ETV Bharat / sports

ತವರಿಗೆ ಆಗಮಿಸಿದ ಚಿನ್ನದ ಹುಡುಗಿ... ಪಿ.ವಿ.ಸಿಂಧುಗೆ ಭರ್ಜರಿ ಸ್ವಾಗತ

author img

By

Published : Aug 27, 2019, 2:37 AM IST

ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಜಯಗಳಿಸಿದ್ದ ಪಿ.ವಿ.ಸಿಂಧು ತವರಿಗೆ ವಾಪಸಾಗಿದ್ದು, ಭರ್ಜರಿಯಾಗಿ ಸ್ವಾಗತ ಮಾಡಲಾಯಿತು.

ಪಿ.ವಿ.ಸಿಂಧುಗೆ ಸಿಕ್ತು ಭರ್ಜರಿ ಸ್ವಾಗತ

ನವದೆಹಲಿ: ಬ್ಯಾಡ್ಮಿಂಟನ್‌ ವರ್ಲ್ಡ್​ ಚಾಂಪಿಯನ್​ಶಿಪ್​​​ ಫೈನಲ್​​ನಲ್ಲಿ ಜಪಾನ್​​ನ ನೊಜೊಮಿ ಒಕುಹಾರ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಚಿನ್ನಕ್ಕೆ ಮುತ್ತಿಕ್ಕಿದ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಭಾರತಕ್ಕೆ ಆಗಮಿಸಿದ್ದಾರೆ.

  • #WATCH: #PVSindhu after becoming the first Indian shuttler to win BWF World Championship: I wish I'll get many more medals for this country. I would like to thank all my fans. It is because of their blessings & love that I am here today. pic.twitter.com/A4mJCvgJ0A

    — ANI (@ANI) August 26, 2019 " class="align-text-top noRightClick twitterSection" data=" ">

ಸ್ವಿಜರ್ಲೆಂಡ್​ನಲ್ಲಿ ನಡೆದ ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಜಯಗಳಿಸಿದ್ದ ಪಿ.ವಿ.ಸಿಂಧು ತಡರಾತ್ರಿ ತವರಿಗೆ ವಾಪಸಾಗಿದ್ದಾರೆ. ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಂಧು ಅವರನ್ನ ಭರ್ಜರಿಯಾಗಿ ಸ್ವಾಗತಿಸಲಾಯಿತು.

ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಂತರ ಈ ದೇಶಕ್ಕಾಗಿ ಇನ್ನೂ ಹೆಚ್ಚಿನ ಪದಕಗಳನ್ನು ಗೆಲ್ಲಬೇಕೆಂದು ಬಯಸಿದ್ದೇನೆ. ನನ್ನ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರ ಆಶೀರ್ವಾದ ಮತ್ತು ಪ್ರೀತಿಯಿಂದಾಗಿ ನಾನು ಇಲ್ಲಿದ್ದೇನೆ ಎಂದರು.

Intro:Body:

gandhi


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.