ETV Bharat / sports

ಆಂಗ್ಲೋ-ಆಸಿಸ್ ಆ್ಯಶಸ್​ ಸರಣಿಗೆ​ ಮುಹೂರ್ತ: ಪಂದ್ಯಗಳ ವೇಳಾಪಟ್ಟಿ ಹೀಗಿದೆ..

author img

By

Published : May 19, 2021, 12:03 PM IST

26 ವರ್ಷಗಳಲ್ಲಿ ಮೊದಲ ಬಾರಿಗೆ ಅಂತಿಮ ಆ್ಯಶಸ್ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಡೆಯುತ್ತಿಲ್ಲ. ಇನ್ನು, ಮಹಿಳೆಯರ ಟೆಸ್ಟ್ ಪಂದ್ಯ ಜನವರಿ 27-30 ರವರೆಗೆ ಓವಲ್‌ನಲ್ಲಿ ನಿಗದಿಯಾಗಿದೆ.

ಆಂಗ್ಲೋ-ಆಸಿಸ್ ಆ್ಯಶಸ್​ ಸರಣಿ​
ಆಂಗ್ಲೋ-ಆಸಿಸ್ ಆ್ಯಶಸ್​ ಸರಣಿ​

ಲಂಡನ್: ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) 2021-22ರ ಪುರುಷರ ಮತ್ತು ಮಹಿಳಾ ಆ್ಯಶಸ್​ ಸರಣಿಯನ್ನು ಆಸ್ಟ್ರೇಲಿಯಾದಲ್ಲಿ ನಡೆಸಲು ನಿರ್ಧರಿಸಿವೆ.

ಮೊದಲು ಪುರುಷರ ಆ್ಯಶಸ್​ ಟೆಸ್ಟ್ ಸರಣಿ ನಡೆಯಲಿದ್ದು, ಡಿಸೆಂಬರ್ 8 ರಿಂದ ಮೊದಲ ಟೆಸ್ಟ್​ ಆರಂಭವಾಗಲಿದೆ. ಡಿಸೆಂಬರ್ 8 ರಿಂದ 12 ರವರಗೆ ಮೊದಲ ಟೆಸ್ಟ್​ ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆಯುತ್ತೆ. ಎರಡನೇ ಟೆಸ್ಟ್​ ಡಿಸೆಂಬರ್ 16-20 ಅಡಿಲೇಡ್​ನ ಓವಲ್‌ನಲ್ಲಿ ಹಗಲು-ರಾತ್ರಿ ಟೆಸ್ಟ್ ನಡೆಯಲಿದೆ. ಮೂರನೇ ಟೆಸ್ಟ್​ ಡಿಸೆಂಬರ್ 26-30, ಹಾಗೂ ನಾಲ್ಕನೇ ಟೆಸ್ಟ್ ಜನವರಿ 5-9 ರ ವರಗೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ. ಅಂತಿಮ ಮತ್ತು ಐದನೇ ಟೆಸ್ಟ್​ ಪಂದ್ಯ ಜನವರಿ 14-18 ರವರಗೆ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.

26 ವರ್ಷಗಳಲ್ಲಿ ಮೊದಲ ಬಾರಿಗೆ ಅಂತಿಮ ಆ್ಯಶಸ್ ಟೆಸ್ಟ್ ಸಿಡ್ನಿಯಲ್ಲಿ ನಡೆಯುತ್ತಿಲ್ಲ. ಇನ್ನು, ಮಹಿಳೆಯರ ಟೆಸ್ಟ್ ಪಂದ್ಯ ಜನವರಿ 27-30 ರವರಗೆ ಓವಲ್‌ನಲ್ಲಿ ನಡೆಯಲಿದೆ.

ಮೂರು ಟಿ -20 ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳು ಸಿಡ್ನಿಯಲ್ಲಿ (ಫೆಬ್ರವರಿ 4 ಮತ್ತು 6) ಮತ್ತು ಕೊನೆಯ ಪಂದ್ಯ ಅಡಿಲೇಡ್ ಓವಲ್ (ಫೆಬ್ರವರಿ 10) ರಂದು ನಡೆಯಲಿದೆ. ಇನ್ನು ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಫೆಬ್ರವರಿ 13 ಅಡಿಲೇಡ್ ಓವಲ್​ನಲ್ಲಿ ನಡೆದರೆ, ಇನ್ನುಳಿದ ಎರಡು ಪಂದ್ಯಗಳು ಮೆಲ್ಬೋರ್ನ್‌ನ ಜಂಕ್ಷನ್ ಓವಲ್ ನಲ್ಲಿ ಫೆಬ್ರವರಿ 16 ಮತ್ತು 19 ರಂದು ನಡೆಯಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.