: 96/9 (20)

ಭಾರತ: 97/1 (9.4)

ಇದನ್ನೂ ಓದಿ: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ; 100 ಪದಕ ಸಾಧನೆಯತ್ತ ಅಥ್ಲೀಟ್‌ಗಳ ಚಿತ್ತ

Last Updated : Oct 6, 2023, 9:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.