ETV Bharat / sports

ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್: ಚೆನ್ನೈ ತಂಡ ಖರೀದಿಸಿದ ನಟ ಸೂರ್ಯ

author img

By ETV Bharat Karnataka Team

Published : Dec 27, 2023, 10:22 PM IST

Indian Street Premier League: ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನ (ಐಎಸ್‌ಪಿಎಲ್) ಚೆನ್ನೈ ತಂಡವನ್ನು ನಟ ಸೂರ್ಯ ಖರೀದಿಸಿದ್ದಾರೆ.

Actor Suriya
ನಟ ಸೂರ್ಯ

ಚೆನ್ನೈ(ತಮಿಳುನಾಡು): ವಿಶ್ವಾದ್ಯಂತ ಮೆಚ್ಚುಗೆ ಪಡೆದಿರುವ ಕ್ರೀಡೆಗಳಲ್ಲಿ ಕ್ರಿಕೆಟ್​ ಒಂದು. ಟೆಸ್ಟ್​ ಮಾದರಿಯಿಂದ ಆರಂಭವಾದ ಈ ಕ್ರೀಡೆ ಜನಪ್ರಿಯತೆ ಗಳಿಸುತ್ತಾ ಏಕದಿನ ಮತ್ತು ಟಿ20 ಮಾದರಿಯಲ್ಲೂ ಪರಿಚಯವಾಯಿತು. ಈಗ ಏಕದಿನ, ಟಿ20 ಮಾದರಿಗಳ ಕ್ರೇಜ್​ ಕೂಡಾ ಕಡಿಮೆ ಆಗಿದೆ. ಹೀಗಿರುವಾಗ ಕ್ರಿಕೆಟ್​ ಇನ್ನಷ್ಟೂ ಚುಟುಕಾಗುತ್ತಿದೆ. 100 ಎಸೆತ​ ಮಾದರಿಯ ದಿ ಹಂಡ್ರೆಡ್, ಟಿ10 ಸರಣಿಗಳು ಜನಪ್ರಿಯತೆ ಗಳಿಸುತ್ತಿವೆ. ರಾಷ್ಟ್ರೀಯ ದ್ವಿಪಕ್ಷೀಯ ಸರಣಿಗಳಿಗಿಂತ ಲೀಗ್​ ಕ್ರಿಕೆಟ್​ಗಳೇ ಮಹತ್ವ ಪಡೆದುಕೊಳ್ಳುತ್ತಿವೆ. ಐಪಿಎಲ್​ ಖ್ಯಾತಿಯ ನಂತರ ಈಗ ಭಾರತದಲ್ಲಿ ಐಎಸ್‌ಪಿಎಲ್ ಎಂಬ ಟೆನಿಸ್​ ಬಾಲ್​ ಲೀಗ್​ ಕ್ರಿಕೆಟ್ ಶುರುವಾಗುತ್ತಿದೆ.

ಮುಂದಿನ ವರ್ಷದಿಂದ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಇದು ಟೆನಿಸ್​ ಬಾಲ್​ನಲ್ಲಿ ಆಡುವ ಕ್ರಿಕೆಟ್​ ಆಗಿದ್ದು, ಚೊಚ್ಚಲ ಆವೃತ್ತಿಯಲ್ಲಿ 6 ತಂಡಗಳು ಭಾಗವಹಿಸಲಿವೆ. ಚೆನ್ನೈ, ಹೈದರಾಬಾದ್, ಬೆಂಗಳೂರು, ಮುಂಬೈ, ಕೋಲ್ಕತ್ತಾ ಮತ್ತು ಶ್ರೀನಗರದ ಎಂಬ ತಂಡಗಳಿರಲಿವೆ.

