ETV Bharat / sports

ಸ್ವಿಸ್​ ಓಪನ್​ ಕ್ವಾರ್ಟರ್​ ಫೈನಲ್ ಪ್ರವೇಶಿಸಿದ ಸಿಂಧು, ಶ್ರೀಕಾಂತ, ಜಯರಾಮ್​

author img

By

Published : Mar 4, 2021, 9:01 PM IST

ಗುರುವಾರ ನಡೆದ ವುಮೆನ್ಸ್​ ಸಿಂಗಲ್ಸ್​ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು, ಅಮೆರಿಕಾದ ಐರಿಸ್​ ವಾಂಗ್ ಅವರನ್ನು 21-13, 21-14 ಸೆಟ್‌ಗಳಲ್ಲಿ ಮಣಿಸಿದರು.

ಸ್ವಿಸ್​ ಓಪನ್​ ಕ್ವಾರ್ಟರ್​ ಫೈನಲ್
ಪಿವಿ ಸಿಂಧು- ಕಿಡಂಬಿ ಶ್ರೀಕಾಂತ್​

ಬಾಸಿಲ್​: ಭಾರತದ ಶಟ್ಲರ್​ಗಳಾದ ಪಿ.ವಿ.ಸಿಂಧು, ಕಿಡಂಬಿ ಶ್ರೀಕಾಂತ್ ಮತ್ತು ಅಜಯ್ ಜಯರಾಮ್​ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಸ್ವಿಸ್​ ಓಪನ್​ ಸೂಪರ್​ 300 ಬ್ಯಾಡ್ಮಿಂಟನ್​ ಟೂರ್ನಮೆಂಟ್​ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಪುರುಷರ ವಿಭಾಗದಲ್ಲಿ ಮಾಜಿ ನಂಬರ್ ಒನ್​ ಆಟಗಾರ ಶ್ರೀಕಾಂತ್​ 21-10, 14-21, 21-14ರಲ್ಲಿ ವಿಶ್ವದ 50 ನೇ ಶ್ರೇಯಾಂಕದ ಫ್ರಾನ್ಸ್​ನ ಥಾಮಸ್​ ರೌಕ್ಸೆಲ್​ ಅವರನ್ನು, ಜಯರಾಮ್​ ಟೂರ್ನಿಯಲ್ಲಿ 3ನೇ ಶ್ರೇಯಾಂಕ ಪಡೆದಿರುವ ಡೆನ್ಮಾರ್ಕ್​ನ ಡೇನ್​ ರಸ್ಮಸ್​ ಗೆಮ್ಕೆ ವಿರುದ್ಧ ಪ್ರಬಲ ಪೈಪೋಟಿ ನಡೆಸಿ 21-18, 17-21, 21-13ರಲ್ಲಿ ಗೆಲವು ಸಾಧಿಸಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದ್ದಾರೆ.

ಸಿಂಗಲ್ಸ್​ನಲ್ಲಷ್ಟೇ ಅಲ್ಲದೆ, ಮಿಶ್ರ ಡಬಲ್ಸ್​ನಲ್ಲಿ ಸಾತ್ರಿಕ್ ಸಾಯಿರಾಜ್​ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಇಂಡೋನೇಷಿಯಾದ ರಿನೊವ್ ​ರಿವಾಲ್ಡಿ - ಪಿತಾ ಹನಿಂಗ್ತ್ಯಾಸ್​ ಮೆಂತಾರಿ ವಿರುದ್ಧ 21-18, 21-16ರಲ್ಲಿ ಗೆಲುವು ಸಾಧಿಸಿದರು.

ಇದನ್ನೂ ಓದಿ: ಅರ್ಜೆಂಟೀನಾ ಓಪನ್; 2ನೇ ಶ್ರೇಯಾಂಕದ ಗ್ಯಾರಿಂಟೋರನ್ನು ಮಣಿಸಿದ ಭಾರತದ ಸುಮಿತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.