ETV Bharat / sports

ಲೆಜೆಂಡ್ಸ್​ ಕ್ರಿಕೆಟ್​ ಲೀಗ್​ಗೆ ಅಮಿತಾಬ್ ಬಚ್ಚನ್ ರಾಯಭಾರಿಯಾಗಿ ನೇಮಕ

author img

By

Published : Dec 9, 2021, 5:27 PM IST

ವಿಶ್ವದ ಲೆಜೆಂಡರಿ ಕ್ರಿಕೆಟಿಗರೊಂದಿಗೆ ಲೆಜೆಂಡ್ಸ್​ ಕ್ರಿಕೆಟ್​​ ಭಾಗವಾಗಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಹಳೆಯ ಪ್ರತಿಸ್ಪರ್ಧಿಗಳ ನಡೆಯುವ ಕಾಳಗವನ್ನು ಲೈವ್​​ನಲ್ಲಿ ಕಣ್ತುಂಬಿಕೊಳ್ಳುವುದಕ್ಕೆ ಕ್ರಿಕೆಟ್​ ಅಭಿಮಾನಿಗಳಿಗೆ ಒಳ್ಳೆಯ ಅವಕಾಶ ಸಿಕ್ಕಿದೆ ಎಂದು ಅಮಿತಾಬ್ ಬಚ್ಚನ್​ ತಿಳಿಸಿದ್ದಾರೆ.

Amitabh Bachchan signs in as ambassador of Legends League Cricket
ಅಮಿತಾಬ್​ ಬಚ್ಚನ್​ ಲೆಜೆಂಡ್ ಕ್ರಿಕೆಟ್ ಲೀಗ್ ರಾಯಭಾರಿ

ನವದೆಹಲಿ: ನಿವೃತ್ತಿಯಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟಿಗರು ಭಾಗವಹಿಸುವ ಲೆಜೆಂಡ್ಸ್​ ಕ್ರಿಕೆಟ್​​ ಲೀಗ್​​ಗೆ ಬಾಲಿವುಡ್ ಮೆಗಾಸ್ಟಾರ್​ ಅಮಿತಾಬ್​ ಬಚ್ಚನ್​ ಲೀಗ್​ ಅಂಬಾಸಿಡರ್​ ಆಗಿ ನೇಮಕವಾಗಿದ್ದಾರೆ.

ವಿಶ್ವದ ಲೆಜೆಂಡರಿ ಕ್ರಿಕೆಟಿಗರೊಂದಿಗೆ ಲೆಜೆಂಡ್ಸ್​ ಕ್ರಿಕೆಟ್​​ ಭಾಗವಾಗಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಹಳೆಯ ಪ್ರತಿಸ್ಪರ್ಧಿಗಳ ನಡೆಯುವ ಕಾಳಗವನ್ನು ಲೈವ್​​ನಲ್ಲಿ ಕಣ್ತುಂಬಿಕೊಳ್ಳುವುದಕ್ಕೆ ಕ್ರಿಕೆಟ್​ ಅಭಿಮಾನಿಗಳಿಗೆ ಒಳ್ಳೆಯ ಅವಕಾಶ ಸಿಕ್ಕಿದೆ ಎಂದು ಅಮಿತಾಬ್ ಬಚ್ಚನ್​ ತಿಳಿಸಿದ್ದಾರೆ.

"ನನ್ನ ಬಾಲ್ಯದ ದಿನಗಳಲ್ಲಿ ಕ್ರಿಕೆಟ್ ಆಡಲು ಅವಕಾಶ ಹೊಂದಿದ್ದೆ. ನಂತರ ಕ್ರಿಕಟ್​ನ ಕೆಲವು ಶ್ರೇಷ್ಠರೊಂದಿಗೆ ಕಮೆಂಟೇಟರ್​ ಆಗಿದ್ದೆ. ಆದರೆ, ಈಗ ಅದ್ಭುತ ಲೀಗ್​ನ ರಾಯಭಾರಿಯಾಗುತ್ತಿರುವುದು ನಂಬಲಾಸಾಧ್ಯವಾದ ಭಾವನೆಯಾಗಿದೆ. ಕ್ರಿಕೆಟ್​ನಲ್ಲಿ ಹಲವಾರು ಸಂತೋಷ ಮತ್ತು ಹೆಮ್ಮೆಯ ಕ್ಷಣಗಳನ್ನು ನೀಡಿ ಈ ದಂತಕತೆಗಳು ಮತ್ತೆ ಮೈದಾನಕ್ಕೆ ಮರಳುವುದು ಉಲ್ಲಾಸದಾಯಕವಾಗಿರುತ್ತದೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಖಂಡಿತವಾಗಿಯೂ ಲೆಜೆಂಡರಿ ಕ್ರಿಕೆಟಿಗರಿಗೆ ಮತ್ತು ನನ್ನಂತಹ ಅವರ ಕಟ್ಟಾ ಅಭಿಮಾನಿಗಳಿಗೆ ಅವರ ಆಟದ ಸೊಬಗನ್ನು ಸವಿಯಲು ಮತ್ತೊಮ್ಮೆ ಅತ್ಯುತ್ತಮ ಅವಕಾಶವನ್ನು ಪ್ರಸ್ತುತಪಡಿಸುತ್ತದೆ " ಎಂದು ಅಮಿತಾಬ್ ಬಚ್ಚನ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಲೆಜೆಂಡ್ಸ್​ ಕ್ರಿಕೆಟ್ ಲೀಗ್ 2022ರ ಜನವರಿಯಲ್ಲಿ ಒಮಾನ್​ನ ಆಲ್​ ಅಮಿರಾತ್​ ಸ್ಟೇಡಿಯಂನಲ್ಲಿ ಭಾರತ, ಏಷ್ಯಾ ಮತ್ತು ವಿಶ್ವ ಇಲೆವೆನ್​ ತಂಡಗಳು ಭಾಗವಹಿಸಲಿವೆ.

ಇದನ್ನೂ ಓದಿ:ಮಗಳು ಹುಟ್ಟಿದ ದಿನದ ಕೊಹ್ಲಿ ಸಂದೇಶ.. 2021ರಲ್ಲಿ ಅತಿ ಹೆಚ್ಚು ಲೈಕ್​ ಪಡೆದ ಟ್ವೀಟ್​ ಎಂಬ ಗರಿಮೆ​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.