ETV Bharat / sports

ನ್ಯೂಜಿಲ್ಯಾಂಡ್​​-ಇಂಗ್ಲೆಂಡ್ ಮೊದಲ ಟೆಸ್ಟ್: ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಲಿಯಮ್ಸನ್​​ ಪಡೆ

author img

By

Published : Jun 2, 2021, 5:39 PM IST

Updated : Jun 2, 2021, 5:50 PM IST

ಇಂಗ್ಲೆಂಡ್ ತಂಡಕ್ಕೆ ಗಾಯದ ಸಮಸ್ಯೆ ತಲೆದೂರಿದ್ದು, ಆಲ್​ರೌಂಡರ್ ಬೆನ್​ ಸ್ಟೋಕ್ಸ್​ ಅಲಭ್ಯವಾಗಿದ್ದಾರೆ. ಆ್ಯಂಡರ್ಸ್​​ನ್, ಬ್ರಾಡ್​​, ಮಾರ್ಕ್​ವುಡ್​, ರಾಬಿನ್​ಸನ್ ತಂಡದಲ್ಲಿ ಸ್ಥಾನಗಳಿಸಿದ್ದಾರೆ.

ನ್ಯೂಜಿಲೆಂಡ್​-ಇಂಗ್ಲೆಂಡ್ ಮೊದಲ ಟೆಸ್ಟ್
ನ್ಯೂಜಿಲೆಂಡ್​-ಇಂಗ್ಲೆಂಡ್ ಮೊದಲ ಟೆಸ್ಟ್

ಲಂಡನ್​​: ಕೋವಿಡ್ ಬಳಿಕ ನ್ಯೂಜಿಲ್ಯಾಂಡ್​ ತಂಡ ಇಂಗ್ಲೆಂಡ್ ನೆಲದಲ್ಲಿ ಎರಡು ಟೆಸ್ಟ್ ಪಂದ್ಯ ಆಡುತ್ತಿದ್ದು, ಇಂದು ಲಾರ್ಡ್ಸ್​ ಮೈದಾನದಲ್ಲಿ ಮೊದಲ ಟೆಸ್ಟ್ ನಡೆಯಲಿದೆ.

ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಕಿವೀಸ್ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ. ನ್ಯೂಜಿಲ್ಯಾಂಡ್​ ಪರ ಡೆವೋನ್ ಕಾನ್ವೆ ಮೊದಲ ಟೆಸ್ಟ್ ಪಂದ್ಯ ಆಡುತ್ತಿದ್ದು, ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

ಈ ಸರಣಿಯನ್ನ ನ್ಯೂಜಿಲ್ಯಾಂಡ್ ​ ಭಾರತದ ವಿರುದ್ಧದ ಟೆಸ್ಟ್ ಚಾಂಪಿಯನ್​​ಶಿಪ್​​​ಗೂ ಮುನ್ನಾ ತಯಾರಿ ಪಂದ್ಯವಾಡುತ್ತಿದೆ. ಇಂಗ್ಲೆಂಡ್ ತಂಡಕ್ಕೆ ಗಾಯದ ಸಮಸ್ಯೆ ತಲೆದೂರಿದ್ದು, ಆಲ್​ರೌಂಡರ್ ಬೆನ್​ ಸ್ಟೋಕ್ಸ್​ ಅಲಭ್ಯವಾಗಿದ್ದಾರೆ. ಆ್ಯಂಡರ್ಸ್​​ನ್, ಬ್ರಾಡ್​​, ಮಾರ್ಕ್​ವುಡ್​, ರಾಬಿನ್​ಸನ್ ತಂಡದಲ್ಲಿ ಸ್ಥಾನಗಳಿಸಿದ್ದಾರೆ.

ವಿಕೆಟ್ ಕೀಪರ್ ಜೇಮ್ಸ್ ಬ್ರೇಸಿ ಮೊದಲ ಟೆಸ್ಟ್ ಕ್ಯಾಪ್​ ಧರಿಸಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇಂಗ್ಲೆಂಡ್ ತಂಡ ಅನುಭವಿಗಳಿಂದ ತುಂಬಿದ್ದು, ಕುಕ್​ ಹಾಗೂ ಆ್ಯಂಡರ್​​​ಸನ್ ಅತೀ ಹೆಚ್ಚು ಟೆಸ್ಟ್ ಪಂದ್ಯ ಆಡಿದ ಆಟಗಾರರಾಗಿದ್ದಾರೆ.

ಆಟಗಾರರ ವಿವರ

ಇಂಗ್ಲೆಂಡ್: ರೋರಿ ಬರ್ನ್ಸ್, ಡೊಮ್ ಸಿಬ್ಲಿ, ಜಾಕ್​​​​​ ಕ್ರಾಲೆ, ಜೋ ರೂಟ್, ಆಲ್ಲಿ ಪೋಪ್, ಡಾನ್ ಲಾರೆನ್ಸ್, ಜೇಮ್ಸ್ ಬ್ರೇಸಿ, ಆಲ್ಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಮಾರ್ಕ್​​​ವುಡ್, ಜೇಮ್ಸ್ ಆಂಡರ್ಸನ್.

ನ್ಯೂಜಿಲೆಂಡ್: ಟಾಮ್ ಲಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿ.ಜೆ.ವಾಟ್ಲಿಂಗ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಕೈಲ್ ಜಾಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್.

Last Updated : Jun 2, 2021, 5:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.