ETV Bharat / sports

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಈ ಐವರ ಮೇಲೆ ಎಲ್ಲರ ದೃಷ್ಟಿ..

author img

By

Published : Feb 4, 2023, 8:42 PM IST

ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಉಭಯ ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ - ಈ ನಡುವೆ ಹೆಚ್ಚು ಚರ್ಚೆ ಗ್ರಾಸವಾಗುತ್ತಿದ್ದಾರೆ ಈ ಐವರು ಆಟಗಾರರು - ಇವರ ಆಟ ಪಂದ್ಯದ ಡಿಸೈಡರ್​ ಕೂಡ ಆಗಲಿದೆ.

All eyes on Kohli, Jadeja, Shubhman, Steve Smith & Nathan Lyon
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಈ ಐವರ ಮೇಲೆ ಎಲ್ಲರ ದೃಷ್ಠಿ

ನವದೆಹಲಿ: ತವರಿನಲ್ಲಿ ಯಶಸ್ವಿ ಸರಣಿಗಳನ್ನು ಆಡುತ್ತಿರುವ ಭಾರತಕ್ಕೆ ಕಾಂಗರುಗಳೊಂದಿಗೆ ತೀವ್ರ ಪೈಪೋಟಿ ಬಾರ್ಡರ್ ಗವಾಸ್ಕರ್ ಟ್ರೋಫಿ ಇದ್ದು, ಐಸಿಸಿ ರ್‍ಯಾಕಿಂಗ್​ ಒಂದು ಮತ್ತು ಎರಡನೇ ಸ್ಥಾನದಲ್ಲಿರುವ ತಂಡಗಳು ಸೆಣಸಾಡುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯ ಪರಸ್ಪರ ಮುಖಾಮುಖಿ ಆದಾಗ ಹಲವಾರು ದಾಖಲೆಗಳು ನಿರ್ಮಾಣ ಆಗಿದೆ. ಈ ಬಾರಿಯ ನಾಲ್ಕು ಪಂದ್ಯದಲ್ಲಿ ಬಹುತೇಕ ಆಟಗಾರರ ಮೇಲೆ ಹೆಚ್ಚಿನ ಭರವಸೆ ಇದ್ದು, ಟೆಸ್ಟ್​ ಚಾಂಪಿಯನ್​ ಶಿಪ್​ಗೆ ಈ ಸರಣಿ ಎರಡೂ ದೇಶಗಳಿಗೆ ಪ್ರಮುಖವಾಗಿರಲಿದೆ.

ಫೆಬ್ರವರಿ 9 ರಿಂದ ನಾಲ್ಕು ಪಂದ್ಯಗಳ ಬಾರ್ಡರ್ ಗವಾಸ್ಕರ್ ಸರಣಿ ಆರಂಭವಾಗಲಿದೆ. 2017, 2018-19 ಮತ್ತು 2020-21ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಬಾರಿಯೂ ಸರಣಿ ಗೆದ್ದಿರುವ ಭಾರತ ಪ್ರಸ್ತುತ ಬಾರ್ಡರ್ - ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲಿರಿಸಿಕೊಂಡಿದೆ. ಭಾರತ ಸರಣಿಯನ್ನು 4-0 ಯಿಂದ ವಶಕ್ಕೆ ತೆಗೆದುಕೊಂಡರೆ 68.06 ಅಂಕ ಪಡೆದು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್(WTC) ನಿರ್ಣಾಯಕ ಅಗ್ರ-ಎರಡು ಸ್ಥಾನಕ್ಕೆ ಸ್ಪರ್ಧೆ ಮಾಡಲಿದೆ.

ಎರಡೂ ತಂಡಗಳು ಬಲಿಷ್ಠ ಮತ್ತು ಅನುಭವಿ ಆಟಗಾರರನ್ನು ಹೊಂದಿದ್ದು, ಯಾರ ಮೇಲೆ ನಿರೀಕ್ಷೆಗಳಿದೆ ಎಂಬುದನ್ನು ನೋಡೋಣ:

