ETV Bharat / sports

ಅಫ್ಘಾನಿಸ್ತಾನ ಕ್ರಿಕೆಟ್​ ತಂಡದ ಸಲಹೆಗಾರನಾಗಿ ಇಂಗ್ಲೆಂಡ್ ಮಾಜಿ ಕೋಚ್​ ಆ್ಯಂಡಿ ಫ್ಲವರ್ ನೇಮಕ

author img

By

Published : Oct 9, 2021, 9:53 AM IST

ಅಫ್ಘಾನಿಸ್ತಾನ ಕ್ರಿಕೆಟ್​ ತಂಡದ ಸಲಹೆಗಾರನಾಗಿ ನೇಮಕವಾಗಿರುವ ಫ್ಲವರ್​ ಇದಕ್ಕೂ ಮುನ್ನ 2009ರಿಂದ 2014ರವರೆಗೆ ಇಂಗ್ಲೆಂಡ್​ ಪುರುಷರ ತಂಡಕ್ಕೆ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ 2010ರಲ್ಲಿ ಟಿ20 ವಿಶ್ವಕಪ್ ಕೂಡ ಎತ್ತಿ ಹಿಡಿದಿತ್ತು.

Andy Flower appointed Afghanistan's consultant
ಅಫ್ಘಾನಿಸ್ತಾನ ಕ್ರಿಕೆಟ್​ ತಂಡದ ಸಲಹೆಗಾರನಾಗಿಆ್ಯಂಡಿ ಫ್ಲವರ್ ನೇಮಕ

ಕಾಬೂಲ್(ಅಫ್ಘಾನಿಸ್ತಾನ): ಜಿಂಬಾಬ್ವೆ ತಂಡದ ಮಾಜಿ ನಾಯಕ ಆ್ಯಂಡಿ ಫ್ಲವರ್​ ಮುಂಬರುವ ಟಿ20 ವಿಶ್ವಕಪ್​ಗಾಗಿ ಅಫ್ಘಾನಿಸ್ತಾನ ತಂಡದ ಸಲಹೆಗಾರನಾಗಿ ನೇಮಕಗೊಂಡಿದ್ದಾರೆ.

ಆ್ಯಂಡಿ ಫ್ಲವರ್​ ಎಸಿಬಿ ಸೇರಿರುವುದಕ್ಕೆ ನಮಗೆ ಖುಷಿಯಾಗುತ್ತಿದೆ. ಅವರು ವಿವಿಧ ಫ್ರಾಂಚೈಸಿ ಲೀಗ್​ಗಳಲಲ್ಲಿ ನಮ್ಮ ಕೆಲವು ಆಟಗಾರರೊಂದಿಗೆ ಕೆಲಸ ಮಾಡಿದ್ದಾರೆ. ಮುಂಬರುವ ಟಿ20 ವಿಶ್ವಕಪ್​ನಲ್ಲಿಅಫ್ಘಾನಿಸ್ತಾನ ತಂಡ ಉತ್ತಮ ಪ್ರದರ್ಶನ ತೋರಲು ಅವರ ಅಪಾರ ಅನುಭವ ಅನುಕೂಲವಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಎಸಿಬಿ ಅಧ್ಯಕ್ಷ ಅಜೀಜುಲ್ಲಾ ಫಜೀಲ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಫ್ಲವರ್​ ಇದಕ್ಕೂ ಮುನ್ನ 2009ರಿಂದ 2014ರವರೆಗೆ ಇಂಗ್ಲೆಂಡ್​ ಪುರುಷರ ತಂಡಕ್ಕೆ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ 2010ರಲ್ಲಿ ಟಿ20 ವಿಶ್ವಕಪ್ ಕೂಡ ಎತ್ತಿ ಹಿಡಿದಿತ್ತು.

ಜಿಂಬಾಬ್ವೆ ತಂಡದ ಪರ ಫ್ಲವರ್ 63 ಟೆಸ್ಟ್​ 213 ಏಕದಿನ ಪಂದ್ಯಗಳನ್ನಾಡಿದ್ದಾರೆ. 11 11 ಸಾವಿರಕ್ಕೂ ಹೆಚ್ಚು ರನ್ ​ಗಳಿಸಿದ್ದಾರೆ.

ಇಂಗ್ಲೆಂಡ್ ಹೊರತುಪಡಿಸಿ ಫ್ಲವರ್​ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್), ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್), ಪಾಕಿಸ್ತಾನ ಸೂಪರ್ ಲೀಗ್(ಪಿಎಸ್​ಎಲ್) ಮತ್ತು ಚೊಚ್ಚಲ ಹಂಡ್ರೆಡ್ ಲೀಗ್​ನಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.​

ಅಕ್ಟೋಬರ್​ 17ರಿಂದ ಟಿ20 ವಿಶ್ವಕಪ್​ ನಡೆಯಲಿದ್ದು, ಅಫ್ಘಾನಿಸ್ತಾನ ಅಕ್ಟೋಬರ್​ 25ರಂದು ಕ್ವಾಲಿಫೈಯರ್ ವಿಜೇತ ತಂಡವನ್ನು ಎದುರಿಸಲಿದೆ. ಅಫ್ಫನ್​, ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್​ 6 ತಂಡಗಳಿರುವ ಗುಂಪಿನಲ್ಲಿ ಅವಕಾಶ ಪಡೆದಿದೆ.

ಇದನ್ನೂ ಓದಿ: T-20 ವಿಶ್ವಕಪ್​: ಪಾಕ್​​ ತಂಡಕ್ಕೆ ಸರ್ಫರಾಜ್​, ಹೈದರ್​ ಅಲಿ ಸೇರ್ಪಡೆ- ಸಕ್ಲೇನ್​ ಹಂಗಾಮಿ ಕೋಚ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.