ETV Bharat / sports

ಭಾರತ-ಪಾಕ್ ರೋಚಕ ಪಂದ್ಯದ ವೇಳೆ ಮಹಮ್ಮದ್ ರಿಜ್ವಾನ್ ತಬ್ಬಿ ಕ್ರೀಡಾಸ್ಫೂರ್ತಿ ಮೆರೆದ ಹಾರ್ದಿಕ್

author img

By

Published : Aug 29, 2022, 3:14 PM IST

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ನಿನ್ನೆ ನಡೆದ ಪಂದ್ಯ ಸಾಕಷ್ಟು ರೋಚಕತೆಯಿಂದ ತುಂಬಿತ್ತು. ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಜಿದ್ದಾಜಿದ್ದಿನಿಂದ ಹೋರಾಡಿದ ಭಾರತ ರೋಚಕ ಗೆಲುವು ದಾಖಲಿಸಿದೆ. ಈ ಪಂದ್ಯ ಹಲವು ಕುತೂಹಲಕರ ಸನ್ನಿವೇಶಗಳಿಗೂ ಸಾಕ್ಷಿಯಾಯಿತು.

Hardik Pandya Hugs Mohammad Rizwan
Hardik Pandya Hugs Mohammad Rizwan

ದುಬೈ(ಯುಎಇ): ಏಷ್ಯಾ ಕಪ್ 2022 ಟೂರ್ನಿಯ ಎರಡನೇ ಪಂದ್ಯದಲ್ಲಿ ನಿನ್ನೆ ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ರಣರೋಚಕ ಪಂದ್ಯವನ್ನು ವಿಶ್ವದೆಲ್ಲೆಡೆ ಕೋಟ್ಯಂತರ ಕ್ರೀಡಾಪ್ರೇಮಿಗಳು ವೀಕ್ಷಿಸಿ ಖುಷಿಪಟ್ಟಿದ್ದಾರೆ. ಪಂದ್ಯದ ಕೊನೆಯವರೆಗೂ ಉಭಯ ತಂಡಗಳ ಗೆಲುವು ಸಂಭವನೀಯತೆ ಶೇ 50-50 ಯಂತೆ ಸಾಗಿದ್ದು ಅಭಿಮಾನಿಗಳು ಹಲ್ಲು ಕಚ್ಚಿಕೊಂಡು ಪಂದ್ಯ ನೋಡಿದ್ದಾರೆ.

ಪಾಕ್‌ ನೀಡಿದ ಸರಳ ಗುರಿ ಬೆನ್ನತ್ತುವಾಗ ಭಾರತ ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಸೂರ್ಯ ಕುಮಾರ್ ಯಾದವ್ ಹಾಗು ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾದವರು ಹಾರ್ದಿಕ್ ಪಾಂಡ್ಯ. ಬೌಲಿಂಗ್‌ನಲ್ಲಿ ಪಾಕ್‌ ಆಟಗಾರರಿಗೆ ನಡುಕ ಹುಟ್ಟಿಸಿ ಬ್ಯಾಟಿಂಗ್‌ನಲ್ಲೂ ಲೀಲಾಜಾಲ ಪ್ರದರ್ಶನ ನೀಡಿದ ಪಾಂಡ್ಯ ಪಂದ್ಯವನ್ನು ಸಿಕ್ಸರ್‌ ಮೂಲಕವೇ ಮುಗಿಸಿ ಭಾರತಕ್ಕೆ ಅಭೂತಪೂರ್ವ ಗೆಲುವು ತಂದಿತ್ತರು.

ಇದನ್ನೂ ಓದಿ: Asia Cup 2022: ಪಾಕ್​ ವಿರುದ್ಧ ಅಬ್ಬರಿಸಿದ ಪಾಂಡ್ಯ.. ವಿಶ್ವಕಪ್​ ಸೋಲಿಗೆ ಸೇಡು ತೀರಿಸಿಕೊಂಡ ಭಾರತ

ಆದ್ರೆ ಒಂದೆಡೆ ಅವರು ಪಂದ್ಯ ಗೆಲ್ಲಿಸಿಕೊಡುವ ಒತ್ತಡದಲ್ಲಿದ್ದರೆ ಮತ್ತೊಂದೆಡೆ ಪಾಂಡ್ಯಾ ಕ್ರೀಡಾಸ್ಪೂರ್ತಿಯನ್ನೂ ಮೆರೆದಿದ್ದು ಕಂಡುಬಂತು. ಸಾಂಪ್ರದಾಯಿಕ ಬದ್ಧ ವೈರಿಗಳ ಕದನವಾದರೂ ಅವರು ಎದುರಾಳಿ ತಂಡದ ವಿಕೆಟ್‌ ಕೀಪರ್‌ ಮಹಮ್ಮದ್ ರಿಜ್ವಾನ್ ಅವರನ್ನು ತಬ್ಬಿಕೊಂಡರು. ಪಾಂಡ್ಯಾರ ಈ ನಡೆ ಭಾರತ-ಪಾಕಿಸ್ತಾನದ ಅಭಿಮಾನಿಗಳ ಖುಷಿ ಹೆಚ್ಚಿಸಿತು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ವೈರಲ್ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.