ETV Bharat / sports

ಹೈಬ್ರಿಡ್​ ಮಾದರಿಯಲ್ಲಿ ಏಷ್ಯಾ ಕಪ್​: ಭಾರತ-ಪಾಕಿಸ್ತಾನ ಫೈನಲ್​ನಲ್ಲಿ ಎದುರಾದರೆ ಪಂದ್ಯ ಎಲ್ಲಿ?

author img

By

Published : May 3, 2023, 5:40 PM IST

ಏಷ್ಯಾಕಪ್ ಕ್ರಿಕೆಟ್ ನಡೆಯುವ ಸ್ಥಳದ ವಿಚಾರದಲ್ಲಿ ಬಿಸಿಸಿಐ ಮತ್ತು ಪಿಸಿಬಿ ನಡುವೆ ಜಗಳ ನಡೆಯುತ್ತಿದೆ. ಪಂದ್ಯಾವಳಿಯು ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಏಕಕಾಲದಲ್ಲಿ ನಡೆಯುವ ಸಾಧ್ಯತೆಯಿದೆ.

Asia Cup cricket may be held in hybrid mode
ಹೈಬ್ರಿಡ್​ ಮಾದರಿಯಲ್ಲಿ ಏಷ್ಯಾ ಕಪ್​: ಭಾರತ-ಪಾಕಿಸ್ತಾನ ಫೈನಲ್​ನಲ್ಲಿ ಎದುರಾದರೆ ಪಂದ್ಯ ಎಲ್ಲಿ?

ಕೋಲ್ಕತ್ತಾ: ವಿವಿಧ ಕಾರಣಗಳಿಂದಾಗಿ ಪಾಕಿಸ್ತಾನ ಪ್ರವಾಸ ಕೈಗೊಳ್ಳದಿರಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರ ಮಾಡಿದೆ. ಅದು ವಿಶ್ವಕಪ್ ಆಗಿರಲಿ ಅಥವಾ ಏಷ್ಯಾ ಕಪ್ ಆಗಿರಲಿ, ಯಾವುದೇ ಮಹತ್ವದ ಪಂದ್ಯಕ್ಕೂ ಪಾಕಿಸ್ತಾನ ತೆರಳುವುದಿಲ್ಲ ಎಂದು ಹೇಳಿದೆ. ಇದರಿಂದ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ ಇನ್ನೂ ಅನಿಶ್ಚಿತತೆಯಲ್ಲಿದೆ.

ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿರುವುದರಿಂದ, ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ 2023 ರಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಈಗಾಗಲೇ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐ ಯಾವುದೇ ಸಂದರ್ಭದಲ್ಲೂ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಸ್ಪಷ್ಟಪಡಿಸಿದೆ.

