ETV Bharat / sports

Ashes: ಆ್ಯಶಸ್- ಮೊದಲ ಟೆಸ್ಟ್​: ಆಸ್ಟ್ರೇಲಿಯಾ ಗೆಲುವಿಗೆ ಬೇಕು 281 ರನ್

author img

By

Published : Jun 19, 2023, 9:35 PM IST

ಇಂದು ಎರಡನೇ ಸೆಷನ್​ನಲ್ಲಿ 273 ರನ್‌ಗಳಿಗೆ ಸರ್ವಪತನ ಕಂಡ ಇಂಗ್ಲೆಂಡ್ ಆಸ್ಟ್ರೇಲಿಯಾಕ್ಕೆ 281 ರನ್​ ಗುರಿ ನೀಡಿದೆ. ​

Ashes 2023
Ashes 2023

ಎಡ್ಜ್‌ಬಾಸ್ಟನ್ (ಲಂಡನ್​): ಆಸ್ಟ್ರೇಲಿಯಾದ ಕರಾರುವಾಕ್ ಬೌಲಿಂಗ್​ ದಾಳಿಯ ಮುಂದೆ ಇಂಗ್ಲೆಂಡ್​ನ ಬ್ಯಾಟರ್​ಗಳಿಂದ ದೊಡ್ಡ ಇನ್ನಿಂಗ್ಸ್​ ಕಟ್ಟುವ ಗುರಿ ಈಡೇರಲಿಲ್ಲ. ಏಷ್ಯಾ ರಾಷ್ಟ್ರಗಳ ಪಿಚ್​ಗಳಲ್ಲಿ ಸ್ಪಿನ್​​ಗೆ ವಿಕೆಟ್​ ಒಪ್ಪಿಸುವಂತೆ ನಾಥನ್​ ಲಯಾನ್ ಅವರ ಬಿಗು ಬೌಲಿಂಗ್‌ಗೆ ಆಂಗ್ಲ ಬ್ಯಾಟರ್​ಗಳು ವಿಕೆಟ್‌ ಒಪ್ಪಿಸಿದರು. ಇದರಿಂದ 273 ರನ್​ಗಳಿಗೆ ಇಂಗ್ಲೆಂಡ್​ ಎರಡನೇ ಇನ್ನಿಂಗ್ಸ್​ನಲ್ಲಿ ಆಲೋಟ್​ ಆಯಿತು. 5 ಪಂದ್ಯಗಳ ಪ್ರತಿಷ್ಟಿತ ಆ್ಯಶಸ್​ ಟೂರ್ನಿಯ ಮೊದಲ ಟೆಸ್ಟ್​ ಗೆಲುವಿಗೆ ಆಸ್ಟ್ರೇಲಿಯಾಗೆ 281 ರನ್ ಗುರಿ ಬೇಕಿದೆ. ನಾಲ್ಕು ಸೆಷನ್​ಗಳು ಆಸ್ಟ್ರೇಲಿಯಾ ಜೊತೆಗಿದ್ದು, 120 ಓವರ್‌ಗಳಲ್ಲಿ ಈ ಗುರಿ ಸಾಧಿಸಬೇಕಿದೆ.

ಮೂರನೇ ದಿನದ ಕೊನೆಯ ಸೆಷನ್​ ಬಾಕಿ ಇರುವಾಗ ಆಲೌಟಾದ ಆಸ್ಟ್ರೇಲಿಯಾ, ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ ಗಳಿಸಿದ್ದ ಮೊತ್ತಕ್ಕಿಂತ 7 ರನ್ ಹಿನ್ನಡೆ ಅನುಭವಿಸಿತ್ತು. ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ಗೆ ನಿನ್ನೆಯೇ ಆರಂಭಿಕ ಆಘಾತ ಉಂಟಾಗಿತ್ತು. 19 ರನ್​ ಗಳಿಸಿ ಬೆನ್ ಡಕೆಟ್ ವಿಕೆಟ್​ ಕೊಟ್ಟಿದ್ದರು. 7 ರನ್​ಗೆ ಝಾಕ್ ಕ್ರಾಲಿ ಸಹ ಪೆವಿಲಿಯನ್​ಗೆ ಮರಳಿದ್ದರು. ಮೂರನೇ ದಿನದ ಕೊನೆಯ ಸೆಷನ್​ ವೇಳೆ ಎರಡು ಬಾರಿ ಮಳೆ ಬಂದು ಪಂದ್ಯ ಸ್ಥಗಿತವಾದ ಕಾರಣ ಕೇವಲ 10 ಓವರ್​​ಗೆ ದಿನ ಅಂತ್ಯ ಮಾಡಲಾಯಿತು. ಈ ವೇಳೆಗೆ ಇಂಗ್ಲೆಂಡ್​ ಎರಡು ವಿಕೆಟ್​ ನಷ್ಟಕ್ಕೆ 28 ರನ್​ ಗಳಿಸಿತ್ತು.

  • ❌ ALL OUT ❌

    We finish our second innings on 2️⃣7️⃣3️⃣, setting Australia need 2️⃣8️⃣1️⃣ to win.

