ETV Bharat / sports

ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 23ನೇ ಸ್ಥಾನ ಪಡೆದ 19 ವರ್ಷದ ಲಕ್ಷ್ಯ ಸೇನ್​!

author img

By

Published : Mar 24, 2021, 8:46 PM IST

ಮಹಿಳೆಯರ ಶ್ರೇಯಾಂಕದಲ್ಲಿ ವಿಶ್ವ ಚಾಂಪಿಯನ್​ ಪಿವಿ ಸಿಂಧು 7ನೇ ಶ್ರೇಯಾಂಕದಲ್ಲಿದ್ದರೆ, ಸೈನಾ ನೆಹ್ವಾಲ್​ 20ನೇ ಸ್ಥಾನದಲ್ಲಿದ್ದಾರೆ. ಡಬಲ್ಸ್​ನಲ್ಲಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಜೋಡಿ 10ರಲ್ಲಿದ್ದರೆ, ಮಿಶ್ರ ಡಬಲ್ಸ್​ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್​ 20ನೇ ಶ್ರೇಯಾಂಕ ಪಡೆದಿದ್ದಾರೆ..

ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕ
ಲಕ್ಷ್ಯ ಸೇನ್

ಹೈದರಾಬಾದ್ ​: ಭಾರತ ತಂಡದ 19 ವರ್ಷದ ಯುವ ಶಟ್ಲರ್​ ಲಕ್ಷ್ಯ ಸೇನ್​ ಬಿಡಬ್ಲ್ಯೂಎಫ್​ ಶ್ರೇಯಾಂಕದಲ್ಲಿ ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಆಲ್​ ಇಂಗ್ಲೆಂಡ್​ ಓಪನ್​ನಲ್ಲಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದ್ದ ಲಕ್ಷ್ಯ ಸೇನ್ 5 ಸ್ಥಾನ ಮೇಲೇರಿ 23ನೇ ರ್ಯಾಂಕ್​ನಲ್ಲಿದ್ದಾರೆ. ಸೀನಿಯರ್​ ಶಟ್ಲರ್​ಗಳಾದ ಪರುಳ್ಳಿ ಕಶ್ಯಪ್(32), ಹೆಚ್​ಎಸ್​ ಪ್ರಣಯ್​(31) ಮತ್ತು ಸಮೀರ್​ ವರ್ಮಾ(34)ಗಿಂತಲೂ ಸೇನ್​ ಶ್ರೇಷ್ಠ ಶ್ರೇಯಾಂಕ ಪಡೆದಿರುವುದು ಗಮನಾರ್ಹ ಸಂಗತಿ.

  • 19 yr old Lakshya Sen moves to Career Best World No. 23 (🔼 5) in latest BWF Singles rankings.
    He is India's No. 3 shuttler now after Srikanth & Sai Praneeth. pic.twitter.com/3gKzbVqT4V

    — India_AllSports (@India_AllSports) March 24, 2021 " class="align-text-top noRightClick twitterSection" data=" ">

19 ವರ್ಷದ ಯುವ ಆಟಗಾರ ಪ್ರಸ್ತುತ ಭಾರತ 3ನೇ ಶ್ರೇಷ್ಠ ಶ್ರೇಯಾಂಕಿತ ಶಟ್ಲರ್​ ಎನಿಸಿದ್ದಾರೆ. ಮಾಜಿ ನಂಬರ್​ 1 ಆಟಗಾರ ಕಿಡಿಂಬಿ ಶ್ರೀಕಾಂತ್, ಸಾಯಿ ಪ್ರಣೀತ್​ ಕ್ರಮವಾಗಿ 14 ಮತ್ತು 15ನೇ ಸ್ಥಾನದಲ್ಲಿದ್ದಾರೆ.

ಮಹಿಳೆಯರ ಶ್ರೇಯಾಂಕದಲ್ಲಿ ವಿಶ್ವ ಚಾಂಪಿಯನ್​ ಪಿವಿ ಸಿಂಧು 7ನೇ ಶ್ರೇಯಾಂಕದಲ್ಲಿದ್ದರೆ, ಸೈನಾ ನೆಹ್ವಾಲ್​ 20ನೇ ಸ್ಥಾನದಲ್ಲಿದ್ದಾರೆ. ಡಬಲ್ಸ್​ನಲ್ಲಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಜೋಡಿ 10ರಲ್ಲಿದ್ದರೆ, ಮಿಶ್ರ ಡಬಲ್ಸ್​ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್​ 20ನೇ ಶ್ರೇಯಾಂಕ ಪಡೆದಿದ್ದಾರೆ.

ಇದನ್ನು ಓದಿ:ಪೃಥ್ವಿ ಶಾ ಮ್ಯಾಚ್​ ವಿನ್ನರ್, ಆದ್ರೆ ಗಿಲ್​ ತಂಡದಲ್ಲಿರುವುದರಿಂದ ಮತ್ತಷ್ಟು ದಿನ ಕಾಯಲೇಬೇಕು: ಲಕ್ಷ್ಮಣ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.