ವಿರಾಟ್ ಕೊಹ್ಲಿ: ರನ್​ ಮಷಿನ್​ ಎಂದೇ ಕರೆಯಲಾಗುತ್ತಿದ್ದ ವಿರಾಟ್​ ಕೊಹ್ಲಿ ಮೂರು ವರ್ಷಗಳ ಹಿಂದೆ ತಮ್ಮ ಫಾರ್ಮ್​ನನ್ನು ಕಳೆದುಕೊಂಡಿದ್ದರು. ಟಿ20 ವಿಶ್ವಕಪ್​ನ ನಂತರ ಲಯಕ್ಕೆ ಮರಳಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಶತಕಗಳಿಂದ ರೆಡ್-ಹಾಟ್ ಫಾರ್ಮ್‌ನಲ್ಲಿದ್ದಾರೆ. ತವರಿನಲ್ಲಿ ನಡೆದ ಮೂರು ಸರಣಿಗಳಲ್ಲಿ ಉತ್ತಮ ರನ್​ ಕಲೆ ಹಾಕಿರುವ ವಿರಾಟ್​ ಸಧ್ಯ ಗೋಲ್ಡನ್​ ಫಾರ್ಮ್​ನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಅವರು 20 ಪಂದ್ಯಗಳಲ್ಲಿ ಏಳು ಶತಕಗಳು ಮತ್ತು ಐದು ಅರ್ಧ ಶತಕಗಳನ್ನು ಒಳಗೊಂಡಂತೆ 48.05 ಸರಾಸರಿಯಲ್ಲಿ 1,682 ರನ್ ಗಳಿಸಿದ್ದಾರೆ.

ರವೀಂದ್ರ ಜಡೇಜಾ: ಮೊಣಕಾಲಿನ ಗಾಯದಿಂದಾಗಿ ಆಗಸ್ಟ್ 2022 ರಿಂದ ಹೊರಗುಳಿದ ನಂತರ ರವೀಂದ್ರ ಜಡೇಜಾ ಅವರು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ತಂಡಕ್ಕೆ ಮತ್ತೆ ಮರಳುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆಯನ್ನು ಒದಗಿಸಲು ಅವರ ಬೌಲಿಂಗ್ ಜೊತೆಗೆ ಅವರ ಬ್ಯಾಟಿಂಗ್ ಕೂಡ ಪ್ರಮುಖವಾಗಿರುತ್ತದೆ. ಭಾರತದ ಪರವಾಗಿ ಉತ್ತಮ ಆಲ್​ರೌಡರ್ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

ಆಸ್ಟ್ರೇಲಿಯದ ವಿರುದ್ಧ ನೇರವಾಗಿ ಕಣಕ್ಕಿಳಿಯುವ ಮೊದಲು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸೌರಾಷ್ಟ್ರ ತಂಡದಲ್ಲಿ ಇತ್ತೀಚೆಗೆ ನಡೆದ ಪಂದ್ಯದಲ್ಲಿ ಆಡಿದರು. ಸೌರಾಷ್ಟ್ರ ಪರ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ 53 ರನ್​ಗೆ ಏಳು ವಿಕೆಟ್​ ಪಡೆದು ಮಿಂಚಿದರು. ಆಸ್ಟ್ರೇಲಿಯಾ ವಿರುದ್ಧ ಜಡೇಜಾ ಅವರು 12 ಪಂದ್ಯಗಳಲ್ಲಿ 18.85 ಸರಾಸರಿಯಲ್ಲಿ 63 ವಿಕೆಟ್‌ಗಳನ್ನು ಕಬಳಿಸಿದ್ದಾರೆ, ಇದರಲ್ಲಿ ಮೂರು ಬಾರಿ ಐದು ವಿಕೆಟ್‌ ಪಡೆದಿದ್ದಾರೆ. ಜಡ್ಡು 2017 ರ ಬಾರ್ಡರ್ ಗವಾಸ್ಕರ್ ಟ್ರೋಫಿಯ ಪ್ರಮುಖ ವಿಕೆಟ್-ಟೇಕರ್ ಆಗಿದ್ದರು ಮತ್ತು ನಾಲ್ಕು ಪಂದ್ಯಗಳಲ್ಲಿ 25 ವಿಕೆಟ್ ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದರು. ಜಡೇಜಾ ಅವರ ಈ ಆಟಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು.

ಶುಭಮನ್ ಗಿಲ್: 23 ವರ್ಷದ ಚಿಗುರು ಮೀಸೆಯ ಗೋಲ್ಡನ್​ ಫಾರ್ಮ್​ನಲ್ಲಿರುವ ಗಿಲ್​ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಸೀಮಿತ ಓವರ್​ನ ಸರಣಿಯಲ್ಲಿ ಆರಂಭಿಕರಾಗಿ ಅದ್ಭುತ ಯಶಸ್ಸು ಈ ವರ್ಷ ಗಳಸಿರುವ ಅವರಿಗೆ ಈ ಟೆಸ್ಟ್​ ಸರಣಿ ಪರೀಕ್ಷೆ ಆಗಿರಲಿದೆ. ಕಳೆದ ವರ್ಷ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ, ಗಿಲ್​ ಮೂರು ಪಂದ್ಯಗಳಲ್ಲಿ 51.80 ಸರಾಸರಿಯಲ್ಲಿ 259 ರನ್ ಗಳಿಸಿದ್ದರು. ಗಬ್ಬಾದಲ್ಲಿ ಗರಿಷ್ಠ 91 ರನ್​ ಮಾಡಿದ್ದರು. ಯುವ ಕ್ರಿಕೆಟಿಗ ತವರು ನೆಲದಲ್ಲಿ ಇನ್ನಷ್ಟು ಘರ್ಜಿಸುವ ಸಾಧ್ಯತೆ ಹೆಚ್ಚಿದೆ.