    Enter stage right, James Anderson & Stuart Broad 👇#EnglandCricket | #Ashes

    — England Cricket (@englandcricket) June 19, 2023 " class="align-text-top noRightClick twitterSection" data=" ">

ನಾಲ್ಕನೇ ದಿನವಾದ ಇಂದು ಮೋಡದ ನಡುವೆ ಪಂದ್ಯ 15 ನಿಮಿಷ ತಡವಾಗಿಯೇ ಆರಂಭವಾಯಿತು. ಆದರೆ ನಂತರ ಮಳೆಯ ಭೀತಿ ದೂರಾಯಿತು. ಇಂಗ್ಲೆಂಡ್​ಗೆ ಹೊಡಿಬಡಿ ದಾಂಡಿಗ ಬ್ರೆಂಡಮ್​ ಮೆಕಲಮ್​ ಕೋಚ್​ ಮತ್ತು ಬೆನ್ ಸ್ಟೋಕ್ಸ್ ನಾಯಕನಾದ ನಂತರ ಏಕದಿನ ಮಾದರಿಯಲ್ಲಿ ತಂಡ ರನ್​ ಕಲೆಹಾಕುತ್ತಿದೆ. ಮೊದಲ ಇನ್ನಿಂಗ್ಸ್​ನಲ್ಲಿ ರೂಟ್​​ ಸ್ವಲ್ಪ ನಿಧಾನಗತಿಯಲ್ಲಿ ಬ್ಯಾಟ್​ ಬೀಸಿದ್ದು ಬಿಟ್ಟರೆ ಮಿಕ್ಕವರೆಲ್ಲ ಹೊಡಿಬಡಿ ಆಟವನ್ನೇ ಪ್ರದರ್ಶಿಸಿದ್ದರು.

ಎರಡನೇ ಇನ್ನಿಂಗ್ಸ್​ ಆರಂಭದಲ್ಲೇ ಎರಡು ವಿಕೆಟ್​ನ ಪತನವಾಗಿದ್ದರೂ ವಿಕೆಟ್​ ನಿಲ್ಲಿಸುವ ಬಗ್ಗೆ ಯಾವುದೇ ಬ್ಯಾಟರ್​ಗಳು ಚಿಂತಿಸದೇ, ರನ್​ ಗರಿ ಹೆಚ್ಚಿಸುವತ್ತ ಗಮನ ಹರಿಸಿದರು. ಇದರಿಂದ ರನ್​ ವೇಗವಾಗಿ ಬರುತ್ತಿದ್ದಂತೆ ಅತ್ತ ವಿಕೆಟ್​ ನಷ್ಟವನ್ನು ತಂಡ ಅನುಭವಿಸಿತು. ಓಲಿ ಪೋಪ್ ಇಂದಿನ ಮೊದಲ ಸೆಷನ್​ ಆರಂಭವಾಗುತ್ತಿದ್ದಂತೆ ವಿಕೆಟ್​ ಕೊಟ್ಟರು. ಇವರ ನಂತರ ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ ಬಿರುಸಿನ ಇನ್ನಿಂಗ್ಸ್​ ಕಟ್ಟಿದರು.

ಜೋ ರೂಟ್ 55 ಎಸೆತ​ ಎದುರಿಸಿ 1 ಸಿಕ್ಸ್​ ಮತ್ತು 5 ಬೌಂಡರಿಯಿಂದ 46 ರನ್​ ಕಲೆಹಾಕಿದರು. ಹ್ಯಾರಿ ಬ್ರೂಕ್ 52 ಬಾಲ್​ನಲ್ಲಿ 46 ರನ್​ ಮತ್ತು ನಾಯಕ ಬೆನ್ ಸ್ಟೋಕ್ಸ್ 66 ಎಸೆತದಲ್ಲಿ 43 ರನ್​ ಚಚ್ಚಿದರು. ಜಾನಿ ಬೈರ್‌ಸ್ಟೋವ್ 20, ಮೊಯಿನ್ ಅಲಿ 19, ಆಲಿ ರಾಬಿನ್ಸನ್ 27, ಜೇಮ್ಸ್ ಆಂಡರ್ಸನ್ 12 ರನ್​ಗಳಿಸಿ ಔಟಾದರು.

ಆಸ್ಟ್ರೇಲಿಯಾ ನಾಯಕ ಪ್ಯಾಟ್​ ಕಮಿನ್ಸ್​ ಮತ್ತು ಲಯಾನ್​ ತಲಾ 4 ವಿಕೆಟ್​ ಪಡೆದರು. ಜೋಶ್ ಹ್ಯಾಜಲ್ವುಡ್ ಮತ್ತು ಸ್ಕಾಟ್ ಬೋಲ್ಯಾಂಡ್ ಒಂದೊಂದು ವಿಕೆಟ್​ ಪಡೆದರು.

ಇದನ್ನೂ ಓದಿ: Ashes 2023: ಕೈಗೆ ಡ್ರೈಯಿಂಗ್ ಸ್ಪ್ರೇ ಬಳಸಿದ ಮೊಯಿನ್​ ಅಲಿ.. ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಿದ ಐಸಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.