ETV Bharat / sports

ರೋಚಕ ಘಟ್ಟದಲ್ಲಿ​ ಕೊನೆಯ ಆ್ಯಶಸ್ ಟೆಸ್ಟ್​: ಸೋಲು ತಪ್ಪಿಸಿಕೊಳ್ಳಲು ಇಂಗ್ಲೆಂಡ್ ಹರಸಾಹಸ

author img

By

Published : Jan 16, 2022, 3:17 PM IST

ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 303 ರನ್​ಗಳಿಸಿತ್ತು ಇದಕ್ಕುತ್ತರವಾಗಿ ಇಂಗ್ಲೆಂಡ್​ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 188ಕ್ಕೆ ಆಲೌಟ್ ಆಗಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಸಿಕ್ಕ 115 ರನ್​ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಮಾಡಿದ ಅತಿಥೇಯ ತಂಡ 2ನೇ ಇನ್ನಿಂಗ್ಸ್​ನಲ್ಲಿ ಕೇವಲ 155ಕ್ಕೆ ಆಲೌಟ್​ ಆಯಿತು. ಒಟ್ಟಾರೆ ಮೊದಲ ಇನ್ನಿಂಗ್ಸ್​ ಮುನ್ನಡೆ ಸೇರಿ ಆಂಗ್ಲರಿಗೆ 271 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು.

Australia bowled out for 155, England need 271 to win
ಆ್ಯಶಸ್​ ಟೆಸ್ಟ್ ಸರಣಿ

ಹೋಬರ್ಟ್​: ಮಾರ್ಕ್​ವುಡ್​ರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಆಸ್ಟ್ರೇಲಿಯಾ ತಂಡವನ್ನು 155 ಕ್ಕೆ ಆಲೌಟ್ ಮಾಡಿರುವ ಇಂಗ್ಲೆಂಡ್ ತಂಡ ಕೊನೆಯ ಆ್ಯಶಸ್​ ಪಂದ್ಯವನ್ನು ಗೆಲ್ಲುವುದಕ್ಕೆ 271 ರನ್​ಗಳ ಗುರಿ ಪಡೆದಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 303 ರನ್​ಗಳಿಸಿತ್ತು ಇದಕ್ಕುತ್ತರವಾಗಿ ಇಂಗ್ಲೆಂಡ್​ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 188ಕ್ಕೆ ಆಲೌಟ್ ಆಗಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಸಿಕ್ಕ 115 ರನ್​ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಮಾಡಿದ ಅತಿಥೇಯ ತಂಡ 2ನೇ ಇನ್ನಿಂಗ್ಸ್​ನಲ್ಲಿ ಕೇವಲ 155ಕ್ಕೆ ಆಲೌಟ್​ ಆಯಿತು. ಒಟ್ಟಾರೆ ಮೊದಲ ಇನ್ನಿಂಗ್ಸ್​ ಮುನ್ನಡೆ ಸೇರಿ ಆಂಗ್ಲರಿಗೆ 271 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು.

ಅಲೆಕ್ಸ್​ ಕ್ಯಾರಿ 49 ರನ್​ಗಳಿಸಿ ತಂಡದ ಗರಿಷ್ಠ ಮೊತ್ತದ ಬ್ಯಾಟರ್​ ಆದರು. ಇವರನ್ನು ಹೊರತುಪಡಿಸಿದರೆ, ಕ್ರಿಸ್​ ಗ್ರೀನ್ 23, ಸ್ಮಿತ್​ 27 ರನ್​ಗಳಿಸಿದರು. ಇಂಗ್ಲೆಂಡ್​ ಪರ ಮಾರ್ಕ್​ ವುಡ್​ 37 ರನ್​ ನೀಡಿ 6 ವಿಕೆಟ್ ಪಡೆದರು. ಸ್ಟುವರ್ಟ್​ ಬ್ರಾಡ್​ 51ಕ್ಕೆ 3 ವಿಕೆಟ್ ಪಡೆದು ಮಿಂಚಿದರು.

ಇಂಗ್ಲೆಂಡ್​ ತಂಡದಿಂದ ಉತ್ತಮ ಆರಂಭ:

271 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದುಕೊಂಡಿದೆ. ಆರಂಭಿಕರಾದ ರೋರಿ ಬರ್ನ್ಸ್​​ 26 ರನ್​ಗಳಿಸಿ ಔಟಾದರೆ, ಜಾಕ್​ ಕ್ರಾಲೆ ಅಜೇಯ 36 ಮತ್ತು ಡೇವಿಡ್ ಮಲನ್​ 10 ರನ್​ಗಳಿಸಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಇಂಗ್ಲೆಂಡ್​ಗೆ ಸರಣಿಯಲ್ಲಿ ಮೊದಲ ಗೆಲುವು ಪಡೆಯಲು ಇನ್ನೂ 190 ರನ್​ಗಳ ಅವಶ್ಯಕತೆಯಿದೆ.

ಇದನ್ನೂ ಓದಿ:ಮುಂದಿನ ನಾಯಕನಿಗೆ 'ತಲೆನೋವನ್ನು' ಬಿಟ್ಟುಹೋಗಿದ್ದಕ್ಕೆ ಕೊಹ್ಲಿಗೆ ಧನ್ಯವಾದ : ಅಶ್ವಿನ್ ಭಾವನಾತ್ಮಕ ಟ್ವೀಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.