ಸ್ಟೀವ್ ಸ್ಮಿತ್: ಆಸ್ಟ್ರೇಲಿಯಾದ ಅತ್ಯಂತ ವಿಶ್ವಾಸಾರ್ಹ ಬ್ಯಾಟರ್‌ಗಳಲ್ಲಿ ಒಬ್ಬರಾದ ಸ್ಟೀವ್ ಸ್ಮಿತ್ ಅವರು ಆಕರ್ಷಕ ಫಾರ್ಮ್‌ನಲ್ಲಿದ್ದಾರೆ. ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿನ ಸರಣಿಯಲ್ಲಿ ಅವರು ನಾಲ್ಕು ಇನ್ನಿಂಗ್ಸ್‌ಗಳಲ್ಲಿ 231 ರನ್ ಗಳಿಸಿದ್ದರು. ಭಾರತೀಯ ಬೌಲರ್​ಗಳನ್ನು ಸ್ಮಿತ್​ ಕಾಡುವುದರಲ್ಲಿ ಅನುಮಾನ ಇಲ್ಲ. ಆಡಿರುವ 92 ಪಂದ್ಯಗಳಲ್ಲಿ 8,647 ರನ್ ಗಳಿಸಿದ್ದು 60.9 ಸರಾಸರಿಯನ್ನು ಹೊಂದಿದ್ದಾರೆ. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 750 ಕ್ಕೂ ಹೆಚ್ಚು ರನ್ ಗಳಿಸಿದ ಎರಡೂ ಕಡೆಯ ಏಕೈಕ ಬ್ಯಾಟರ್ ಆಗಿದ್ದಾರೆ. 2014-15 ರಲ್ಲಿ ಸ್ಮಿತ್ 128.16 ಸರಾಸರಿಯಲ್ಲಿ ಬ್ಯಾಟ್​ ಬೀಸಿ 8 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಶತಕ ಗಳಿಸಿ ಒಟ್ಟು ಸರಣಿಯಲ್ಲಿ 769 ರನ್ ದಾಖಲಿಸಿದ್ದರು.

ನಾಥನ್ ಲಿಯಾನ್: ಸೀಸನ್ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಅವರು 41 ಇನ್ನಿಂಗ್ಸ್‌ಗಳಲ್ಲಿ 34.75 ಸರಾಸರಿಯಲ್ಲಿ 94 ವಿಕೆಟ್‌ಗಳೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಪ್ರಮುಖ ವಿಕೆಟ್‌-ಟೇಕರ್‌ಗಳ ಅಗ್ರ ಐದು ಪಟ್ಟಿಯಲ್ಲಿ ಸ್ಥಾನ ಪಡೆದ ಮೂರನೇ ಬೌಲರ್ ಮತ್ತು ಏಕೈಕ ಆಸ್ಟ್ರೇಲಿಯನ್ ಆಗಿದ್ದಾರೆ. 2017 ರಲ್ಲಿ ಬೆಂಗಳೂರಿನ ಟರ್ನಿಂಗ್ ಟ್ರ್ಯಾಕ್‌ನಲ್ಲಿ 50 ರನ್​ ಕೊಟ್ಟು ಎಂಟು ವಿಕೆಟ್ ಕಬಳಿಸಿದ್ದರು. ಅಗ್ರ ಕ್ರಮಾಂಕದ ಬ್ಯಾಟರ್​ಗಳನ್ನು ಕಾಡುವ ಲಿಯಾನ್​ 115 ಪಂದ್ಯಗಳಲ್ಲಿ 460 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಯನ್ನು ಏಳು ಬಾರಿ ಔಟ್ ಮಾಡಿದ್ದು, ಸರಣಿಯುದ್ದಕ್ಕೂ ಸ್ಪಿನ್​ ಪಿಚ್​ಗಳಲ್ಲಿ ಭಾರತಿಯರನ್ನು ಕಾಡುವುದರಲ್ಲಿ ಅನುಮಾನ ಇಲ್ಲ.

ಇದನ್ನೂ ಓದಿ: ಭಾರತೀಯ ಸ್ಪಿನ್ನರ್​ನಿಂದ ಡಿಫೆನ್ಸ್​ ಕಲಿಯುತ್ತಿರುವ ಕಾಂಗರೂ ಪಡೆ: ಯಾರೀತ? ಅಶ್ವಿನ್​ ಹೋಲುವ ಬೌಲರ್​..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.