ETV Bharat / sports

"ಹಾರ್ದಿಕ್​ ಸೇರಿದಂತೆ ಮೂವರು ಪ್ರಮುಖ ಬೌಲರ್​ಗಳು ತಂಡದಲ್ಲಿ ಆಡುವುದು ಸೂಕ್ತ": ಅಂಶುಮಾನ್ ಗಾಯಕ್ವಾಡ್

author img

By ETV Bharat Karnataka Team

Published : Sep 26, 2023, 11:06 PM IST

ಈಟಿವಿ ಭಾರತದ ಸಂಜಿಬ್ ಗುಹಾ ಅವರು ಭಾರತದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರೊಂದಿಗೆ ನಡೆಸಿದ ಸಂದರ್ಶನದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ..

Anshuman Gaekwad to ETV Bharat
Anshuman Gaekwad to ETV Bharat

ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿಶ್ವಕಪ್​ಗೂ ಮುನ್ನ ಭಾರತ ಆಡುವ ಹನ್ನೊಂದರ ಬಳದ ವಿಚಾರದಲ್ಲಿ ಎಲ್ಲಾ ಬಾಕ್ಸ್​ಗಳನ್ನು ಭರ್ತಿ ಮಾಡಿಕೊಂಡಿದೆ. ಏಷ್ಯಾಕಪ್​ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್​ ಇಂಡಿಯಾ ಅದ್ಭುತ ಪ್ರದರ್ಶನ ನೀಡುವುದರ ಜೊತೆಗೆ, ಭಾರತ ತಂಡ ವೀಕ್​ ಅಂಕಗಳ ಕಡೆ ಕೆಲಸ ಮಾಡಿದ್ದು ಎಲ್ಲಾ ವಿಭಾಗದಲ್ಲೂ ಬಲಿಷ್ಠ ತಂಡವಾಗಿ ಕಾಣಿಸಿಕೊಳ್ಳುತ್ತಿದೆ.

ವಿಶ್ವಕಪ್​ಗೂ ಎರಡು ತಿಂಗಳ ಮೊದಲು ತಂಡದ ಪ್ರಮುಖ ಆಟಗಾರರು ಗಾಯಕ್ಕೆ ತುತ್ತಾಗಿದ್ದರಿಂದ ತಂಡದ ಆಯ್ಕೆಯಲ್ಲಿ ಗೊಂದಲಗಳು ಹೆಚ್ಚಿದ್ದವು. ಏಷ್ಯಾಕಪ್​ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತ ತಂಡ ಎಲ್ಲಾ ವಿಭಾಗಗಳಲ್ಲೂ ಉತ್ತಮ ಕಮ್​ಬ್ಯಾಕ್​ ಮಾಡಿದೆ. ಮಧ್ಯಮ ಕ್ರಮಾಂಕದ ಜೊತೆಗೆ ಬೌಲಿಂಗ್​ನಲ್ಲೂ ತಂಡದ ಆಟಗಾರರು ಮಿಂಚುತ್ತಿದ್ದಾರೆ. ತಂಡ ಪ್ರದರ್ಶನ ಬಗ್ಗೆ ಈಟಿವಿ ಭಾರತದ ಜೊತೆಗೆ ಭಾರತದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಮಾತನಾಡಿದ್ದಾರೆ.

"ಭಾರತ ಈ ಮೊದಲು ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಬೌಲಿಂಗ್​ನಲ್ಲಿ ಹೊಂದಿತ್ತು ಎಂಬುದು ನನಗೆ ನನಪಿಲ್ಲ. ಭಾರತ ಸಧ್ಯ ನಾಲ್ಕು ಸ್ಟಾರ್​ ವೇಗದ ಬೌಲರ್​ಗಳನ್ನು ಹೊಂದಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ವೇಗದ ವಿಭಾಗದಲ್ಲಿ ಕೈಬಿಡಲು ಸಾಧ್ಯವಿಲ್ಲದ ಆಟಗಾರರಾಗಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನಾಲ್ಕನೇ ವೇಗಿ ಆಗಿ ಕ್ಯಾಪ್ ತೊಟ್ಟಿದ್ದಾರೆ. ಹೀಗಿರುವಾಗ ತಂಡದಲ್ಲಿ ಮೂರು ವೇಗಿಗಳಲ್ಲಿ ಒಬ್ಬರನ್ನು ಕೈಬಿಡುವುದು ಕಷ್ಟವಾಗುತ್ತದೆ" ಎಂದು ಅಂಶುಮಾನ್ ಗಾಯಕ್ವಾಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದಂತಹ ಸ್ಪಿನ್​ ಪಿಚ್​ನಲ್ಲೂ ಮೂವರು ಪ್ರಮುಖ ವೇಗಿಗಳಿಗೆ ಅಂಶುಮಾನ್ ಗಾಯಕ್ವಾಡ್ ಒತ್ತುಕೊಡುವುದಾಗಿ ಹೇಳಿದ್ದಾರೆ. ಹಾರ್ದಿಕ್​ ಪಾಂಡ್ಯರನ್ನು ಒಳಗೊಂಡಂತೆ ತಂಡದಲ್ಲಿ ಮೂವರು ವೇಗಿಗಳು ಕಾರ್ಯ ನಿರ್ವಹಿಸಬೇಕು ಎಂಬುದು ಅವರ ವಾದವಾಗಿದೆ. ತಂಡದಲ್ಲಿ ಬ್ಯಾಟಿಂಗ್​ ಬಲವನ್ನು ಹೆಚ್ಚಿಸುವ ಉದ್ದೇಶದಿಂದ ಶಮಿಗೆ ಕೋಕ್​ ಕೊಟ್ಟು ಶಾರ್ದೂಲ್​ ಠಾಕೂರ್​ ಅವರನ್ನು ಆಡಿಸಲಾಯಿತು. ಆದರೆ ವಿಶ್ವಕಪ್​ನಲ್ಲಿ ಮೂವರು ವೇಗಿಗಳನ್ನು ಆಡಿಸುವುದು ಸೂಕ್ತ ಎಂದು ಅವರು ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯವನ್ನು ಹೊರತುಪಡಿಸಿ ಮೂವರು ವೇಗದ ಬೌಲರ್‌ಗಳನ್ನು ತಂಡದಲ್ಲಿ ಆಡಿಸುವ ಬಗ್ಗೆ ಯಾವುದೇ ಅನುಮಾನ ಇಲ್ಲ. ನನ್ನ ಮನಸ್ಸಿನಲ್ಲಿ ಯಾವುದೇ ಪ್ರಶ್ನೆಯಿಲ್ಲ.. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಆಡಿಸಬೇಕು" ಎಂದರು.

