ETV Bharat / sports

2ನೇ ಇನ್ನಿಂಗ್ಸ್​ನಲ್ಲಿ ವಿಕೆಟ್ ನಷ್ಟವಿಲ್ಲದೆ 69: 332 ರನ್​ಗಳ ಬೃಹತ್ ಮುನ್ನಡೆ ಸಾಧಿಸಿದ ಭಾರತ

author img

By

Published : Dec 4, 2021, 6:00 PM IST

India vs New Zealand 2nd test
ಭಾರತ ನ್ಯೂಜಿಲ್ಯಾಂಡ್ 2ನೇ ಟೆಸ್ಟ್​

263 ರನ್​ಗಳ ಮೊದಲ ಇನ್ನಿಂಗ್ಸ್​ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ನಲ್ಲಿ ಆರಂಭಿಸಿದ ಭಾರತ ವಿಕೆಟ್ ನಷ್ಟವಿಲ್ಲದೆ 69 ರನ್​ಗಳಿಸುವ ಮೂಲಕ ಆರಂಭ ಪಡೆದುಕೊಂಡು ಒಟ್ಟಾರೆ 332 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಮಯಾಂಕ್ ಅಜೇಯ38 ಮತ್ತು ಪೂಜಾರ ಅಜೇಯ 29 ರನ್​ಗಳಿಸಿದ್ದಾರೆ.

ಮುಂಬೈ: ನ್ಯೂಜಿಲ್ಯಾಂಡ್​ ತಂಡವನ್ನು ಕೇವಲ 62 ರನ್​ಗಳಿಗೆ ಆಲೌಟ್ ಮಾಡಿರುವ ಭಾರತ 2ನೇ ಇನ್ನಿಂಗ್ಸ್​ನಲ್ಲಿ ವಿಕೆಟ್​ ನಷ್ಟವಿಲ್ಲದೆ 69 ರನ್​ಗಳಿಸುವ ಮೂಲಕ ಅತ್ಯುತ್ತಮ ಆರಂಭ ಪಡೆದಿದೆ. ಮೊದಲ ಇನ್ನಿಂಗ್ಸ್​ನ 263 ರನ್​ಗ​ಳ ಮುನ್ನಡೆ ಸೇರಿದಂತೆ ಒಟ್ಟಾರೆ 332 ರನ್​ಗಳ ಬೃಹತ್ ಮುನ್ನಡೆ ಸಾಧಿಸಿದೆ.

ಮೊದಲ ದಿನ 4 ವಿಕೆಟ್​ ಕಳೆದುಕೊಂಡು 221 ರನ್​ಗಳಿಸಿದ್ದ ಭಾರತ ಶನಿವಾರ ಆ ಮೊತ್ತವನ್ನು 325ಕ್ಕೇರಿಸಿ ಆಲೌಟ್ ಆಯಿತು. ಮಯಾಂಕ್ ಅಗರ್​ವಾಲ್ 150 ಮತ್ತು ಅಕ್ಷರ್ ಪಟೇಲ್ 52 ರನ್​ಗಳಿಸಿದ್ದರು. ನ್ಯೂಜಿಲ್ಯಾಂಡ್​ ಪರ ಭಾರತೀಯ ಮೂಲದ ಅಜಾಜ್ ಪಟೇಲ್ ವಿಶ್ವದಾಖಲೆಯ 10 ವಿಕೆಟ್ ಪಡೆದಿದ್ದರು.

ಭಾರತದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಕಿವೀಸ್ ಆಲೌಟ್​

325 ರನ್​ಗಳನ್ನು ಹಿಂಬಾಲಿಸಿ ನ್ಯೂಜಿಲ್ಯಾಂಡ್ ತಂಡ ಕೇವಲ 28.1 ಓವರ್​ಗಳಲ್ಲಿ 62 ರನ್​ಗಳಿಗೆ ಸರ್ವಪತನಕಂಡಿತು. ಈ ಮೂಲಕ ಭಾರತದ ನೆಲದಲ್ಲಿ ಅತ್ಯಂತ ಕಡಿಮೆ ಮೊತ್ತ ದಾಖಲಿಸಿತು. ಕೈಲ್ ಜೇಮಿಸನ್(17) ಮತ್ತು ಟಾಮ್​ ಲೇಥಮ್(10) ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು.

ಡೇರಿಲ್ ಮಿಚೆಲ್(8), ವಿಲ್ ಯಂಗ್(4) ರಾಸ್ ಟೇಲರ್​(1), ರಚಿನ್ ರವೀಂದ್ರ(4), ಹೆನ್ರಿ ನಿಕೋಲ್ಸ್​(7), ಟಾಮ್ ಬ್ಲೆಂಡೆಲ್​(8), ಸೌಥಿ(0)ಸಮರ್​ವಿಲ್(0) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

ಭಾರತದ ಪರ ಮೊಹಮ್ಮದ್ ಸಿರಾಜ್​ 19ಕ್ಕೆ 3, ರವಿಚಂದ್ರನ್ ಅಶ್ವಿನ್ 8ಕ್ಕೆ4, ಅಕ್ಷರ್ ಪಟೇಲ್ 14ಕ್ಕೆ2 ಮತ್ತು ಜಯಂತ್ ಯಾದವ್​ 13ಕ್ಕೆ1 ವಿಕೆಟ್​ ಪಡೆದರು.

ಎರಡನೇ ಇನ್ನಿಂಗ್ಸ್​ನಲ್ಲಿ ವಿಕೆಟ್ ನಷ್ಟವಿಲ್ಲದೆ 69:

263 ರನ್​ಗಳ ಮೊದಲ ಇನ್ನಿಂಗ್ಸ್​ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ನಲ್ಲಿ ಆರಂಭಿಸಿದ ಭಾರತ ವಿಕೆಟ್ ನಷ್ಟವಿಲ್ಲದೆ 69 ರನ್​ಗಳಿಸುವ ಮೂಲಕ ಆರಂಭ ಪಡೆದುಕೊಂಡು ಒಟ್ಟಾರೆ 332 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಮಯಾಂಕ್ ಅಜೇಯ38 ಮತ್ತು ಪೂಜಾರ ಅಜೇಯ 29 ರನ್​ಗಳಿಸಿದ್ದಾರೆ.

ಇದನ್ನೂ ಓದಿ:ಗಿಲ್ ಯಾವುದೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಬಲ್ಲ ತಂತ್ರಗಾರಿಕೆ ಹೊಂದಿದ್ದಾರೆ: ತೆಂಡೂಲ್ಕರ್ ಪ್ರಶಂಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.