2009 ರಲ್ಲಿ ಶ್ರೀಲಂಕಾ ತಂಡದ ಮೇಲೆ ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ನಡೆಯಿತು. ಇದರ ನಂತರ ಪಾಕಿಸ್ತಾನಕ್ಕೆ ಯಾವುದೇ ತಂಡಗಳು ದ್ವಿಪಕ್ಷೀಯ ಸರಣಿಗೆ ಪ್ರವಾಸ ಮಾಡಿರಲಿಲ್ಲಿ. ಕಳೆದ ವರ್ಷ ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್​ ತಂಡಗಳು ಪಾಕಿಸ್ಥಾನಕ್ಕೆ ಹೋಗಿ ಆಡಿದ್ದವು ಇದರಿಂದ 13 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಅಂತರಾಷ್ಟ್ರೀಯ ಪಂದ್ಯಾವಳಿಗಳು ನಡೆದವು. 1999 ರಲ್ಲಿನ ಕಾರ್ಗಿಲ್​ ಯುದ್ಧದ ನಂತರ ಭಾರತ ತಂಡ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಸರಣಿಯನ್ನು ಆಡುತ್ತಿಲ್ಲ. ಕೇವಲ ಐಸಿಸಿ ಮತ್ತು ಎಸಿಸಿ ನಡೆಸುವ ಮಹತ್ವದ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇತೃತ್ವದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ), ವಾಣಿಜ್ಯ ಅಂಶಗಳ ಮೇಲಿನ ಪರಿಣಾಮಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಬಿಸಿಸಿಐ ಈ ವಿಚಾರದಲ್ಲಿ ತಲೆ ಕೆಡಿಸಿಕೊಂಡಿಲ್ಲ. ಏಷ್ಯಾ ಕಪ್ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಎಸಿಸಿ ಮುಂದೆ ಎರಡು ಆಯ್ಕೆಗಳಿವೆ. ಅದರಲ್ಲಿ ಒಂದು ವಿಶ್ವಕಪ್​ನ ಪೂರ್ವ ಸಿದ್ಧತಾ ಪಂದ್ಯಗಳೆಂದು ಕರೆಯಲಾಗುವ ಏಷ್ಯಾಕಪ್​ನ್ನು ರದ್ದುಮಾಡುವುದು. ಆದರೆ ಇದು ದೊಡ್ಡ ಮಟ್ಟದ ಆರ್ಥಿಕ ನಷ್ಟಕ್ಕೆ ಕಾರಣವಾಗಲಿದೆ. ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರವಾಸಿ ಪಂದ್ಯಗಳಿಗೂ ಇದು ತೊಂದರೆಯಾಗಲಿದೆ. ಅಲ್ಲದೇ ದಿವಾಳಿಯಾಗುತ್ತಿರುವ ಪಾಕಿಸ್ತಾನಕ್ಕೆ ಇದು ಹೊರೆಯಾಗಲಿದೆ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇದಕ್ಕೆ ಒಪ್ಪುವುದಿಲ್ಲ.

ಎರಡನೆಯದು ಏಷ್ಯಾಕಪ್ ಅನ್ನು 'ಹೈಬ್ರಿಡ್' ಮೋಡ್‌ನಲ್ಲಿ ನಡೆಸುವುದು. ಇದರರ್ಥ ಪಾಕಿಸ್ತಾನ ತನ್ನ ಪಂದ್ಯಗಳನ್ನು ತವರಿನಲ್ಲಿ ಆಡುತ್ತದೆ ಮತ್ತು ಭಾರತವು ತಟಸ್ಥ ಸ್ಥಳದಲ್ಲಿ ಆಡುತ್ತದೆ. ಇದು ಐಸಿಸಿ ಪ್ರಧಾನ ಕಚೇರಿ ಹೊಂದಿರುವ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ದುಬೈನಲ್ಲಿ ನಡೆಯಲಿದೆ.

ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿರುವ ಮಾಹಿತಿಯಂತೆ, ' ಹೈಬ್ರಿಡ್ ಮಾದರಿಯಲ್ಲಿ ಆಡುವ ಬಗ್ಗೆ ಈವರೆಗೆ ಚರ್ಚೆಗಳು ನಡೆದಿವೆ. ಇದು ಎರಡೂ ದೇಶಗಳ ಹಾಗೂ ಐಸಿಸಿ ಹಿತಾಸಕ್ತಿ ಕಾಪಾಡಲು ನೆರವಾಗಲಿದೆ. ಅಂತಿಮವಾಗಿ ಎರಡೂ ಕ್ರಿಕೆಟ್​ ಮಂಡಳಿಗಳು ಇದಕ್ಕೆ ಒಪ್ಪಿಗೆ ನೀಡುವ ಎಲ್ಲಾ ಸಾಧ್ಯತೆಗಳಿವೆ. ಆದರೆ ಹೈಬ್ರಿಡ್​ ಮಾದರಿಯ ಒಂದು ಸಮಸ್ಯೆ ಎಂದರೆ ಪ್ರಮುಖ ಹಂತದ ಪಂದ್ಯದಲ್ಲಿ ಭಾರತ ಪಾಕಿಸ್ತಾನ ಎದುರಾದರೆ ಪಂದ್ಯ ಎಲ್ಲಿ ಆಡಿಸಲಾಗುವುದು ಎಂಬುದು ಪ್ರಶ್ನೆಯಾಗಿದೆ.

ಇದನ್ನೂ ಓದಿ: LSG vs CSK: ಲಕ್ನೋ ವಿರುದ್ಧ ಟಾಸ್​ ಗೆದ್ದ ಚೆನ್ನೈ ಬೌಲಿಂಗ್​ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.