ಐಎಸ್‌ಪಿಎಲ್‌ಗೆ ಸಿನಿ ತಾರೆಯರ ಬೆಂಬಲ: ಟೆನಿಸ್​ ಬಾಲ್​ ಕ್ರಿಕೆಟ್​ಗೆ ಸಿನಿಮಾ ಸ್ಟಾರ್​ಗಳ ಬೆಂಬಲ ವ್ಯಕ್ತವಾಗಿದ್ದು, ತಾರೆಯರು ಒಂದೊಂದು ತಂಡ ಖರೀದಿಸಿದ್ದಾರೆ. ನಟ ಅಮಿತಾಬ್ ಬಚ್ಚನ್ ಮುಂಬೈ, ಬಾಲಿವುಡ್ ನಟ ಹೃತಿಕ್ ರೋಷನ್ ಬೆಂಗಳೂರು, ಅಕ್ಷಯ್ ಕುಮಾರ್ ಶ್ರೀನಗರ ಮತ್ತು ತೆಲುಗು ನಟ ರಾಮ್ ಚರಣ್ ಹೈದರಾಬಾದ್ ತಂಡವನ್ನು ಖರೀದಿಸಿದ್ದಾರೆ.

ಚೆನ್ನೈ ತಂಡ ಖರೀದಿಸಿದ ಸೂರ್ಯ: ಚೆನ್ನೈ ತಂಡವನ್ನು ಖರೀದಿಸಿರುವುದಾಗಿ ನಟ ಸೂರ್ಯ ತಮ್ಮ ಎಕ್ಸ್​ ಆ್ಯಪ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪೋಸ್ಟ್​ಗೆ, "ವಣಕ್ಕಂ​ ಚೆನ್ನೈ! ISPLT10ರಲ್ಲಿ ನಮ್ಮ ಚೆನ್ನೈ ತಂಡದ ಮಾಲೀಕತ್ವವನ್ನು ಘೋಷಿಸಲು ಸಂತಸವಾಗುತ್ತಿದೆ. ಎಲ್ಲಾ ಕ್ರಿಕೆಟ್ ಉತ್ಸಾಹಿಗಳು ಒಟ್ಟಾಗಿ ಕ್ರೀಡಾಸ್ಫೂರ್ತಿಯೊಂದಿಗೆ ಶ್ರೇಷ್ಠ ಕ್ರಿಕೆಟ್ ಪರಂಪರೆಯನ್ನು ರಚಿಸೋಣ" ಎಂದು ಬರೆದಿದ್ದಾರೆ.

ಕೋಲ್ಕತ್ತಾ ತಂಡವನ್ನು ಯಾರು ಖರೀದಿಸಲಿದ್ದಾರೆ ಎಂಬ ಕುತೂಹಲವಿದೆ. ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಮಾಲೀಕತ್ವ ಹೊಂದಿರುವ ಶಾರುಖ್​ ಖಾನ್​ ಐಎಸ್‌ಪಿಎಲ್ ಪ್ರವೇಶಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಹೇಗಿರಲಿದೆ ಐಎಸ್‌ಪಿಎಲ್?: ಐಎಸ್‌ಪಿಎಲ್​ನಲ್ಲಿ ಹೇಳಿರುವಂತೆ ಸ್ಟ್ರೀಟ್ ಕ್ರಿಕೆಟ್​ನಲ್ಲಿ ಬಳಸಲಾಗುವ ಟೆನಿಸ್​ ಬಾಲ್​ ಬಳಸಲಾಗುತ್ತದೆ. ಚೊಚ್ಚಲ ಆವೃತ್ತಿ 2024ರ ಮಾರ್ಚ್ 2 ರಿಂದ 9 ರವರೆಗೆ ನಡೆಯಲಿದೆ. ಟಿ10 ಮಾದರಿಯ ಪಂದ್ಯ ಇದಾಗಿದ್ದು, 6 ತಂಡಗಳ ನಡುವೆ 19 ಪಂದ್ಯಗಳು ನಡೆಯಲಿದೆ.

ಇದನ್ನೂ ಓದಿ: ನನ್ನ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆ: ವಿನೇಶ್ ಫೋಗಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.