ETV Bharat / sports

ಪಾಕ್​ ಪ್ರವಾಸ ಒಲ್ಲೆ ಎಂದ ಭಾರತಕ್ಕೆ ಇತರ ರಾಷ್ಟ್ರಗಳ ಬೆಂಬಲ: ಪಾಕಿಸ್ತಾನದ ಕೈ ತಪ್ಪಿದ ಏಷ್ಯಾಕಪ್​ಗೆ ಲಂಕಾ ಆಥಿತ್ಯ ?

author img

By

Published : May 9, 2023, 5:21 PM IST

Updated : May 9, 2023, 5:30 PM IST

ನಿನ್ನೆ ದುಬೈನಲ್ಲಿ ನಡೆದ ಏಷ್ಯಾಕಪ್​ ಸಂಬಂಧಿತ ಸಭೆಯಲ್ಲಿ ಪಾಕಿಸ್ತಾನದ ಬದಲು ಬೇರೆ ಕಡೆ ಟೂರ್ನಿ ಆಯೋಜನೆಗೆ ಅಭಿಪ್ರಾಯ ವ್ಯಕ್ತವಾಗಿದ್ದು, ಇದಕ್ಕೆ ಲಂಕಾ ಹಾಗೂ ಬಾಂಗ್ಲಾ ಮನ್ನಣೆ ನೀಡಿದೆ.

Asia Cup likely to move out of Pakistan, Sri Lanka may host the tournament: Reports
ಪಾಕ್​ ಪ್ರವಾಸ ಒಲ್ಲೇ ಎಂದ ಭಾರತಕ್ಕೆ ಇತರ ರಾಷ್ಟ್ರಗಲ ಬೆಂಬಲ: ಪಾಕಿಸ್ತಾನ ಕೈ ತಪ್ಪಿದ ಏಷ್ಯಾಕಪ್​ಗೆ ಲಂಕಾ ಆಥಿತ್ಯ ?

2023ರ ಏಕದಿನ ಮಾದರಿಯ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಆತಿಥ್ಯವನ್ನು ಪಾಕಿಸ್ತಾನದಿಂದ ಬೇರೆ ಕಡೆಗೆ ಸ್ಥಳಾಂತರಿಸಲು ಏಷ್ಯನ್‌ ಕ್ರಿಕೆಟ್‌ ಸಮಿತಿ (ಎಸಿಸಿ) ನಿರ್ಧರಿಸಿದೆ. ಇದರಿಂದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ (ಪಿಸಿಬಿ) ಹಿನ್ನಡೆ ಉಂಟಾಗಿದೆ. ಭಾರತ ಮತ್ತು ಪಾಕಿಸ್ತಾನ ಒಳಗೊಂಡಂತೆ ಆರು ರಾಷ್ಟ್ರಗಳು ಪಾಲ್ಗೊಳ್ಳುವ ಟೂರ್ನಿಯು ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆಯಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಯುಎಇನಲ್ಲಿ ತಾಪಮಾನ ಹೆಚ್ಚಿರುವ ಕಾರಣ ಯುಎಇಯಲ್ಲಿ ಆಯೋಜನೆಗೆ ಹಿಂಜರಿಯಲಾಗುತ್ತಿದೆ.

ಏಷ್ಯಾಕಪ್‌ 2023 ಸಪ್ಟೆಂಬರ್​ 2ರಿಂದ 17 ರ ವರೆಗೆ ನಡೆಯಲಿದೆ. ಸೋಮವಾರ ದುಬೈನಲ್ಲಿ ಏಷ್ಯಾಕಪ್​ ಸಂಬಂಧಿತ ಸಭೆಯಲ್ಲಿ ಪಾಕಿಸ್ತಾನದ ಕ್ರಿಕೆಟ್​ ಮಂಡಳಿಯಿಂದ ಸೇಥಿ ಪಾಲ್ಗೊಂಡಿದ್ದರು. ಈ ವೇಳೆ, ಭಾರತ ಪಾಕ್​ ಬಿಟ್ಟು ಬೇರೆ ಕಡೆ ನಡೆಸುವ ಬಗ್ಗೆ ಪ್ರಸ್ತಾಪಿಸಿತ್ತು. ಇದಕ್ಕೆ ಬಾಂಗ್ಲಾದೇಶ ಹಾಗೂ ಲಂಕಾ ಕ್ರಿಕೆಟ್​ ಮಂಡಳಿ ಒಪ್ಪಿಗೆ ಕೊಟ್ಟಿತ್ತು. ಪಾಕ್​ ಮಂಡಿಸಿದ ಹೈಬ್ರಿಡ್‌ ಮಾದರಿಗೆ ಒಪ್ಪಿಗೆ ದೊರೆಯಲಿಲ್ಲ. ಪಿಸಿಬಿಗೆ ಹಿನ್ನಡೆ ಉಂಟಾಗಿರುವುದರಿಂದ ಪಾಕಿಸ್ತಾನ ತಂಡವು ಟೂರ್ನಿಯಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ಮಾಹಿತಿ ಖಚಿತವಾಗಿಲ್ಲ.

