ETV Bharat / sports

ಟರ್ಕಿಯ ಯಿಗಿಟ್ ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದ ಸಿಂಧು

author img

By

Published : Mar 4, 2021, 1:10 PM IST

ಅಂತಾರಾಷ್ಟ್ರೀಯ ಖ್ಯಾತಿಯ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಸ್ವಿಸ್ ಓಪನ್ ಪಂದ್ಯಾವಳಿಯಲ್ಲಿ ಟರ್ಕಿಯ ನೆಸ್ಲಿಹಾನ್ ಯಿಗಿಟ್ ಅವರನ್ನು ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿದರು.

ಸಿಂಧೂ
Sindhu

ಬಾಸೆಲ್ [ಸ್ವಿಟ್ಜರ್ಲೆಂಡ್]: ಅಂತಾರಾಷ್ಟ್ರೀಯ ಖ್ಯಾತಿಯ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಸ್ವಿಸ್ ಓಪನ್ ಪಂದ್ಯಾವಳಿಯಲ್ಲಿ ಟರ್ಕಿಯ ನೆಸ್ಲಿಹಾನ್ ಯಿಗಿಟ್ ಅವರನ್ನು ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿದರು.

ಯಿಗಿಟ್​ ವಿರುದ್ಧ 21-16, 21-19 ಅಂತರದಿಂದ ಸಿಂಧು ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಮುನ್ನಡೆ ಪಡೆದರು. ಮೊದಲ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಸಿಂಧು, 10-5 ಮುನ್ನಡೆ ಸಾಧಿಸಿದರು. ಆದರೆ ಪ್ರತಿಸ್ಫರ್ಧಿ ಆಟಗಾರ್ತಿ ಯಿಗಿಟ್ ಕೊನೆಯಲ್ಲಿ 11-11 ಅಂಕಗಳ ಸಮ ಬಲ ಪಡೆದರು.

ಮತ್ತೆ ಅದೇ ಜೋಶ್​ನಿಂದ ಆಟವಾಡಿದ ಸಿಂಧೂ ಮನ್ನಡೆ ಕಾಯ್ದುಕೊಂಡು ಮೊದಲ ಪಂದ್ಯದಲ್ಲಿ 21-16 ಸೆಟ್​ಗಳಿಂದ ಮೇಲುಗೈ ಸಾಧಿಸಿದರು. ಎರಡನೇ ಸುತ್ತಿನಲ್ಲಿ ಸಿಂಧುಗೆ ಯಿಗಿಟ್ ಕಠಿಣ ಸ್ಪರ್ಧೆ ನೀಡಿದರಾದರೂ ಅಂತಿಮವಾಗಿ ಸಿಂಧು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾದರು.

ಓದಿ: ಐಪಿಎಲ್​ ತಯಾರಿ ನಡೆಸಲು ಚೆನ್ನೈಗೆ ಬಂದಿಳಿದ 'ಮಾಹಿ'

ಇದಕ್ಕೂ ಹಿಂದಿನ ದಿನ ಪುರುಷರ ಡಬಲ್ಸ್​ನಲ್ಲಿ ಭಾತರದ ಜೋಡಿ ಸತ್ವಿಕ್ ಸೈರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಸ್ವಿಸ್ ಓಪನ್‌ನ ಮೊದಲ ಸುತ್ತಿನಲ್ಲಿ ಸ್ಕಾಟಿಷ್ ಜೋಡಿ ಕ್ರಿಸ್ಟೋಫರ್ ಗ್ರಿಮ್ಲಿ ಮತ್ತು ಮ್ಯಾಥ್ಯೂ ಗ್ರಿಮ್ಲಿಯನ್ನು 21-18, 19-21, 21-16 ಸೆಟ್​ಗಳ ಅಂತರದಲ್ಲಿ ಸೋಲಿಸಿ ಗೆಲುವು ಸಾಧಿಸಿದ್ದರು.

ಸ್ವಿಸ್ ಓಪನ್‌ನ ಮೊದಲ ಸುತ್ತಿನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಸಮೀರ್ ವರ್ಮಾ ಅವರನ್ನು ಸೋಲಿಸಿದರು. ಶ್ರೀಕಾಂತ್ ವರ್ಮಾ ವಿರುದ್ಧ 18-21, 21-18, 21-11ರಿಂದ ಜಯ ಸಾಧಿಸಿ ಪಂದ್ಯಾವಳಿಯ ಮುಂದಿನ ಸುತ್ತಿಗೆ ಮುನ್ನಡೆ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.