ತಂಡಕ್ಕೆ ಅಶ್ವಿನ್​ ಆಗಮನದ ಬಗ್ಗೆ ಅಭಿಪ್ರಾಯ ಪಟ್ಟ ಅವರು ಮೈದಾನದಕ್ಕೆ ಹೊಂದಿಕೊಂಡಂತೆ ಆಟಗಾರರನ್ನು ಆಡಿಸಬೇಕು ಎನ್ನುತ್ತಾರೆ. ಅಕ್ಷರ್​ ಅನುಪಸ್ಥಿತಿಯಲ್ಲಿ ವಿಶ್ವಕಪ್​ ತಂಡಕ್ಕೆ ಅಶ್ವಿನ್​ ಬಹುತೇಕ ಸೇರಿಕೊಳ್ಳಲಿದ್ದಾರೆ. "ಯಾರು ಆಡಬೇಕು ಎಂದು ಯಾರೂ ಮೊದಲೇ ಹೇಳಲು ಸಾಧ್ಯವಿಲ್ಲ. ಇದು ಎದುರಾಳಿ ಅಥವಾ ಪಿಚ್ ಪರಿಸ್ಥಿತಿಗಳಲ್ಲಿ ಎಷ್ಟು ಎಡಗೈ ಬ್ಯಾಟರ್‌ಗಳಿರುವಂತಹ ಕೆಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ತಂಡದ ಸಂಯೋಜನೆಯ ಬಗ್ಗೆ ತಂಡದ ನಿರ್ವಹಣೆಯು ಆಗ ಮತ್ತು ಅಲ್ಲಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ" ಎನ್ನುತ್ತಾರೆ ಗಾಯಕ್ವಾಡ್.

ಅಂತಿಮ ಇಲೆವೆನ್‌ನಲ್ಲಿ ಆಯ್ಕೆಯ ಪರಿಸ್ಥಿತಿ ಇಷ್ಟು ಕಠಿಣ ಆಗಿರುವುದರ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ ,"ತರಬೇತುದಾರನಾಗಿ, ನಾನು ಅಂತಹ ಸವಾಲನ್ನು ಹೊಂದಲು ಬಯಸುತ್ತೇನೆ. ನಾನು ತರಬೇತುದಾರನಾಗಿ ಈ ರೀತಿಯ ಸಮಸ್ಯೆಯನ್ನು ಎದುರಿಸಿದ್ದರೆ ನಾನು ತುಂಬಾ ಸಂತೋಷವಾಗಿರುತ್ತಿದ್ದೆ" ಎಂದಿದ್ದಾರೆ. ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮೊದಲ ನಾಲ್ಕು ತಂಡಗಳು ಎಂದು ಗಾಯಕ್ವಾಡ್​ ಹೇಳುತ್ತಾರೆ .

"ರಾಹುಲ್ ಮತ್ತೆ ಫಾರ್ಮ್‌ಗೆ ಮರಳಿರುವುದು ಉತ್ತಮ ಸಂಕೇತವಾಗಿದೆ. ಭಾರತದ 3-4-5 ಸ್ಥಾನಗಳು ಸ್ವಲ್ಪ ದುರ್ಬಲವಾಗಿದ್ದವು, ಆದರೆ ಕೆಎಲ್ ರಾಹುಲ್ ಅವರ ಸಾಮರ್ಥ್ಯವು ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚು ಸಹಾಯ ಮಾಡುತ್ತದೆ. ಅಲ್ಲದೆ, ಅವರು ಕೀಪಿಂಗ್ ಮಾಡಲು ಸಾಧ್ಯವಾದರೆ ತಂಡ ಅಂತಿಮ ಸಂಯೋಜನೆಯಲ್ಲಿ ಆಯ್ಕೆಗಳು ಹೆಚ್ಚಾಗುತ್ತದೆ" ಎಂದಿದ್ದಾರೆ.

ಎಪ್ಪತ್ತೊಂದು ವರ್ಷ ವಯಸ್ಸಿನ ಗಾಯಕ್ವಾಡ್ 1974-1984ರ ಅವಧಿಯಲ್ಲಿ ಭಾರತ ಪರ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದು 1,985 ರನ್ ಗಳಿಸಿದ್ದಾರೆ. ಅಲ್ಲದೇ 15 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ.

ಇದನ್ನೂ ಓದಿ: Kapil Dev: "ನಟನೆಯ ವಿಶ್ವಕಪ್​ನ್ನೂ ನೀವೇ ಗೆಲ್ಲುತ್ತೀರಿ".. ಕಪಿಲ್​ ದೇವ್​ಗೆ ಗಂಭೀರ್​ ಹೀಗೆ ಹೇಳಿದ್ದೇಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.