ETV Bharat / sports

Ashes series : 2ನೇ ಇನ್ನಿಂಗ್ಸ್​​ನಲ್ಲೂ ಇಂಗ್ಲೆಂಡ್ ಕಳಪೆ ಆರಂಭ, ಆಸೀಸ್ ಹಿಡಿತದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್​

author img

By

Published : Dec 27, 2021, 3:03 PM IST

ಕಳೆದ ಎರಡು ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಮಾರ್ಕಸ್​ ಹ್ಯಾರಿಸ್​ ಆಕರ್ಷಕ ಅರ್ಧಶತಕ ಸಿಡಿಸಿ ಆಸ್ಟ್ರೇಲಿಯಾ ತಂಡಕ್ಕೆ 82 ರನ್​ಗಳ ಮುನ್ನಡೆ ಪಡೆದುಕೊಳ್ಳಲು ನೆರವಾದರು..

England vs Australia
ಆಸ್ಟ್ರೇಲಿಯಾ vs ಇಂಗ್ಲೆಂಡ್​

ಮೆಲ್ಬೋರ್ನ್ ​: ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ಸಿಲುಕಿರುವ ಪ್ರವಾಸಿ ಇಂಗ್ಲೆಂಡ್ ತಂಡ ಬಾಕ್ಸಿಂಗ್ ಟೆಸ್ಟ್​ ಪಂದ್ಯದಲ್ಲೂ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿ ಸೋಲುವ ಭೀತಿ ಎದುರಿಸುತ್ತಿದೆ.

ಈಗಾಗಲೇ ಮೊದಲೆರಡು ಟೆಸ್ಟ್​ ಪಂದ್ಯಗಳನ್ನು ಕಳೆದುಕೊಂಡಿರುವ ಇಂಗ್ಲೆಂಡ್​ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲೂ ಹಿನ್ನಡೆ ಅನುಭವಿಸಿದೆ. ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 185 ರನ್​ಗಳಿಗೆ ಆಲೌಟ್​ ಆಗಿದ್ದ ಆಂಗ್ಲರು, ಸೋಮವಾರ ಆಸ್ಟ್ರೇಲಿಯಾ ತಂಡವನ್ನು 267 ರನ್​ಗಳಿಗೆ ನಿಯಂತ್ರಿಸಿದರು.

ಆದರೆ, 2ನೇ ಇನ್ನಿಂಗ್ಸ್​ನಲ್ಲಿ 82 ರನ್​ಗಳ ಇನ್ನಿಂಗ್ಸ್​ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಮಾಡಿ ಕೇವಲ 31 ರನ್​ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ.

ಮಿಚೆಲ್ ಸ್ಟಾರ್ಕ್​ ಬೌಲಿಂಗ್​ನಲ್ಲಿ ಜಾಕ್​ ಕ್ರಾಲೆ 5 ಮತ್ತು ಡೇವಿಡ್ ಮಲನ್​ ಗೋಲ್ಡನ್​ ಡಕ್​ ಆದರೆ, ಸ್ಕಾಟ್​ ಬೊಲೆಂಡ್​ ಬೌಲಿಂಗ್​ನಲ್ಲಿ ಹಸೀಬ್ ಹಮೀದ್​ 7 ಮತ್ತು ಜಾಕ್ ಲೀಚ್ ಖಾತೆ ತೆರೆಯದೇ ಅದೇ ಓವರ್​​ನಲ್ಲಿ ಬೌಲ್ಡ್​ ಆದರು.

ಪ್ರಸ್ತುತ ಇಂಗ್ಲೆಂಡ್​ 2ನೇ ದಿನದಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡು 31 ರನ್​ಗಳಿಸಿ, ಇನ್ನೂ 51 ರನ್​ಗಳ ಇನ್ನಿಂಗ್ಸ್​ ಹಿನ್ನಡೆ ಹೊಂದಿದೆ. ನಾಯಕ ಜೋ ರೂಟ್​​ 12 ಮತ್ತು ಬೆನ್​ ಸ್ಟೋಕ್ಸ್​ 2 ರನ್​​ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಹ್ಯಾರಿಸ್ ಅರ್ಧಶತಕ, ಆಸೀಸ್​ಗೆ ಮುನ್ನಡೆ

ಕಳೆದ ಎರಡು ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಮಾರ್ಕಸ್​ ಹ್ಯಾರಿಸ್​ ಆಕರ್ಷಕ ಅರ್ಧಶತಕ ಸಿಡಿಸಿ ಆಸ್ಟ್ರೇಲಿಯಾ ತಂಡಕ್ಕೆ 82 ರನ್​ಗಳ ಮುನ್ನಡೆ ಪಡೆದುಕೊಳ್ಳಲು ನೆರವಾದರು.

ಇವರು 189 ಎಸೆತಗಳಲ್ಲಿ 7 ಬೌಂಡರಿ ಸಹಿತ 76 ರನ್​ಗಳಿಸಿದರು. ಇವರನ್ನು ಹೊರೆತುಪಡಿಸಿದರೆ ವಾರ್ನರ್​ 38, ಟ್ರಾವಿಸ್ ಹೆಡ್​ 27 ತಂಡದ ಗರಿಷ್ಠ ಸ್ಕೋರರ್​ ಎನಿಸಿದರು. ಸ್ಮಿತ್​ 16, ಮಾರ್ನಸ್​ ಲಾಬುಶೇನ್ ಕೇವಲ 1 ರನ್​ಗೆ ವಿಕೆಟ್ ಒಪ್ಪಿಸಿದರು.

ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ 33ಕ್ಕೆ4, ರಾಬಿನ್​ಸನ್​ 64ಕ್ಕೆ 2, ಮಾರ್ಕ್‌ವುಡ್​ 71ಕ್ಕೆ 2 ಹಾಗೂ ಸ್ಟೋಕ್ಸ್​ ಮತ್ತು ಲೀಚ್​ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ:Ashes Test: ಆ್ಯಶಸ್​ಗೆ ಕೋವಿಡ್​ ಕರಿನೆರಳು; ಇಂಗ್ಲೆಂಡ್​ ಕ್ಯಾಂಪ್​ನಲ್ಲಿನ ನಾಲ್ವರಿಗೆ ಪಾಸಿಟಿವ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.