ಮತ್ತೊಂದೆಡೆ, ಪಾಕಿಸ್ತಾನವು ಅಕ್ಟೋಬರ್ - ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದೆ. ವರದಿಯ ಪ್ರಕಾರ, ಏಷ್ಯಾ ಕಪ್ ಅನ್ನು ಸಂಪೂರ್ಣವಾಗಿ ಹೊಸ ದೇಶಕ್ಕೆ ಸ್ಥಳಾಂತರಿಸಬಹುದು, ಪಂದ್ಯಾವಳಿ ಆಯೋಜಿಸಲು ಶ್ರೀಲಂಕಾ ಮುಂಚೂಣಿಯಲ್ಲಿದೆ.

ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾವು ಕಳೆದ ವರ್ಷ ಏಷ್ಯಾ ಕಪ್ ಅನ್ನು ಆಯೋಜಿಸಲು ವಿಫಲವಾಯಿತು, ಇದರ ಪರಿಣಾಮವಾಗಿ ಪಂದ್ಯಾವಳಿಯನ್ನು ಯುಎಇಗೆ ವರ್ಗಾಯಿಸಲಾಯಿತು. ಎಸಿಸಿ ಅಧ್ಯಕ್ಷ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಭಾರತವು ಸುರಕ್ಷತಾ ಸಮಸ್ಯೆಗಳ ಮೇಲೆ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ತಿಳಿಸಿದ್ದರು ಮತ್ತು ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಹೊರಗೆ ಆಡಿಸುವ ಬಗ್ಗೆ ಅಭಿಪ್ರಾಯ ಮಂಡಿಸಿದ್ದರು.

ಇದಕ್ಕೆ ಪ್ರತಿಯಾಗಿ ಪಿಸಿಬಿ ಹೈಬ್ರಿಡ್ ಮಾದರಿಯನ್ನು ಪ್ರಸ್ತಾಪಿಸಿತು. ಅದು ಭಾರತವು ತನ್ನ ಪಂದ್ಯಗಳನ್ನು ಕಡಲಾಚೆಯ ಸ್ಥಳದಲ್ಲಿ ಆಡುತ್ತದೆ ಮತ್ತು ಪಾಕಿಸ್ತಾನವು ಉಳಿದ ಪಂದ್ಯಗಳನ್ನು ತವರಿನಲ್ಲಿ ಆಡುವುದು ಎಂದು ತಿಳಿಸಿತ್ತು. ಭಾರತದ ಕೊನೆಯ ಪ್ರವಾಸವು 2008 ರ ಏಷ್ಯಾಕಪ್‌ಗಾಗಿದ್ದರೆ, ಪಾಕಿಸ್ತಾನದ ಕೊನೆಯ ಭೇಟಿಯು 2016 ರ ICC T20 ವಿಶ್ವಕಪ್‌ಗಾಗಿ ಆಗಿತ್ತು. ಉಭಯ ತಂಡಗಳು 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್‌ನಲ್ಲಿ ಕೊನೆಯದಾಗಿ ಪರಸ್ಪರ ಆಡಿದ್ದವು.

ನಿನ್ನೆ ಸಭೆಯ ಸಂದರ್ಭದಲ್ಲಿ ಮಾತನಾಡಿದ್ದ ಸೇಥಿ," ಏಷ್ಯಾ ಕಪ್‌ನಲ್ಲಿ ಸ್ಪರ್ಧಿಸಲು ಭಾರತವು ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದರೆ, ಪಾಕಿಸ್ತಾನ ಸರ್ಕಾರವು ನಮ್ಮ ತಂಡವನ್ನು ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ಗಾಗಿ ಪ್ರವಾಸಕ್ಕೆ ನಿರಾಕರಿಸಲಿದೆ. ಆದರೆ ಕ್ರಿಕೆಟ್ ಎಂಬುದು ಅಂತಿಮವಾದಾಗ ಬದಲಾಗುವ ಸಾಧ್ಯತೆಯೂ ಇದೆ. ಐಸಿಸಿ ಮತ್ತು ಎಸಿಸಿ ಪಂದ್ಯಗಳ ಸುಗಮ ಆತಿಥ್ಯಕ್ಕೆ ಬೆದರಿಕೆ ಹಾಕುವ ಸಮಸ್ಯೆಗಳನ್ನು ಪರಿಹರಿಸಲು ಮಧ್ಯಮ ಮಾರ್ಗವಿರಬೇಕು. ಏಷ್ಯಾಕಪ್‌ಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದರೆ, ಭಾರತಕ್ಕೆ ಪ್ರಯಾಣಿಸಲು ಸರ್ಕಾರವು ನಮಗೆ ಅವಕಾಶ ನೀಡುವುದಿಲ್ಲ" ಎಂದು ಹೇಳಿದ್ದರು.

ಇದನ್ನೂ ಓದಿ: ಪಾಕ್​ನಿಂದ ಹೊರಗೆ ಏಷ್ಯಾಕಪ್​: ಬಿಸಿಸಿಐಗೆ ಬೆಂಬಲ ಸೂಚಿಸಿದ ಲಂಕಾ, ಬಾಂಗ್ಲಾ ಕ್ರಿಕೆಟ್​ ಮಂಡಳಿ

Last Updated :May 9, 2023, 5:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.